ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಲಂಚ ಸ್ವೀಕರಿಸಿದ ಪೇದೆಗೆ 2 ವರ್ಷ ಜೈಲು

|
Google Oneindia Kannada News

ಮಂಗಳೂರು, ಜೂನ್ 30: ಕೇಸ್ ವಜಾ ಮಾಡುವುದಾಗಿ ಹೇಳಿ ಲಂಚ ಪಡೆದಿದ್ದ ಉಳ್ಳಾಲ ಪೊಲೀಸ್ ಪೇದೆ ಮಹೇಶ್ ಗಟ್ಟಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

2009 ರಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಹೇಶ್ ಉಮ್ಮರ್ ಫಾರುಕ್ ಎಂಬವರಿಂದ ಲಂಚ ಪಡೆದಿದ್ದರು.

Mangaluru: Police constable sentenced to 2 years jail in bribery case

ಈ ಪ್ರಕರಣಲ್ಲಿ ಲೋಕಾಯುಕ್ತ ಕೋರ್ಟ್ ನಲ್ಲಿ ವಾದ ವಿವಾದಗಳು ನಡೆದು ಕೊನೆಗೂ 8 ವರ್ಷಗಳ ನಂತರ ಉಳ್ಳಾಲ ಪೊಲೀಸ್ ಪೇದೆ ಮಹೇಶ್ ಗಟ್ಟಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶ ಮುರಳೀಧರ ಪೈ ಈ ಶಿಕ್ಷೆ ಪ್ರಕಟಿಸದರು.

ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ ಕೆ.ಎಸ್.ಎನ್ ರಾಜೇಶ್ ವಾದಿಸಿದ್ದರು . ಉದಯ ನಾಯಕ್ ಅವರ ನೇತೃತ್ವದದಲ್ಲಿ ಆರೋಪಿಗಳನ್ನ ಬಂದಿಸಲಾಗಿತ್ತು.

ಆದರೆ ಪ್ರಕರಣದ ಒಂದನೇ ಆರೋಪಿ ಎಸ್ ಐ ರಾಮೇ ಗೌಡರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.

English summary
Mangaluru: Ullal station police constable Mahesh Gatti sentenced to two year imprisonment by Lokayukta court in a bribery case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X