ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯ ಅಭಿಜಿತ್ ಮೇಲೆ ಹಲ್ಲೆ ಖಂಡಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

|
Google Oneindia Kannada News

ಮಂಗಳೂರು, ಮೇ 22: ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಡಾ. ಅಭಿಜಿತ್ ಶೆಟ್ಟಿ ಅವರ ಮೇಲೆ ಹಲ್ಲೆ ನೆಡಸಿ ಅಪಹರಣ ನಡೆಸಿದ ಹಿನ್ನೆಲೆಯಲ್ಲಿ , ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಹಾಗೂ ಇತರ ವೈದ್ಯಕೀಯ ಸಂಘಟನೆಗಳ ಆಶ್ರಯದಲ್ಲಿ ವೈದ್ಯರು ಸೋಮವಾರ ಮಂಗಳೂರಿನ ನೆಹರು ಮೈದಾನದಲ್ಲಿ ಬೃಹತ್ ಮುಷ್ಕರ ನಡೆಸಿದರು.

ಬೆಳಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ಸಾವಿರಾರು ವೈದ್ಯರು, ವಿವಿಧ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನೆಹರೂ ಮೈದಾನದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಐಎಂಎ ಪದಾಧಿಕಾರಿಗಳು ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.[ದ.ಕನ್ನಡ, ಉಡುಪಿಯಲ್ಲಿ ನಾಳೆ (ಮೇ 22) ವೈದ್ಯಕೀಯ ಸೇವೆ ಬಂದ್]

ವೈದ್ಯರ ಮೇಲಿನ ಹಲ್ಲೆಗೆ ಖಂಡನೆ

ವೈದ್ಯರ ಮೇಲಿನ ಹಲ್ಲೆಗೆ ಖಂಡನೆ

ನಿಟ್ಟೆ ವಿವಿ ಉಪಕುಲಪತಿ ಡಾ. ಶಾಂತರಾಮ ಶೆಟ್ಟಿ ಮಾತನಾಡಿ, ''ಕೆಲವು ಸಮಯದಿಂದ ಅಲ್ಲಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆದಿವೆ. ಇದು ಮುಂದುವರಿಯಬಾರದು. ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಕಠಿಣ ಶಿಕ್ಷೆಯಾಗಲಿದೆ ಎಂಬ ಸಂದೇಶವನ್ನು ಈ ಪ್ರತಿಭಟನೆಯ ಮೂಲಕ ತೋರಿಸಿಕೊಡಬೇಕಾಗಿದೆ'' ಎಂದರು.

ಆನಂತರ, ತಮ್ಮ ಮಾತುಗಳನ್ನು ಮುಂದುವರಿಸಿದ ''ವೈದ್ಯರಿಗೆ ಜಾತಿ, ಮತ ಭೇದವಿಲ್ಲ. ರೋಗಿಗಳೆಲ್ಲರೂ ಸಮಾನರು. ಚಿಕಿತ್ಸೆಗೆ ಬಂದ ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣಲಾಗುತ್ತದೆ. ನ್ಯಾಯವಾದಿಗಳು, ಉಪನ್ಯಾಸಕರು, ಇಂಜಿನಿಯರ್, ಚಾರ್ಟಡ್ ಅಕೌಂಟೆಂಟ್ ಹೀಗೆ ಎಲ್ಲರಿಗೂ ಸೇವೆಯ ವಿಷಯದಲ್ಲಿ ಕಾಲದ ಮಿತಿ ಇದೆ. ಆದರೆ ವೈದ್ಯರ ಸೇವೆಗೆ ಕಾಲದ ಮಿತಿ ಇಲ್ಲ. ತಡರಾತ್ರಿಯಾದರೂ ಸರಿ, ರೋಗಿಯನ್ನು ಬದುಕುಳಿಸಲು ಸೇವೆಗೆ ಇಳಿಯುವ ವೈದ್ಯರ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯ'' ಎಂದರು.

ಶುಶ್ರೂಷಕಿ ಮೇಲೂ ಹಲ್ಲೆ ಖಂಡನೀಯ

ಶುಶ್ರೂಷಕಿ ಮೇಲೂ ಹಲ್ಲೆ ಖಂಡನೀಯ

ಅಸೋಸಿಯೇಶನ್‌ನ ಅಧ್ಯಕ್ಷ ಡಾ. ರಾಘವೇಂದ್ರ ಭಟ್‌ ಮಾತನಾಡಿ, ''ಮೇ 15ರಂದು ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧುಮೇಹ ಕಾಯಿಲೆ ರೋಗಿಯು ಮೃತಪಟ್ಟ ವಿಷಯವನ್ನು ರೋಗಿಗಳ ಸಂಬಂಧಿಕರಿಗೆ ತಿಳಿಸಲು ಹೋಗಿದ್ದ ವೈದ್ಯರನ್ನು ಎಳೆದು ಥಳಿಸಿ ಹಲ್ಲೆ ನಡೆಸಲಾಗಿದೆ. ರಕ್ಷಣೆಗೆ ಬಂದ ಶುಶ್ರೂಷಕಿಯ ಮೇಲೂ ಹಲ್ಲೆ ಮಾಡಿ, ವೈದ್ಯರನ್ನು ಅಪಹರಣ ಮಾಡಲಾಗಿದೆ. ಈ ರೀತಿ ಮುಂದುವರಿದರೆ ವೈದ್ಯರು ಸೇವೆ ಸಲ್ಲಿಸಲು ಸಾಧ್ಯವಿಲ್ಲ'' ಎಂದರು.

ವೈದ್ಯರಿಗೆ ವೈದ್ಯರೇ ಬೆಂಬಲ

ವೈದ್ಯರಿಗೆ ವೈದ್ಯರೇ ಬೆಂಬಲ

ಡಾ.ಸಚ್ಚಿದಾನಂದ, ಪಿಡಿಯಾಟ್ರಿಕ್ ಅಸೋಸಿಯೇಶನ್‌ನ ನಿಯೋಜಿತ ಅಧ್ಯಕ್ಷ ಡಾ.ಸಂತೋಷ್ ಸೋನ್ಸ್, ಇಂಡಿಯನ್ ಡೆಂಟಲ್ ಅಸೋಸಿಯೇಶನ್‌ನ ಡಾ.ಭರತ್ ಶೆಟ್ಟಿ, ಫ್ಯಾಮಿಲಿ ಡಾಕ್ಟರ್ಸ್‌ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಡಾ. ಜಿ.ಕೆ.ಭಟ್, ಡಾ ಅಣ್ಣಯ್ಯ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

ರೋಗಿ ಸಂಬಂಧಿಗಳ ಜತೆ ಉತ್ತಮ ಬಾಂಧವ್ಯ

ರೋಗಿ ಸಂಬಂಧಿಗಳ ಜತೆ ಉತ್ತಮ ಬಾಂಧವ್ಯ

'ಒನ್ ಇಂಡಿಯಾ' ಕನ್ನಡ ಜೊತೆಗೆ ಮಾತನಾಡಿದ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ರಾಘವೇಂದ್ರ ಭಟ್‌, ''ಯೆನಪೋಯ ಆಸ್ಪತ್ರೆಯಲ್ಲಿ ಕಳೆದ ಇದು ವರ್ಷಗಳಿಂದ ಸರ್ಜನ್ ಆಗಿರುವ ಡಾ. ಅಭಿಜಿತ್ ಶೆಟ್ಟಿ ಕೊಡಗು ಮೂಲದವರು. ರೋಗಿಗಳ ಜತೆಗೆ ಮಾತ್ರವಲ್ಲದೆ ಅವರ ಮನೆಮಂದಿಯ ಜತೆಗೂ ಉತ್ತಮವಾಗಿಯೇ ಸ್ಪಂದಿಸುತ್ತಿದ್ದ ವೈದರ ಮೇಲೆ ಈವರೆಗೆ ದೂರುಗಳು ಇರಲಿಲ್ಲ. ಇದೆ ವ್ಯಕ್ತಿತ್ವವನ್ನು ದುರ್ಬಳಕೆ ಮಾಡಿ ಕೊಂಡ ತಂದೆ ಆರನೇ ಮಹಡಿಯಿಂದ ಎಳೆದು ತಂದು ಅಪಹರಿಸಿದ್ದು ಅಕ್ಷಮ್ಯ ಅಪರಾಧ'' ಎಂದರು.

ಹಲ್ಲೆ ಹಾಗೂ ಅಪಹರಣ

ಹಲ್ಲೆ ಹಾಗೂ ಅಪಹರಣ

ಮೇ 16ರಂದು ದೇರಳಕಟ್ಟೆಯ ಯೆನಪೋಯ ಮೆಡಿಕಲ್ ಕಾಲೇಜು ಹಾಸ್ಪಿಟಲ್ ನಲ್ಲಿ ಮಧುಮೇಹ ಕಾಯಿಲೆ ಯಿಂದಾಗಿ ರೋಗ ಉಲ್ಬಣ ಗೊಂಡು ಗಂಭೀರ ಸ್ಥಿತಿಯಲ್ಲಿದ್ದ 65 ವರ್ಷ ಪ್ರಾಯದ ರೋಗಿಯೊಬ್ಬರು ಸಾವನ್ನಪ್ಪಿದ್ದರು. ಈ ವಿಷಯವನ್ನು ರೋಗಿಗಳ ಸಂಬಂಧಿಕರಿಗೆ ತಿಳಿಸಲು ತೆರಳಿದ ಹಿರಿಯ ವೈದ್ಯ ಡಾ. ಅಭಿಜಿತ್ ಶೆಟ್ಟಿಯವರನ್ನು ಹಿಡಿದು ಥಳಿಸಿ ಆಸ್ಪತ್ರೆಯ 6ನೇ ಮಾಳಿಗೆಯಿಂದ ಎಳೆದು ತಂದು ಬಲವಂತವಾಗಿ ಗಾಡಿಯಲ್ಲಿ ಕೂರಿಸಿದರು. ಆಗ ವೈದ್ಯರ ರಕ್ಷಣೆಗೆ ಬಂದ ಹಿರಿಯ ಶುಶ್ರೂಷಕಿ ಫ್ಲಾರೆನ್ಸ್ ಅವರನ್ನ ಥಳಿಸಿ ತಳ್ಳಿಹಾಕಿ ವೈದ್ಯರನ್ನು ರೋಗಿಯ ಸಂಬಂಧಿಕರು ಆ ವೈದ್ಯರನ್ನು ಅಪಹರಿಸಿಕೊಂಡು ಹೋಗಿದ್ದರು.

English summary
Doctors and medical students across the Mangaluru district and even Udupi on Monday May 22, 2017, marched to protest against the recent assault and kidnap of a doctor. Protesters demanded the government and the authorities concerned to take measures to ensure safety of doctors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X