ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿವಿಯಲ್ಲಿ ತುಳು ಪಿ.ಜಿ ಕೋರ್ಸು ಆರಂಭಕ್ಕೆ ಚಿಂತನೆ

ಮಂಗಳೂರು ವಿಶ್ವವಿದ್ಯಾನಿಲಯ ತುಳು ಸ್ನಾತಕೋತ್ತರ ಪದವಿ ಆರಂಭಕ್ಕೆ ಚಿಂತನೆ ನಡೆಸಿದ್ದು ಪಠ್ಯವಿಷಯ ಮತ್ತು ನಿಯಮಗಳ ಕರಡು ರಚನೆಗೆ ಸಮಿತಿಯೊಂದನ್ನು ನೇಮಕ ಮಾಡಲು ಮುಂದಾಗಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 26: ಮಂಗಳೂರು ವಿಶ್ವವಿದ್ಯಾನಿಲಯ ತುಳು ಸ್ನಾತಕೋತ್ತರ ಪದವಿ ಆರಂಭಕ್ಕೆ ಚಿಂತನೆ ನಡೆಸಿದೆ. ಜತೆಗೆ ಪದವಿ ಮಟ್ಟದಲ್ಲಿ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ ಜಾರಿಗೊಳಿಸಲು ನಿರ್ಧರಿಸಿದೆ.

ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಕಚೇರಿ ಈ ಸಂಬಂಧ ನೋಟೀಸೊಂದನ್ನು ಬಿಡುಗಡೆಗೊಳಿಸಿದ್ದು, ಪಠ್ಯವಿಷಯ ಮತ್ತು ನಿಯಮಗಳ ಕರಡು ರಚನೆಗೆ ಸಮಿತಿಯೊಂದನ್ನು ರಚಿಸುವಂತೆ ಸೂಚಿಸಿದೆ. ಈ ಸಮಿತಿಯು ಕನ್ನಡ ಪ್ರೊಫೆಸರ್ ಅಭಯ್ ಕುಮಾರ್ ಮುಂದಾಳತ್ವದಲ್ಲಿರಬೇಕು ಎಂದು ತಿಳಿಸಿದೆ.[ಸಹೋದರ ಇಫ್ತಿಕರ್ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಯುಟಿ ಖಾದರ್]

Mangaluru University has planned to began Tulu language PG course

ಹಿಂದೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಿಶ್ವವಿದ್ಯಾನಿಲಯಕ್ಕೆ ಮನವಿಯೊಂದನ್ನು ಸಲ್ಲಿಸಿ ತುಳುವಿನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ತುಳು ಅಧ್ಯಯನಕ್ಕೆ ಅವಕಾಶ ಒದಗಿಸುವಂತೆ ಕೋರಿತ್ತು. ಮನವಿಯಲ್ಲಿ ಪದವಿ ಮಟ್ಟದಲ್ಲಿ ತುಳುವನ್ನು ಮೂರು ಐಚ್ಚಿಕ ವಿಷಯಗಳಲ್ಲಿ ಒಂದಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಕೇಳಿಕೊಂಡಿತ್ತು.

ಸಮಿತಿಯು ಈಗ ಪಠ್ಯಕ್ಕೆ ವಿಷಯಗಳನ್ನು ಸಂಗ್ರಹಿಸುತ್ತಿದೆ. ನಂತರ ಪಠ್ಯದ ಮತ್ತು ನಿಯಮಗಳ ಕರಡನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಲಿದೆ. ಬಳಿಕ ವಿಶ್ವವಿದ್ಯಾನಿಲಯವು 2018-19ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ತುಳುವನ್ನು ಐಚ್ಚಿಕ ವಿಷಯವಾಗಿ ಜಾರಿಗೊಳಿಸಲಿದೆ ಎಂದು ಅಭಯ್ ಕುಮಾರ್ ಹೇಳಿದ್ದಾರೆ.[ಬರಗಾಲದಲ್ಲೂ ಪಾಳು ಬಿದ್ದ ಕ್ವಾರಿಯಲ್ಲಿ ಉಕ್ಕಿತು ಜಲಧಾರೆ]

2016ರ ಡಿಸೆಂಬರ್ 21ರಂದು ವಿಶ್ವವಿದ್ಯಾನಿಲಯಕ್ಕೆ ತುಳು ಕೊರ್ಸ್ ಆರಂಭಿಸುವಂತೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮನವಿ ಸಲ್ಲಿಸಿದ್ದರು.

ವಿಶ್ವಿದ್ಯಾಲಯದ ತೀರ್ಮಾನದ ಕುರಿತು ಮಾತನಾಡಿರುವ ಜಾನಕಿ ಬ್ರಹ್ಮಾವರ, "ವಿಶ್ವವಿದ್ಯಾಲಯದ ನಿರ್ಧಾರದಿಮದ ಸಂತಸವಾಗಿದೆ. ಈಗಾಗಲೇ ಶಾಲಾ ಮಟ್ಟದಲ್ಲಿ ತುಳುವನ್ನು 2010-11 ರಲ್ಲಿ ಪ್ರಾರಂಭಿಸಿದ್ದು, 6ರಿಂದ 10ನೇ ತರಗತಿಗೆ ತುಳು ಪಠ್ಯಪುಸ್ತಕವಿದೆ. ತುಳು ಕಲಿಸಲು ಶಾಲೆಗಳಿಗೆ ಅರ್ಹ ಶಿಕ್ಷಕರ ಅವಶ್ಯಕತೆ ಇದೆ. ಇದುವರೆಗೆ 10ನೇ ತರಗತಿಯ ಎರಡು ಬ್ಯಾಚಿನ ವಿದ್ಯಾರ್ಥಿಗಳು ತುಳುವನ್ನು ಮೂರನೇ ಐಚ್ಚಿಕ ವಿಷಯವಾಗಿ ಕಲಿತು ತೇರ್ಗಡೆಯಾಗಿದ್ದಾರೆ. ಮೂರನೇ ಬ್ಯಾಚ್ 2017-18ರಲ್ಲಿ ಪರೀಕ್ಷೆ ಬರೆದಿದೆ. ಸುಮಾರು 20 ಶಾಲೆಗಳ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ತುಳುವನ್ನು ಅಭ್ಯಸಿಸಿದ್ದಾರೆ," ಎಂದು ಹೇಳಿದ್ದಾರೆ.

English summary
The Mangaluru University has planned to began TULU PG course, as the demand for tulu pg course is on high, the university has planned to implement tulu pg course at the university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X