ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮೀಕ್ಷೆ: ದೇಶದಲ್ಲೇ ಮಂಗಳೂರು ಜೀವನಯೋಗ್ಯ ನಗರ

ಇಡೀ ಮಂಗಳೂರು ಇಂದು ಸಂತೋಷದಿಂದ ತೇಲುತ್ತಿದೆ. ನಮ್ಮ ಮಂಗಳೂರಿಗೆ ಬಂತು ದೊಡ್ಡ ಗುಡ್ ನ್ಯೂಸ್. ದೇಶದಲ್ಲೇ ಗುಣಮಟ್ಟದ ಜೀವನ ಸಾಗಿಸಲು ಅತ್ಯಂತ ಪ್ರಶಸ್ತ ತಾಣ ಎಂಬ ಪಟ್ಟ ನಮ್ಮ ಹೆಮ್ಮೆಯ ಮಂಗಳೂರಿಗೆ ಸಿಕ್ಕಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 26: ಇಡೀ ಮಂಗಳೂರು ಇಂದು ಸಂತೋಷದಿಂದ ತೇಲುತ್ತಿದೆ. ನಮ್ಮ ಮಂಗಳೂರಿಗೆ ಬಂತು ದೊಡ್ಡ ಗುಡ್ ನ್ಯೂಸ್. ದೇಶದಲ್ಲೇ ಗುಣಮಟ್ಟದ ಜೀವನ ಸಾಗಿಸಲು ಅತ್ಯಂತ ಪ್ರಶಸ್ತ ತಾಣ ಎಂಬ ಪಟ್ಟ ನಮ್ಮ ಹೆಮ್ಮೆಯ ಮಂಗಳೂರಿಗೆ ಸಿಕ್ಕಿದೆ. ಜತೆಗೆ ಜಾಗತಿಕ ಆರೋಗ್ಯ ಸೇವೆಗಳ ಪಟ್ಟಿಯಲ್ಲೂ ಮಂಗಳೂರಿಗೆ 12ನೇ ಸ್ಥಾನ ಲಭಿಸಿದೆ.

numbeo.ಕಾಂ ವೆಬ್ ಸೈಟ್ ನಡೆಸಿದ ಸಮೀಕ್ಷೆ ಪ್ರಕಟವಾಗಿದ್ದು, ನಗರದ ಕೀರ್ತಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.

Mangaluru ranks12th in global list for healthcare in India

ಗುಣಮಟ್ಟದ ಜೀವನ ಸಾಗಿಸಲು ಪ್ರಶಸ್ತವಾದ ತಾಣಗಳ ಪಟ್ಟಿಯಲ್ಲಿ ವಿಶ್ವದಲ್ಲಿ 41ನೇ ಸ್ಥಾನದಲ್ಲಿರುವ ಮಂಗಳೂರು, ಸ್ಯಾನ್‌ಫ್ರಾನ್ಸಿಸ್ಕೊ ನಗರವನ್ನು ಹಿಂದಿಕ್ಕಿದೆ.

ಆಸ್ಟ್ರೇಲಿಯಾದ ಕ್ಯಾನ್ ಬೆರ್ರಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವೆನಿಜುವೆಲಾ 143ನೆ ಹಾಗೂ ಕೊನೆ ಸ್ಥಾನದಲ್ಲಿದೆ.

Mangaluru ranks12th in global list for healthcare in India

ಏಷ್ಯಾದಲ್ಲಿ ಟರ್ಕಿಯ ಬುರ್ಸಾ ನಗರವನ್ನು ಹೊರತುಪಡಿಸಿದರೆ, ಮಂಗಳೂರು ಎರಡನೆ ಸ್ಥಾನದಲ್ಲಿದೆ. ಏಷ್ಯಾಮಟ್ಟದಲ್ಲಿ ದುಬೈ 9ನೆ ಸ್ಥಾನದಲ್ಲಿದ್ದರೆ ಅಬುಧಾಬಿ 5ನೆ ಅತ್ಯುತ್ತಮ ನಗರ ಎನಿಸಿಕೊಂಡಿದೆ.

Mangaluru ranks12th in global list for healthcare in India
ಭಾರತೀಯ ನಗರಗಳ ಪೈಕಿ ಪುಣೆ (77), ಹೈದರಾಬಾದ್ (96), ಬೆಂಗಳೂರು (108), ಗುರ್ಗಾಂವ್ (1120, ಚೆನ್ನೈ (128), ದಿಲ್ಲಿ (130), ಕೋಲ್ಕತ್ತಾ (138) ಹಾಗೂ ಮುಂಬೈ (139) ಸ್ಥಾನ ಪಡೆದಿವೆ. ಒಟ್ಟಾರೆಯಾಗಿ ದೇಶಗಳ ಪಟ್ಟಿಯಲ್ಲಿ ಭಾರತ 51ನೆ ಸ್ಥಾನದಲ್ಲಿದೆ.
Mangaluru ranks12th in global list for healthcare in India
ಬಳಕೆದಾರರ ಸೃಷ್ಟಿಯ ಜಾಗತಿಕ ಡಾಟಾಬೇಸ್ ಕಂಪೆನಿ ತನ್ನ ವೆಬ್‌ಸೈಟ್‌ನಲ್ಲಿ 2017ನೆ ಸಾಲಿನ ranking ಪ್ರಕಟಿಸಿದ್ದು, ಆರೋಗ್ಯ ಕಾಳಜಿಯಲ್ಲಿ ಮಂಗಳೂರು, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಜಪಾನ್‌ನ ನಗರಗಳನ್ನು ಹಿಂದಿಕ್ಕಿ 12ನೆ ಸ್ಥಾನಕ್ಕೇರಿದೆ. ನಗರದ ಖ್ಯಾತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳು ಈ ಹೆಗ್ಗಳಿಕೆಗೆ ಕಾರಣವಾಗಿವೆ.
English summary
Mangaluru city has been ranked 41 in terms of quality of life in a global list, making it the best in India.The rankings were published by Numbeo, an independent user-generated global database, on its website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X