ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಫೇಸ್‌ಬುಕ್ ಉಗ್ರರು!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಡಿ.5 :'ಮುಸ್ಲಿಂ ಯುವತಿಯರು ಕಾಲೇಜಿಗೆ ಹೋಗುವಾಗ ಎಚ್ಚರಿಕೆಯಿಂದ ಹೋಗಬೇಕು. ಅನ್ಯ ಕೋಮಿನ ಸಹಪಾಠಿಗಳೊಂದಿಗೆ ಮಾತನಾಡುವ ಹಾಗಿಲ್ಲ' ಇಂತಹ ಎಚ್ಚರಿಕೆ ಕೊಟ್ಟಿರುವುದು 'ಮುಸ್ಲಿಂ ರಕ್ಷಣಾ ಪಡೆ' ಅನ್ನುವ ಫೇಸ್‍ಬುಕ್ ಪುಟದಲ್ಲಿ.

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಉಗ್ರರಂತೆ ಬಾವುಟ ಹಿಡಿದು ಕೊಂಡಿರುವ ಯುವಕರ ಗುಂಪೊಂದು ಬೆದರಿಕೆಯ ಸಂದೇಶಗಳನ್ನು ಫೇಸ್‌ಬುಕ್‌ಪುಟದಲ್ಲಿ ಹಾಕುತ್ತಿದೆ. ಮಂಗಳೂರು ಮೂಲದ ಕೆಲ ಮುಸ್ಲಿಂ ಯುವಕರು ಇಂತಹದ್ದೊಂದು ಪುಟವನ್ನು ತೆರೆದಿದ್ದು, ಮುಸ್ಲಿಂ ಯುವತಿಯರಿಗೆ ಹಾಗೂ ಹಿಂದೂ ಯುವಕರಿಗೆ ಬೆದರಿಕೆ ಹಾಕುತ್ತಿದ್ದಾರೆ.

ಎಚ್ಚರಿಕೆಗಳು : 'ಮುಸ್ಲಿಂ ಯುವತಿಯರೇ ಎಚ್ಚರಿಕೆ, ನೀವು ಅನ್ಯಕೋಮಿನ ಯುವಕರೊಂದಿಗೆ ಸುತ್ತಾಡುವುದು ಕಂಡು ಬಂದರೆ ನಮ್ಮ ತಂಡದ ಸದಸ್ಯರು ಆಕ್ರಮಣ ಮಾಡಲಿದ್ದಾರೆ' ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ಫೇಸ್‌ಬುಕ್ ಉಗ್ರರು ಹೇಳಿಕೊಂಡಿದ್ದಾರೆ.

MSD

ಶಾಪಿಂಗ್ ಮಾಲ್‌ನಲ್ಲಿ ತಿರುಗಾಡಬೇಡಿ : ಕಾಲೇಜು ತರಗತಿಗಳನ್ನು ಬಿಟ್ಟು ಮಂಗಳೂರಿನ ಕೆಲವೊಂದು ಶಾಪಿಂಗ್ ಮಾಲ್‍ಗಳಲ್ಲಿ ಮುಸ್ಲಿಂ ಹುಡುಗಿಯರು ಸುತ್ತಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ತಕ್ಷಣವೇ ಎಚ್ಚೆತ್ತುಕೊಳ್ಳಿ, ಇಲ್ಲದೇ ಇದ್ದಲ್ಲಿ ದಾಳಿ ನಡೆಸುತ್ತೇವೆ ಎಂದು ಫೇಸ್‌ಬುಕ್ ಉಗ್ರರು ಎಚ್ಚರಿಸಿದ್ದಾರೆ. [ಮಂಗಳೂರಿನಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ]

ಎಲ್ಲಾ ಕಾಲೇಜುಗಳಲ್ಲಿ 'ಮುಸ್ಲಿಂ ಡಿಫೆನ್ಸ್ ಪೋರ್ಸ್' ತಂಡದ ಸದಸ್ಯರಿದ್ದಾರೆ. ನಿಮ್ಮ ಕಾಲೇಜು ಡೇ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಹಿಂದೂ ಹುಡುಗರ ಜೊತೆ ಕಾಣಿಸಿಕೊಂಡರೆ ಅನಿವಾರ್ಯವಾಗಿ ನಿಮ್ಮ ಮೇಲೆ ದಾಳಿ ನಡೆಸಬೇಕಾದಿತು ಎಂದು ಇವರು ಹಾಕಿರುವ ಸಂದೇಶ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.

collage

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಈಗಾಗಲೇ ಹಲವು ಬಾರಿ ದಾಳಿ ನಡೆದಿದೆ. ಸದ್ಯ ಈ ಫೇಸ್‌ಬುಕ್ ಉಗ್ರರ ಎಚ್ಚರಿಕೆಯಿಂದಾಗಿ ಕಾಲೇಜು ವಿದ್ಯಾರ್ಥಿಗಳು ಆತಂಕಗೊಂಡಿದ್ದು, ಇವರನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪೊಲೀಸ್ ಆಯುಕ್ತರು ಹೇಳುವುದೇನು : ಫೇಸ್‌ಬುಕ್ ಉಗ್ರರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಹೀತೇಂದ್ರ ಅವರು, ಇಂತಹ ಎಚ್ಚರಿಕೆ ಸಂದೇಶಗಳು ಹರಿದಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ, ಈ ಕುರಿತು ಯಾರೂ ಇದುವರೆಗೂ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ.

English summary
'If we see non-Muslims talking to our girls we will break their bones' warned A Facebook group Muslim Defence Force (MDF). Moral policing on the rise in Mangaluru, Karnataka. Police Commissioner Hithendra said, issue has come to attention. But as no one has lodged a complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X