ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಮಹಾನಗರ ಪಾಲಿಕೆಗೆ ನಜೀರ್ ನೂತನ ಆಯುಕ್ತ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 14 : ಮಂಗಳೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಮಹಮ್ಮದ್ ನಜೀರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಮಹಮ್ಮದ್ ನಜೀರ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆಸ ಸಮಾರಂಭದಲ್ಲಿ ನಿರ್ಗಮಿತ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಅವರು ಮಹಮ್ಮದ್ ನಜೀರ್ ಅವರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮೇಯರ್ ಎಂ. ಹರಿನಾಥ್ ಉಪಸ್ಥಿತರಿದ್ದರು.[ಹುಬ್ಬಳ್ಳಿ ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿದ ಆಸ್ತಿ ತೆರಿಗೆ]

Mohammed Nazir takes charge as MCC commissioner

ಬಿಇ ( ಸಿವಿಲ್) ಪದವೀಧರರಾಗಿರುವ ನಜೀರ್ ಕೆಪಿಎಸ್‌ಸಿ ಮೂಲಕ ಸಾಂಖ್ಯಿಕ ಇಲಾಖೆಗೆ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಯಲ್ಲಿ ಯೋಜನಾಧಿಕಾರಿಯಾಗಿದ್ದ ಅವರು, ಬಳಿಕ ಅವರು ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಆಯುಕ್ತರಾಗಿದ್ದರು.[ಹರಿನಾಥ್ ಮಂಗಳೂರು ಪಾಲಿಕೆ ನೂತನ ಮೇಯರ್]

ಮುಡಾದಲ್ಲಿಯೂ ಪ್ರಭಾರ ಆಯುಕ್ತರಾಗಿ ನಜೀರ್ ಅವರು ಕರ್ತವ್ಯ ನಿರ್ವಹಿಸಲಿದ್ದು, ಒಂದೆರಡು ದಿನದಲ್ಲಿ ಮೂಡಕ್ಕೆ ನೂತನ ಆಯುಕ್ತರ ನೇಮಕವಾಗಲಿದೆ. ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಡಾ.ಎಚ್.ಎನ್. ಗೋಪಾಲಕೃಷ್ಣ ಅವರು ರಾಜ್ಯ ನಗರಾಭಿವೃದ್ದಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿದ್ದಾರೆ.[ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!]

ನೂತನ ಅಯುಕ್ತರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲಿಕೆ ಉಪಮೇಯರ್ ಸುಮಿತ್ರಾ ಕರಿಯ, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಮೊದಲಾದವರು ಪಾಲ್ಗೊಂಡಿದ್ದರು.

English summary
Mohammed Nazir took charge as the new Commissioner of Mangaluru City Corporation on Wednesday, July 13, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X