ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿವಿ ಅಂಕಪಟ್ಟಿ ಸಿಗದೆ ವಿದ್ಯಾರ್ಥಿಗಳ ಪರದಾಟ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 01 : ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳು ಮುಗಿದು ಹಲವು ತಿಂಗಳು ಕಳೆದರೂ ಫಲಿತಾಂಶ ಮತ್ತು ಅಂಕಪಟ್ಟಿ ವಿದ್ಯಾರ್ಥಿಗಳ ಕೈ ಸೇರಿಲ್ಲ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗ ಮತ್ತು ಉದ್ಯೋಗ ಪಡೆಯಲು ಸಮಸ್ಯೆ ಎದುರಿಸುವಂತಾಗಿದೆ.

ನವೆಂಬರ್, ಡಿಸೆಂಬರ್‌ನಲ್ಲಿ ನಡೆದ ಪದವಿಯ 5ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಹೊರಬಿದ್ದಿದ್ದರೂ ಕೆಲವೊಂದು ಕೋರ್ಸ್‌ಗಳ ಅಂಕಪಟ್ಟಿ ವಿದ್ಯಾರ್ಥಿಗಳಿಗೆ ದೊರಕಿಲ್ಲ. ಮೇ ತಿಂಗಳಿನಲ್ಲಿ ನಡೆದ 6 ನೇ ಸೆಮಿಸ್ಟರ್‌ನ ಕೆಲವೊಂದು ಪರೀಕ್ಷೆಗಳ ಫಲಿತಾಂಶ ಇನ್ನೂ ಬಂದಿಲ್ಲ.[ಪರೀಕ್ಷೆ ಬರೆಯದೇ ಪಾಸ್ : ಇದು ಮಂಗಳೂರು ವಿವಿ ಅವಾಂತರ]

Mangaluru university students not received marks card

ವಿಶ್ವವಿದ್ಯಾಲಯದ ಈ ಎಡವಟ್ಟಿನಿಂದಾಗಿ, ವಿದ್ಯಾರ್ಥಿಗಳು ಮುಂದಿನ ವ್ಯಾಸಾಂಗ ಮತ್ತು ಉದ್ಯೋಗ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಕೆಲ ವಿದ್ಯಾರ್ಥಿಗಳು ಎಂಬಿಎ ಮುಂತಾದ ಕೋರ್ಸುಗಳಿಗೆ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗಿದ್ದಾರೆ. ಆದರೆ, ಅಂಕಪಟ್ಟಿ ಸಲ್ಲಿಸಲು ಕೊನೆಯ ಗಡುವು ಮುಗಿದಿದ್ದು, ಅಂಕಪಟ್ಟಿ, ಮಾತ್ರ ಅವರ ಕೈ ಸೇರಿಲ್ಲ.

ತಮ್ಮ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು ನೇರವಾಗಿ ವಿಶ್ವವಿದ್ಯಾಲಯಕ್ಕೆ ಹೋಗಿ ಕೇಳಿದರೆ, ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಇನ್ನಾದರೂ ವಿಶ್ವವಿದ್ಯಾಲಯದ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಬಾಕಿ ಇರುವ ಫಲಿತಾಂಶ ಪ್ರಕಟಿಸುವುದರೊಂದಿಗೆ ಶೀಘ್ರ ಅಂಕಪಟ್ಟಿ ನೀಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಗೊಂದಲ ಉಂಟಾಗಿತ್ತು : 2016ರ ಮಾರ್ಚ್‌ನಲ್ಲಿ ಮಂಗಳೂರು ವಿವಿಯ ವಿವಿಧ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿತ್ತು. ಪರೀಕ್ಷೆ ಬರೆಯದವರು ಪಾಸ್ ಆಗಿದ್ದರು. ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದವರು ಫೇಲ್ ಆಗಿದ್ದರು. ಸೈನ್ಸ್ ಪರೀಕ್ಷೆ ಬರೆದವರ ಫಲಿತಾಂಶ ಬಿಬಿಎಂ ವಿಭಾಗದಲ್ಲಿ ಪ್ರಕಟವಾಗಿ ಗೊಂದಲ ಉಂಟಾಗಿತ್ತು.

English summary
Mangaluru university students not received Degree exam marks card. Examination held on November and December 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X