ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಅತ್ಯಾಚಾರ ಮಾಡಲು ಮೇಲೆರಗಿದ ಕಾಮುಕನಿಗೆ ಮಹಿಳೆ ಮಾಡಿದ್ದೇನು?

ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಕಣ್ಣಿಗೆ ಮೆಣಸಿನಹುಡಿ ಎರಚಿ ಮಹಿಳೆ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ನಡೆದಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 21 : ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಕಣ್ಣಿಗೆ ಮೆಣಸಿನಹುಡಿ ಎರಚಿ ಮಹಿಳೆ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ನಡೆದಿದೆ.

ಕಡಂದಲೆ ಸಮೀಪದ ಗುಡ್ಡೆಯಂಗಡಿ ಬಳಿ ನಡೆದು ಬರುತ್ತಿದ್ದ ಮಹಿಳೆಯೊಬ್ಬರ ಮೇಲೆ, ಮದ್ಯಪಾನ ಮಾಡಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಯುವಕ ಅತ್ಯಾಚಾರಕ್ಕೆ ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಯುವಕನನ್ನು ಮೂಡುಬಿದಿರೆ ಪೇಟೆಯ ನಿಶ್ಮಿತಾ ಮಿಲ್ ಸಮೀಪದ ನಿವಾಸಿ, ಸ್ಥಳೀಯ ಮೊಬೈಲ್ ಔಟ್‌ಲೆಟ್ ಒಂದರ ಉದ್ಯೋಗಿ ಸುಧೀರ್ (21) ಎಂದು ಗುರುತಿಸಲಾಗಿದೆ.[ಮಂಗಳೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಇಬ್ಬರ ಬಂಧನ]

Mangaluru: Women escaped from a rapist by throwing chilly powder

ಕೊಡ್ಯಡ್ಕದಲ್ಲಿ ಮನೆ ಕೆಲಸ ನಿರ್ವಹಿಸಿ ಮಹಿಳೆ ವಾಪಾಸಾಗುತ್ತಿದ್ದರು. ಈ ಸಂದರ್ಭ ದಾರಿಯಲ್ಲಿ ಬರುವಾಗ ಮಹಿಳೆಯೋರ್ವರ ಜತೆ ಸುಧೀರ್ ಅನುಚಿತವಾಗಿ ವರ್ತಿಸಿದ್ದು, ನಂತರ ಮಹಿಳೆಯ ಮೇಲೆ ಮಾನಭಂಗಕ್ಕೂ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಯುವಕನ ಕಣ್ಣಿಗೆ ಮೆಣಸಿನಹುಡಿ ಎರಚಿ ಪಾರಾಗಿದ್ದಾರೆ. ನಂತರ ಸ್ಥಳೀಯರೇ ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಯುವಕನ ಮೇಲೆ ಮೂಡುಬಿದಿರೆ ಪೊಲೀಸರು ಐಪಿಸಿ ಸೆಕ್ಷನ್ 354ರನ್ವಯ ಅತ್ಯಾಚಾರಕ್ಕೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.[]ರಫೀಕ್ ಕೊಲೆಗೆ 18 ದಿನಗಳ ಹಿಂದೆಯೇ ನಡೆದಿತ್ತಾ ಮಾಸ್ಟರ್ ಪ್ಲಾನ್?

ಇನ್ನೊಂದು ಮೂಲದ ಪ್ರಕಾರ ದಲಿತ ಸಮುದಾಯದವನಾಗಿರುವ ಸುಧೀರ್, ಸಾಧು ಸ್ವಭಾವದವನಾಗಿದ್ದು ತನ್ನ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ದೂರುದಾರ ಮಹಿಳೆಯ ಹತ್ತಿರದಿಂದ ಹಾದು ಹೋಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸುಧೀರ್ ವಾಪಸ್ ಬರುವವರೆಗೆ ಕಾದು ನಿಂತು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಆದರೆ ಮಹಿಳೆಯ ಮಾನಭಂಗಕ್ಕೆ ಯತ್ನ ಎಂಬ ದೂರಿನಾಧಾರದಲ್ಲಿ ಪೊಲೀಸರು ಈಗಾಗಲೆ ಕೇಸು ದಾಖಲು ಮಾಡಿದ್ದಾರೆ.

English summary
A women was escaped from a stranger who tried to rape her near Mudabidre in Mangaluru by throwing chilly powder on his face. Court has been sent the accused to 14 days judicial custody after police arrested and produced him to court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X