ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿನ್ನಿಸ್ ದಾಖಲೆ ಮಾಡಿದ ಮಂಗಳೂರಿನ ಯುವಕ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮೇ 31 : ವಿಶ್ವದ ಅತ್ಯಂತ ಉದ್ದದ ಸೆಲ್ಫಿ ಸ್ಟಿಕ್ ತಯಾರಿಸಿರುವ ಮಂಗಳೂರಿನ ಯುವಕನ ಸಾಧನೆ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿದೆ. 10.39 ಮೀಟರ್ ಉದ್ದದ ಸೆಲ್ಫಿ ಸ್ಟಿಕ್ ತಯಾರಿಸಿದ್ದ ಅರ್ಮಾನ್ ಈ ಸಾಧನೆ ಮಾಡಿದ್ದಾರೆ.

ಮಣಿಪಾಲದ ಎಂಐಟಿಯಲ್ಲಿ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಓದುತ್ತಿರುವ ಅರ್ಮಾನ್ ವಿಶ್ವದ ಅತಿ ದೊಡ್ಡ ಸೆಲ್ಫಿ ಸ್ಟಿಕ್ ತಯಾರಿಸಿದ್ದರು. ಅರ್ಮಾನ್ 10.39ಮೀಟರ್ ಉದ್ದ ಸೆಲ್ಫಿ ಸ್ಟಿಕ್ ತಯಾರಿಸಿದ್ದರು. ಈ ಮೂಲಕ ಅಮೆರಿಕಾದ ಹಾಲಿವುಡ್ ನಟ ಬೆನ್ ಸ್ಟಿಲ್ಲರ್ (8.56 ಮೀಟರ್ ಉದ್ದದ ಸೆಲ್ಫಿಸ್ಟಿಕ್) ಹೆಸರಿನಲ್ಲಿದ್ದ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. [ವಿಶ್ವದ ಅತಿ ದೊಡ್ಡ ಸೆಲ್ಫಿ ಸ್ಟಿಕ್ ಮಣಿಪಾಲದಲ್ಲಿದೆ]

manipal

2015ರ ಏಪ್ರಿಲ್ 11 ರಂದು ಮಣಿಪಾಲ ಎಂಐಟಿಯ 10ನೇ ಬ್ಲಾಕ್‌ನಲ್ಲಿರುವ ಮೈದಾನದಲ್ಲಿ ಗಿನ್ನೆಸ್ ದಾಖಲೆಯ ಪ್ರಯತ್ನವನ್ನು ನಡೆಸಿದ ಅರ್ಮಾನ್ 10.39 ಮೀಟರ್ ಉದ್ದದ ಸೆಲ್ಫಿ ಸ್ಟಿಕ್‌ನ್ನು ಗಣ್ಯರ ಸಮ್ಮುಖದಲ್ಲಿ ಪ್ರದರ್ಶಿಸಿದ್ದರು. ಇದನ್ನು ಸಂಪೂರ್ಣ ಚಿತ್ರೀಕರಣ ಮಾಡಿ, ಅದರ ಛಾಯಾಚಿತ್ರ ಹಾಗೂ ವಿಡಿಯೋ ರೆಕಾರ್ಡ್‌ಗಳನ್ನು ಗಿನ್ನಿಸ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. [ಮಂಗಳೂರಲ್ಲಿ ಸೆಲ್ಫಿ ಬೂತ್, ಫೋಟೋ ಕ್ಲಿಕ್ಕಿಸಿ ಫಟಾಫಟ್]

ಇವರ ಈ ಸಾಧನೆಯನ್ನು ಪರಿಗಣಿಸಿರುವ ಸಂಸ್ಥೆಯು ಅರ್ಮಾನ್ ಸಾಧನೆಯನ್ನು ಗಿನ್ನಿಸ್ ಪುಟಕ್ಕೆ ಸೇರಿಸಿದೆ. ಇದರ ಪ್ರಮಾಣಪತ್ರವನ್ನು ಸಂಸ್ಥೆ ಅರ್ಮಾನ್ ಅವರಿಗೆ ಕಳುಹಿಸಿಕೊಟ್ಟಿದೆ. ಮೂಲತಃ ಅರ್ಮಾನ್ ಮಂಗಳೂರಿನ ಹಂಪನಕಟ್ಟೆಯ ಮುಹಮ್ಮದ್ ಸೂರಿಂಜೆ ಹಾಗೂ ರೆಹನಾ ದಂಪತಿಯ ಪುತ್ರ. [ಸೆಲ್ಫಿಗೆ ಪೋಸ್ ಕೊಡಲು ಹೋಗಿ ಇಹಲೋಕ ತ್ಯಜಿಸಿದ]

English summary
Mangaluru youngster Arman has entered the Guinness World Records by creating world longest selfie stick measuring 10.39 meters. Arman studying in Manipal Institute of Technology (MIT) Manipal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X