ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕಕ್ಕೆ ಹೊರಟ ಮಂಗಳೂರಿನ ಯುವ ವಿಜ್ಞಾನಿಗಳು

|
Google Oneindia Kannada News

ಮಂಗಳೂರು, ಡಿ. 21: ವಾತಾವರಣಕ್ಕೆ ಹಾನಿಕಾರಕವಾದ ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈಆಕ್ಸೈಡ್ ನಂಥವುಗಳನ್ನು ಹಾನಿಕಾರಕವಲ್ಲದ ರೀತಿ ಪರಿವರ್ತಿಸುವ ವಿಧಾನವನ್ನು ಭಾರತದಲ್ಲೇ ಕಂಡುಹಿಡಿಯಲಾಗಿದೆ. ಈ ಸಾಧನೆ ಮಾಡಿರುವುದು ಮಂಗಳೂರಿನ ಇಬ್ಬರು ಯುವ ವಿಜ್ಞಾನಿಗಳು!

ಹೌದು,,, ಮಂಗಳೂರಿನ ಶಾರದಾ ವಿದ್ಯಾನಿಕೇತನ್ ಶಾಲೆಯ ಕೋಮಲ್ ಮತ್ತು ಆದಿತ್ಯ ಭಾರ್ಗವ್ ತಮ್ಮ ಸಂಶೋಧನೆಯನ್ನು ಅಮೆರಿಕದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಅಹಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಸ್ಫರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುವ 10 ಮತ್ತು 11 ನೇ ತರಗತಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.[ಸಂಶೋಧಿತ ತೊಗರಿ, ಶೇಂಗಾ ತಳಿಗಳ ವಿಶೇಷವೇನು?]

students

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹುಡುಗರು, ಭವಿಷ್ಯದ ಸುಂದರ ಪರಿಸರ ನಿರ್ಮಾಣ ಇಂಥ ಸಂಶೋಧನೆಗಳಿಂದ ಮಾತ್ರ ಸಾಧ್ಯ. ಪರಿಸರ ನಿಯಂತ್ರಣ ಮಂಡಳಿ ಸದ್ಯ ಬಳಸುತ್ತಿರುವ ವೆಚ್ಚದಾಯಕ ಫಿಲ್ಟರ್ ಗಳಿಗೆ ನಾವು ಕಂಡುಹಿಡಿದ ಯಂತ್ರ ಪರ್ಯಾಯವಾಗಬಲ್ಲದು. ಅಲ್ಲಿ 2 ರಿಂದ 3 ದಿನಗಳಲ್ಲಿ ನಡೆಯುವ ಕೆಲಸವನ್ನು ನಮ್ಮ ಯಂತ್ರ ಕೇವಲ 20 ಸೆಕೆಂಡ್ ನಲ್ಲಿ ಪೂರೈಸುತ್ತದೆ ಎಂದು ವಿವರಿಸಿದರು.[ಬಿಪಿ ಹೆಚ್ಚಿಸಲು ನಾಲ್ಕು ಇಮೇಲ್ ಸಾಕು!]

students 1

ನಮ್ಮ ತಂತ್ರಜ್ಞಾನವನ್ನು ಮೊಬೈಲ್ ಗಳಿಗೂ ಅಳವಡಿಸುವ ಚಿಂತನೆಯಿದೆ. ಅದಕ್ಕೆ ಎಲ್ಲರ ಸಹಾಕಾರ ಅಗತ್ಯ ಎಂದು ಹೇಳಿದರು. ಒಟ್ಟಿನಲ್ಲಿ ಬಾಲಕರ ಸಂಶೋಧನೆಗೆ ಭದ್ರ ಅಡಿಪಾಯವೊಂದನ್ನು ಒದಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ.

English summary
Two budding scientists, students of Sharada Vidyaniketan Public School here, have been selected to represent India in the International Science Fair to be held in the United States of America. Students awarded the gold medal in the national-level Science Fair conducted by The Initiative for Research and Innovation in Science (IRIS) held in Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X