ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರ್ಗಿ ಹತ್ಯೆ, ಶ್ರೀರಾಮಸೇನೆ ಮಾಜಿ ಮುಖಂಡನ ವಿಚಾರಣೆ

By ವಿಕಾಸ್ ನಂಜಪ್ಪ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್, 03 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ಮಾಜಿ ಸಂಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕಲಬುರ್ಗಿ ಹತ್ಯೆಯನ್ನು ಸಮರ್ಥಿಸಿಕೊಂಡು ಸಂದೇಶಗಳನ್ನು ಹಾಕಿದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ.

ಶ್ರೀರಾಮಸೇನೆಯ ಮಾಜಿ ಸಂಚಾಲಕ ಪ್ರಸಾದ್ ಅತ್ತಾವರ್ ಅವರನ್ನು ಮಂಗಳೂರಿನಲ್ಲಿ ಗುರುವಾರ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿದ ಆರೋಪಿಗಳ ಜೊತೆ ಅತ್ತಾವರ್‌ಗೆ ನಂಟಿರಬಹುದು ಎಂಬ ಶಂಕೆಯ ಹಿನ್ನಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. [ಎಂ.ಎಂ.ಕಲಬುರ್ಗಿ ಹತ್ಯೆಗೆ ಯಾವ ನಂಟಿದೆ?]

mangaluru

ಎರಡು ದಿನಗಳ ಹಿಂದೆ ಬಂಟ್ವಾಳ ಪೊಲೀಸರು ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನು ಸಮರ್ಥಿಸಿಕೊಂಡು ಟ್ವಿಟ್ ಮಾಡಿದ್ದ ಭವಿತ್ ಶೆಟ್ಟಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆ ನಂತರ ಹತ್ಯೆಗೂ ಭವಿತ್‌ಗೂ ಯಾವುದೇ ನಂಟಿಲ್ಲ ಎಂಬದು ತಿಳಿದುಬಂದಿತ್ತು. [ಕಲಬುರ್ಗಿ ಹತ್ಯೆ ಟ್ವಿಟ್, ಯುವಕನ ಬಂಧನ]

ಹಿರಿಯ ಸಂಶೋಧಕ ಮತ್ತು ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಧಾರವಾಡದ ಕಲ್ಯಾಣ ನಗರದ ಅವರ ಮನೆಯಲ್ಲಿ ಆ.31ರ ಭಾನುವಾರ ದಾಳಿ ನಡೆದಿತ್ತು. ಸರ್ಕಾರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.

ಪ್ರಸಾದ್ ಅತ್ತಾವರ್ ಯಾರು? : ಎರಡು ವರ್ಷಗಳ ಕಾಲ ಭಜರಂಗದಳದ ಜಿಲ್ಲಾಧ್ಯಕ್ಷರಾಗಿ ಪ್ರಸಾದ್ ಕಾರ್ಯನಿರ್ವಹಿಸಿದ್ದರು. ಪ್ರಸಾದ್ ಶ್ರೀರಾಮಸೇನೆಯ ಮಾಜಿ ಸಂಚಾಲಕರಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ಪ್ರಮುಖ ಆರೋಪಿಯಾಗಿದ್ದ ಇವರು 2010ರಲ್ಲಿ ಒಂದು ವರ್ಷ ಜೈಲಿನಲ್ಲಿದ್ದರು.

English summary
Mangaluru City Crime Branch is questioning a Shri Ram Sena activist in connection with the murder of Professor M.M.Kalburgi. The activist Prasad Attavar had posted a message justifying the killing of MM Kalburgi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X