ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ನ್ಯಾಯಾಲಯ ಆವರಣದಲ್ಲೇ ಬಂಧಿತನಿಂದ ನಕ್ಸಲ್ ಘೋಷಣೆ

ನ್ಯಾಯಾಲಯದ ಆವರಣದಲ್ಲೇ ಬಂಧಿತ ನಕ್ಸಲ್‌ ನಾಯಕನೋರ್ವ ನಕ್ಸಲ್‌ ಪರ ಘೋಷಣೆ ಕೂಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 5: ನ್ಯಾಯಾಲಯದ ಆವರಣದಲ್ಲೇ ಬಂಧಿತ ನಕ್ಸಲ್‌ ನಾಯಕನೋರ್ವ ನಕ್ಸಲ್‌ ಪರ ಘೋಷಣೆ ಕೂಗಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

6 ತಿಂಗಳ ಹಿಂದೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ಬಂಧನಕ್ಕೊಳಗಾಗಿದ್ದ ಚೆನ್ನಿ ರಮೇಶ್‌ (53) ಎಂಬಾತನನ್ನು ಕೋರ್ಟ್ ಆವರಣಕ್ಕೆ ನಿನ್ನೆ ಅಂದರೆ ಮಂಗಳವಾರ ಕರೆತರಲಾಗುತ್ತಿತ್ತು. ಚೆನ್ನಿ ಪೊಲೀಸ್‌ ವಾಹನದಿಂದ ಇಳಿದು ಕೋರ್ಟ್‌ ಆವರಣ ಪ್ರವೇಶಿಸುವವರೆಗೆ ನಕ್ಸಲ್‌ ಪರ ಘೋಷಣೆಗಳನ್ನು ಕೂಗಿ, ಮಾವೋ ವಿಚಾರಗಳಿಗೆ ಜೈಕಾರ ಹಾಕಿದ್ದಾರೆ.[ಮಂಗಳೂರು ಎಎಸ್ಐ ಐತಪ್ಪನ ಮೇಲೆ ಮಾರಣಾಂತಿಕ ಹಲ್ಲೆ]

Mangaluru: Naxal slogan raised in court hall in Belthangady

2013ರಲ್ಲಿ ನಾರಾವಿ ಸಮೀಪದ ಕುತ್ಲೂರು ಎಂಬಲ್ಲಿ ರಾಮಚಂದ್ರ ಭಟ್ ಅವರ ಓಮ್ನಿ ಕಾರು ಮತ್ತು ಬೈಕ್‌ಗೆ ಬೆಂಕಿ ಕೊಟ್ಟು ನಾಶ ಮಾಡಿದ ಆರೋಪದಲ್ಲಿಇವರನ್ನು ಬೆಂಗಳೂರಿನ ಜೆ.ಸಿ.ನಗರ ಪೊಲೀಸರು ಬಂಧಿಸಿದ್ದರು. ಇವರು ಮೂಲತಃ ಬೆಂಗಳೂರಿನ ಕೋರಮಂಗಲ ಸ್ಲಂ ನಿವಾಸಿಯಾಗಿದ್ದಾರೆ.[ಮಂಗಳೂರು: ಮಲ್ಯ ಒಡೆತನದ ಎಂಸಿಎಫ್ ನಲ್ಲಿ ಜಲಕ್ಷಾಮ]

ಈ ಪ್ರಕರಣಕ್ಕೆ ಸಂಬಂಧಿಸಿ ವೇಣೂರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಈ ರೀತಿ ನಕ್ಸಲ್ ಘೋಷಣೆಗಳನ್ನು ಕೂಗಿದ್ದಾರೆ.

English summary
A person arrested under Naxal charges raised Naxal slogens in court hall here in Belthangady talluk of Dakshina Kannada district on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X