ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟೀಲು ಪ್ರಕರಣ: ಮುಂಬೈ ಫೇಸ್‌ಬುಕ್ ಕಚೇರಿಗೆ ಮಂಗಳೂರು ಪೊಲೀಸ್ ಭೇಟಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್. 08 : ಸಾಮಾಜಿಕ ಜಾಲತಾಣದಲ್ಲಿ ಕಟೀಲು ದುರ್ಗಾಪರಮೇಶ್ವರಿ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೈಬರ್ ಕ್ರೈಂ ತಂಡದೊಂದಿಗೆ ಮಂಗಳೂರು ಪೊಲೀಸರು ಬುಧವಾರ ಮುಂಬೈನ ಫೇಸ್ ಬುಕ್ ಕಚೇರಿಗೆ ತೆರಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಟೀಲು ದುರ್ಗಾಪರಮೇಶ್ವರಿ ಅವಹೇಳನ ಮಾಡಿದ ಪ್ರಕರಣ ತನಿಖೆಗೆ ಅಗತ್ಯವಿರುವ ಮಾಹಿತಿ ಹಂಚಿಕೊಳ್ಳುವಂತೆ ಫೇಸ್‌ಬುಕ್ ಸಂಸ್ಥೆಗೆ ಮೂರು ಬಾರಿ ನೋಟಿಸ್ ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದರಿಂದ ಖುದ್ದು ಮಂಗಳೂರು ಪೊಲೀಸ್ ತಂಡವೊಂದು ಬುಧವಾರ ಮುಂಬೈನ ಫೇಸ್ ಬುಕ್ ಕಚೇರಿಕೆ ತೆರಳಿದ್ದು. ಗುರುವಾರ ಮುಂಬೈಯಲ್ಲಿರುವ ಫೇಸ್‌ಬುಕ್ ಸಂಸ್ಥೆಗೆ ಭೇಟಿ ನೀಡಿದ್ದಾರೆ. [ದುರ್ಗಾಪರಮೇಶ್ವರಿಗೆ ಅವಮಾನ: ಫೇಸ್ ಬುಕ್ ಗೆ ಮೂರನೇ ನೋಟಿಸ್]

Mangalore police team visits Mumbai Facebook office For Non-Cooperation In Cyber Crime Cases

ಕೇವಲ ಕಟೀಲು ದುರ್ಗಾಪರಮೇಶ್ವರಿ ಅವಹೇಳನ ಪ್ರಕರಣ ಅಷ್ಟೇ ಅಲ್ಲದೆ ನಗರದಾದ್ಯಂತ ನಡೆಯುವ ಸೈಬರ್ ಕ್ರೈಂ , ಆನ್ಲೈನ್ ಫ್ರಾಡ್ ಗಳು ಕೂಡಾ ಜೀವಂತ ಸಾಕ್ಷಿಯಾಗಿದೆ. ಎಷ್ಟೇ ನೋಟೀಸ್‌ಗಳನ್ನು ಕಳುಹಿಸಿದರೂ ಯಾವುದೇ ಪ್ರಕರಣಕ್ಕೂ ಕುರಿತಂತೆ ಯಾವುದೇ ಮಾಹಿತಿ ಒದಗಿಸುವಲ್ಲಿ ಫೇಸ್‌ಬುಕ್ ಮುಂದಾಗಲಿಲ್ಲ.

ಹೌದು ಈ ತಂಡದಲ್ಲಿ ಬಂದರ್ ಇನ್ಸ್ ಪೆಕ್ಟರ್ ಶಾಂತರಾಜು, ಎಸಿಪಿ ವ್ಯಾಲೆಂಟಿನ್ ಡಿ ಸೋಜಾ, ಶಿವಪ್ರಕಾಶ್ ಮತ್ತು ಬೆಂಗಳೂರಿನ ಸೈಬರ್ ತಜ್ಞರ ತಂಡದವರು ಇದ್ದಾರೆ. [ಕಟೀಲು ದುರ್ಗಾಪರಮೇಶ್ವರಿ ದೇವಿ ಬಗ್ಗೆ ಅವಹೇಳನಕಾರಿ ಸಂದೇಶ]

Mangalore police team visits Mumbai Facebook office For Non-Cooperation In Cyber Crime Cases

ಫೇಸ್‌ಬುಕ್ ಇಲ್ಲಿಯವರೆಗೆ ನಡೆದ ಹಗರಣ, ಅಪರಾಧಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡದಿರುವುದು ಪ್ರಕರಣದ ತನಿಖೆಗೆ ಹಿನ್ನಡೆಯಾಗಿದೆ. ಈ ಸಂಬಂಧ ಮಂಗಳೂರಿನ ಪೊಲೀಸರ ತಂಡ ಫೇಸ್‌ಬುಕ್ ಸಂಸ್ಥೆಗೆ ಭೇಟಿ ನೀಡಿದ್ದು, ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

English summary
Mangalore police team including Bangalore cyber crime team visits Mumbai facebook office for non-cooperation in cyber crime cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X