ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮುದ್ರದಂಥ ಕಸವನ್ನು ನೋಡಬೇಕಾದರೆ ವಳವಚ್ಚಿಲ್ ಗೆ ಬರಲೇಬೇಕು

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮೇ 26: ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿರುವ ನಗರದ ಹೊರವಲಯದ ವಳಚ್ಚಿಲ್ ಎಂಬಲ್ಲಿ ಕಸದ ಸಮಸ್ಯೆ ತಾಂಡವವಾಡುತ್ತಿದ್ದು, ಸೂಕ್ತ ಸಮಯದಲ್ಲಿ ಕಸ ವಿಲೇವಾರಿಯಾಗದೇ ಇಡೀ ಪ್ರದೇಶ ದುರ್ನಾತ ಬೀರುವಂತಾಗಿದೆ. ಈ ಸಮಸ್ಯೆಯನ್ನು ನಿವಾರಿಸದೇ ತೆಪ್ಪಗೆ ಕುಳಿತಿರುವ ಗ್ರಾಮ ಪಂಚಾಯ್ತಿಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಪ್ರತಿಷ್ಠಿತ ವಿದ್ಯಾರ್ಜನಾ ಪ್ರದೇಶ: ಮಂಗಳೂರು ನಗರದ ತುಸು ದೂರದಲ್ಲಿ ವಳಚ್ಚಿಲ್ ಎಂಬ ಪ್ರದೇಶವಿದ್ದು, ಸದ್ಯ ಇಲ್ಲಿ ರಾಜ್ಯದ ಪ್ರತಿಷ್ಠಿತ ವಿದ್ಯಾಕೇಂದ್ರಗಳಾದ ಶ್ರೀನಿವಾಸ್ ಕಾಲೇಜು ಹಾಗೂ ಎಕ್ಸ್ ಪರ್ಟ್ ಕಾಲೇಜುಗಳಿವೆ. ಈ ಎರಡೂ ಕಾಲೇಜುಗಳಲ್ಲಿ ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿದ್ದು, ರಾಜ್ಯ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಿದ್ದಾರೆ.[ಕಸ ಹಾಕುವವರ ಮನೆಗೆ ನಾನು ತಪ್ಪದೆ ಬರುತ್ತೇನೆ!]

Mangaluru Valachil has now turned as garbage hub

ಇಷ್ಟೊಂದು ಅಭಿವೃದ್ದಿ ಹೊಂದಿರುವ ಈ ಪ್ರದೇಶದಲ್ಲಿ ಸಂಬಂಧಪಟ್ಟ ಗ್ರಾಮಪಂಚಾಯತ್ ಒಂದೇ ಒಂದು ಕಸದ ತೊಟ್ಟಿಗಳನ್ನು ರಚಿಸಿಲ್ಲ. ಆದ್ದರಿಂದ ಈ ಬೀಳುವ ಕಸ ರಸ್ತೆಯೆಲ್ಲಾ ಹರಡಿ ಸುತ್ತಮುತ್ತಲಿನ ಜನರಿಗೆ ಸಂಕಷ್ಟ ತಂದಿದೆ. ಈ ಪ್ರದೇಶವು ಅಡ್ಯಾರ್ ಹಾಗೂ ಮೇರ್ಲಪದವು ಎಂಬ ಎರಡು ಗ್ರಾಮ ಪಂಚಾಯತ್‍ಗೆ ಹಂಚಿಕೆಯಾಗಿದ್ದು, ಈ ಬಗ್ಗೆ ಎರಡೂ ಗ್ರಾಮ ಪಂಚಾಯತ್‍ಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪ ಸ್ಥಳೀಯರದ್ದು.

Mangaluru Valachil has now turned as garbage hub

ರಸ್ತೆಯಿಡೀ ಕಸ, ಕಸ, ಬರೀ ಕಸ
ಪ್ರಮುಖ ಶಿಕ್ಷಣ ಕೇಂದ್ರವಾದುದ್ದರಿಂದ ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಓಡಾಡುವುದರಿಂದ ಸಾಮಾನ್ಯವಾಗಿ ಕಸದ ಸಮಸ್ಯೆ ಇದ್ದೇ ಇರುತ್ತದೆ. ಜೊತೆಗೆ ಕೆಲವು ವಿದ್ಯಾರ್ಥಿಗಳು ವಸತಿಗಾಗಿ ಹಾಸ್ಟೆಲ್ ಬಿಟ್ಟು ರೂಮ್‍ಗಳಲ್ಲಿ ವಾಸವಾಗಿದ್ದಾರೆ. ಅಲ್ಲಿಂದ ಬರುವ ಕೊಳಚೆ ನೀರು, ಕಸ ಮಳೆಗಾಲದಲ್ಲಿ ರಸ್ತೆಗೆ ಬರುತ್ತದೆ, ಇದರಿಂದ ಜನರು ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಸದ ತೊಟ್ಟಿ ಇಲ್ಲದೇ ಇರುವುದರಿಂದ ನಾಯಿಗಳು ರಾತ್ರಿ ಕಸವನ್ನು ರಸ್ತೆಯಿಡೀ ಚೆಲ್ಲುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ದೂರುತ್ತಿದ್ದಾರೆ.[ಮೋದಿ ಅಭಿಮಾನಿಯಿಂದ ಮಂಗ್ಳೂರಲ್ಲಿ 1 ರು.ಗೆ ಆಟೋ ಪ್ರಯಾಣ ಆಫರ್]

Mangaluru Valachil has now turned as garbage hub

ಸ್ಥಳೀಯರಿಗೆ ಮಾರಕ ರೋಗದ ಭೀತಿ
ಈ ಕಸದಿಂದಾಗಿ ಸ್ಥಳೀಯರಿಗೆ ಮಾರಕ ರೋಗದ ಭೀತಿ ಎದುರಾಗಿದೆ. ಮಳೆಗಾಲದ ಸಮಯದಲ್ಲಿ ಕಸವು ಪರಿಸರದಲ್ಲಿ ಹರಡುವುದರಿಂದ ನೀರಿನ ಮೂಲಕ ರೋಗ ಹರಡುವ ಸಂಭವ ಜಾಸ್ತಿ. ಜೊತೆಗೆ ಪುಟ್ಟ ಪುಟ್ಟ ಮಕ್ಕಳು ಮನೆಯಿಂದ ಹೊರಗಡೆ ಕಾಲಿಡಂತೆ ಜಾಗ್ರತೆ ವಹಿಸುವುದು ಮುಖ್ಯವಾಗಿದೆ. ಈಗಾಗಲೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಸ್ಥಳೀಯರಲ್ಲಿ ಕಾಡುತ್ತಿದೆ. ಇನ್ನಾದರೂ ಸಂಬಂಧಪಟ್ಟ ಗ್ರಾಮಪಂಚಾಯಿತಿಗಳು, ಶಿಕ್ಷಣ ಸಂಸ್ಥೆಯವರು ಈ ಬಗ್ಗೆ ಸೂಕ್ತ ಗಮನ ಹರಿಸಿ ಎಂಬುವುದು ಸ್ಥಳೀಯರ ಆಗ್ರಹ.

English summary
Valachil which is a small hub for education and tourist has now turned to be garbage hub. As Village Panchayath is not at all turning its concentration to solve this problem, problem of garbage and bad smell made the hostel student to evacuate their residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X