ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೊಸ ಪ್ಲಾಟ್ ಫಾರ್ಮ್

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೊಸ ಪ್ಲಾಟ್ ಫಾರ್ಮ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಮೊನ್ನೆ ಮಂಡನೆಗೊಂಡ ಕೇಂದ್ರ ಬಜೆಟ್ ನಲ್ಲಿ 6.65 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 5 : ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೊಸ ಪ್ಲಾಟ್ ಫಾರ್ಮ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಮೊನ್ನೆ ಮಂಡನೆಗೊಂಡ ಕೇಂದ್ರ ಬಜೆಟ್ ನಲ್ಲಿ 6.65 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.

ಹೊಸ ಪ್ಲಾಟ್ ಫಾರಂ ನಿರ್ಮಾಣ ಮತ್ತು ಹಾಗೂ ನೇತ್ರಾವತಿ ಕ್ಯಾಬಿನ್ ನಿಂದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದವರೆಗಿನ ಹಳಿ ದ್ವಿಗುಣದ ಕಾಮಗಾರಿಯೂ ಒಟ್ಟಿಗೆ ನಡೆಯಲಿದೆ. ಸದ್ಯ ಇಲ್ಲಿನ ಸೆಂಟ್ರಲ್ ನಿಲ್ದಾಣದಲ್ಲಿ 4 ಪ್ಲಾಟ್ ಫಾರ್ಮ್ ಗಳಿವೆ. ದಿನಾಲೂ ಮೂವತ್ತೈದಕ್ಕೂ ಹೆಚ್ಚು ರೈಲುಗಳು ಇಲ್ಲಿಂದ ಹಾದು ಹೋಗುತ್ತವೆ. [ಮಂಗಳೂರು: ಉಗಾಂಡದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬೆಳ್ತಂಗಡಿ ಯುವಕ]

Mangaluru: New platform for Central Railway Sta

ಹೊಸ ಪ್ಲಾಟ್ ಫಾರ್ಮ್ ನಿರ್ಮಾಣಗೊಂಡರೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಏಕಕಾಲದಲ್ಲಿ ಹೆಚ್ಚಿನ ರೈಲುಗಳಿಗೆ ಪ್ರವೇಶ ಸಿಗಲಿದೆ. ಇದೇ ವೇಳೆ ಮುಂಬೈ - ಮಂಗಳೂರು ಜಂಕ್ಷನ್ ರೈಲನ್ನು ಸೆಂಟ್ರಲ್ ತನಕ ವಿಸ್ತರಿಸಲಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಈಗಾಗಲೇ ಜಂಕ್ಷನ್ ಗೆ ಬಂದು ಹೋಗುವ ರೈಲುಗಳು ಇನ್ನು ಮುಂದೆ ಸೆಂಟ್ರಲ್ ನಿಲ್ದಾಣಕ್ಕೆ ಬಂದು ಹೋಗಬೇಕೆಂಬ ಕೂಗೂ ಕೇಳಿ ಬಂದಿದೆ. ಇನ್ನು ಕಣ್ಣೂರು - ಮಂಗಳೂರು ಜಂಕ್ಷನ್ - ಬೈಂದೂರು ಪ್ಯಾಸೆಂಜರ್ ರೈಲನ್ನು ಮಂಗಳೂರು ಸೆಂಟ್ರಲ್ ಮೂಲಕ ಮಡಗಾಂವ್ ತನಕ ವಿಸ್ತರಿಸಬೇಕೆಂಬ ಬೇಡಿಕೆಯೂ ಇದೆ. [ಎತ್ತಿನಹೊಳೆ ವಿರೋಧಿಸಿ ಫೆ.10ರಿಂದ ಆಮರಣಾಂತ ಉಪವಾಸ]

English summary
It is confirmed that Railway department will construct new platform for Mangaluru Central Railway station, for which Rs. 6.65 crores allotted in the central budget 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X