ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

9 ದಿನದ ಬಳಿಕ ಶರತ್ ಮನೆಗೆ ಭೇಟಿ ನೀಡಿದ ಸಚಿವ ರಮಾನಾಥ್ ರೈ

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ಜುಲೈ 12: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಸಜಿಪ ಗ್ರಾಮದಲ್ಲಿರುವ ಮನೆಗೆ ಉಸ್ತುವಾರಿ ಸಚಿವ ರಮಾನಾಥ್ ರೈ ಭೇಟಿ ನೀಡಿದರು.

ಕೊಡಗಿನಲ್ಲಿ ಸದಾನಂದ ಗೌಡ, ಕರಂದ್ಲಾಜೆ ಅಕ್ರಮ ಆಸ್ತಿ: ರಮಾನಾಥ ರೈಕೊಡಗಿನಲ್ಲಿ ಸದಾನಂದ ಗೌಡ, ಕರಂದ್ಲಾಜೆ ಅಕ್ರಮ ಆಸ್ತಿ: ರಮಾನಾಥ ರೈ

ಘಟನೆ ನಡೆದ ಒಂಬತ್ತು ದಿನಗಳ ಬಳಿಕ (ಬುಧವಾರ) ಸಜಿಪ ಗ್ರಾಮದಲ್ಲಿರುವ ಶರತ್ ಅವರ ಮನೆಗೆ ಭೇಟಿ ನೀಡಿದ ಸಚಿವರು, ಶರತ್ ತಂದೆ ತನಿಯಪ್ಪರಿಗೆ ಸಾಂತ್ವನ ಹೇಳಿದರು. ಮಾಧ್ಯಮದವರನ್ನು ಹೊರಗಿಟ್ಟು ಶರತ್ ಅವರ ಮನೆಗೆ ತೆರಳಿದ ಸಚಿವರು, ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Minister Ramanath Rai visits Sharat Madivala residence

ಇನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಸಜಿಪ ಗ್ರಾಮದಲ್ಲಿರುವ ಶರತ್ ಮಡಿವಾಳ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ್ದರು. ಮಾಧ್ಯಮ ಪ್ರತಿನಿದಿಗಳ ಜೊತೆಗೆ ಮಾತನಾಡಿದ್ದ ಅವರು, ರಮಾನಾಥ ರೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಶರತ್ ಮಡಿವಾಳ ಅವರ ಮನೆಗೆ ಹೋಗಿ ಕುಟುಂಬಕ್ಕೆ ಸಾಂತ್ವನ ಹೇಳುವ ಕಳಕಳಿ ಕೂಡ ಅವರಿಗೆ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಿದ್ದರು.

ಶರತ್ ಹತ್ಯೆಯಾದ ಒಂಬತ್ತು ದಿನಗಳ ಬಳಿಕ ಉಸ್ತುವಾರಿ ಸಚಿವ ರಮಾನಾಥ್ ರೈ ಕೊನೆಗೂ ಭೇಟಿ ನೀಡಿದ್ದಾರೆ.

English summary
Minister Ramanath Rai visits Sharat Madivala residence after 9 days of his death and consoles the family with the word of encouragement. He also promised that, will see that the culprits are caught soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X