ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ 8 ಮಾರುಕಟ್ಟೆಗಳಿಗೆ ನವೀಕರಣ ಭಾಗ್ಯ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂ. 29 : ಮಂಗಳೂರು ನಗರದ 8 ಮಾರುಕಟ್ಟೆಗಳ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಮುಂದಾಗಿದೆ. ಮಾರುಕಟ್ಟೆಗಳ ಅಭಿವೃದ್ಧಿಗಾಗಿ ಸುಮಾರು 312 ಕೋಟಿ ರೂ.ಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ನಗರದಲ್ಲಿರುವ ಕೆಲವು ಮಾರುಕಟ್ಟೆಗಳ ಒಳಗೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ, ಆದ್ದರಿಂದ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಪಾಲಿಕೆ ತೀರ್ಮಾನ ಕೈಗೊಂಡಿದೆ. 2 ಹಂತದಲ್ಲಿ ಎಂಟು ಮಾರುಕಟ್ಟೆಗಳ ನವೀಕರಣ ನಡೆಯಲಿದೆ.

mangaluru

ಮೊದಲ ಹಂತದಲ್ಲಿ ಕೇಂದ್ರ ಮಾರುಕಟ್ಟೆ, ಕದ್ರಿ, ಕಂಕನಾಡಿ ಮತ್ತು ಸುರತ್ಕಲ್ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಅಗತ್ಯವಿದ್ದರೆ ಮಾರುಕಟ್ಟೆ ಪಕ್ಕದಲ್ಲಿರುವ ಖಾಸಗಿ ಭೂಮಿಯನ್ನು ಸೇರಿಸಿಕೊಳ್ಳಲು ಯೋಜಿಸಲಾಗಿದೆ. [ಮಂಗಳೂರು ಪಾಲಿಕೆ ವಿರುದ್ಧ ವಿನೂತನ ಪ್ರತಿಭಟನೆ]

ಎರಡನೇ ಹಂತದಲ್ಲಿ ಕಾವೂರು, ಬಿಕರ್ನಕಟ್ಟೆ, ಅಳಪೆ ಹಾಗೂ ಕಾರ್‌ಸ್ಟ್ರೀಟ್ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಹೊಸದಾಗಿ ನಿರ್ಮಾಣವಾಗುವ ಮಾರುಕಟ್ಟೆಗಳಲ್ಲಿ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳಿಗೆ ಮಳಿಗೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುತ್ತದೆ. [ಇನ್ಮುಂದೆ ತಳ್ಳುಗಾಡಿ ವ್ಯಾಪಾರಿಗಳು ಕೂಗುವಂತಿಲ್ಲ]

ರಸ್ತೆಗಳ ಅಭಿವೃದ್ಧಿ : ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಜೊತೆಗೆ ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗಲೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಪಾಲಿಕೆ ಮತ್ತು ರಾಜ್ಯ ಸರ್ಕಾರ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನವೀಕರಣಗೊಳ್ಳಲಿದೆ.

English summary
The Mangalore City Corporation prepared 312 core project to development of 8 markets in Mangaluru city. Mangalore central, Kadri, Kankanady, Surathkal market will develop in first phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X