ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಹಂತಕರ ಬಂಧನ

|
Google Oneindia Kannada News

ಮಂಗಳೂರು, ಏಪ್ರಿಲ್ 29 : ಜಿಲ್ಲೆಯ ಕೋಣಾಜೆ ಬಳಿ ಹಲವು ತಿಂಗಳ ಹಿಂದೆ ಹತ್ಯೆಗೀಡಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಹಂತಕರನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಯಾದ ಕಾರ್ತಿಕ್ ಅವರ ಸಹೋದರಿ ಕಾವ್ಯಳ ಪ್ರಿಯಕ ಗೌತಮ್ ನ್ನನ್ನು ಶುಕ್ರವಾರ ವೆಲೈಂಟೈನ್ ಡಿಸೋಜ ತಂಡ ಬಂಧಿಸಿದೆ. [ಮಂಗಳೂರು: ಕೊಲೆಯಾದ ಕಾರ್ತಿಕ್ ರಾಜ್ ಮನೆಗೆ ಡಾ. ಪ್ರಭಾಕರ್]

2016 ಅಕ್ಟೋಬರ್ 23, ಶನಿವಾರ ಬೆಳಗ್ಗೆ ಕೊಣಾಜೆ ಪೊಲೀಸ್ ಠಾಣಾ ಬಳಿ ಜಾಗಿಂಗ್ ಮಾಡುತ್ತಿದ್ದ ಕಾರ್ತಿಕ್ ರಾಜ್ (27) ಅವರನ್ನು ದುಷ್ಕರ್ಮಿಗಳು ತಲವಾರಿನಿಂದ ನಡುರಸ್ತೆಯಲ್ಲೇ ಮಾರಣಾಂತಿಕವಾಗಿ ಕಡಿದು ಪರಾರಿಯಾಗಿದ್ದರು. [ಕಾರ್ತಿಕ್ ರಾಜ್ ಕೊಲೆ, ಜಿಹಾದಿ ಕೃತ್ಯ; ಯಡಿಯೂರಪ್ಪ]

Mangaluru RSS activities Karthik Raj murder accused arrested

ಕೂಡಲೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಕಾರ್ತಿಕ್ ರನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಾರ್ತಿಕ್ ಮೃತಪಟ್ಟಿದ್ದರು.

ಇನ್ನು ಈ ಪ್ರಕರಣವನ್ನು ಹಿಟ್ ಆಂಡ್ ರನ್ ಕೇಸನ್ನಾಗಿ ಪರಿವರ್ತಿಸುವ ಹುನ್ನಾರ ನಡೆಸಿದ ಆರೋಪ ಕೇಳಿ ಬಂದಿತ್ತು.

English summary
Mangaluru RSS activities Karthik Raj murder accused arrested on April 28. Karthik Raj (27) RSS Swayamsevak, son a of noted BJP leader, was brutally attacked on October 23, near Konaje police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X