ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಮೇಯರ್ ಗಾದಿಗೆ ಮಹಿಳೆಯರದ್ದೇ ಬಿಗ್ ಫೈಟ್

By Sachhidananda Acharya
|
Google Oneindia Kannada News

ಮಂಗಳೂರು, ಫೆಬ್ರವರಿ 24: ಮುಂದಿನ ಮಂಗಳೂರು ಮೇಯರ್ ಯಾರು ಎಂಬ ವಿಷಯದಲ್ಲಿ ಮಂಗಳೂರು ನಗರ ಕೇಂದ್ರಿತ ಕಾಂಗ್ರೆಸ್ ನಲ್ಲಿ ದೊಡ್ಡ ಹಗ್ಗ ಜಗ್ಗಾಟವೇ ನಡೆಯುತ್ತಿದೆ. ಮೇಯರ್ ಆಯ್ಕೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಕೊನೆಯ ಕ್ಷಣದ ಕಾರ್ಯಾಚರಣೆಗಳು ಗರಿಗೆದರಿವೆ.

ಈ ಬಾರಿ ಮಹಿಳಾ ಮೀಸಲಾತಿ ಬಂದಿರುವುದರಿಂದ ಬಹುಮತ ಹೊಂದಿರುವ ಕಾಂಗ್ರೆಸ್‌ನ ಎಲ್ಲಾ 14 ಮಹಿಳಾ ಕಾರ್ಪೋರೇಟರ್‌ಗಳು ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದಾರೆ.

Mangaluru Mayor Election 2017: Big fight between Prathiba Kulai and Kavitha Sanil

ಮೇಯರ್ ಕುರ್ಚಿ ಆಕಾಂಕ್ಷಿಗಳಾದ ಕವಿತಾ ಸನಿಲ್ ಮತ್ತು ಪ್ರತಿಭಾ ಕುಳಾಯಿ ಒಬ್ಬರನ್ನು ಮೀರಿ ಮತ್ತೊಬ್ಬರು ಪ್ರಭಾವಿಗಳ ಮೂಲಕ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಇವರ ಮಧ್ಯೆ ಕಳೆದ ಸಾಲಿನಲ್ಲಿ ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬಂದ ಅಪ್ಪಿ ಕೂಡಾ ಮೇಯರ್ ಹುದ್ದೆಗೆ ಆಕಾಂಕ್ಷಿಯಾಗಿದ್ದಾರೆ. ಆದರೆ ಕವಿತಾ ಸನಿಲ್ ಹಾಗೂ ಪ್ರತಿಭಾ ಕುಳಾಯಿ ಮಧ್ಯೆಯೇ ತುರುಸಿನ ಸ್ಪರ್ಧೆ ಹೆಚ್ಚಿದೆ.

ಪ್ರತಿಭಾ ಪರ ಬ್ಯಾಟಿಂಗ್
ಪ್ರತಿಭಾ ಉನ್ನತ ಶಿಕ್ಷಣ ಪಡೆದ ಕಾರ್ಪೋರೇಟರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್‌ಡಬ್ಲ್ಯು ಪದವಿ, ತಮಿಳುನಾಡಿನ ಸೇಲಂ ವಿಶ್ವವಿದ್ಯಾಲಯದಿಂದ ಎಂಎ ಇಂಗ್ಲಿಷ್ ಪದವಿ ಪಡೆದಿದ್ದಾರೆ. ಆದ್ದರಿಂದ ಮೇಯರ್ ಸ್ಥಾನಕ್ಕೆ ಇವರೇ ಸೂಕ್ತರು ಎಂಬ ಅಭಿಪ್ರಾಯ ಪಕ್ಷದಲ್ಲಿದೆ ಎನ್ನಲಾಗಿದೆ.

ಈಗಾಲೆ ಪ್ರತಿಭಾರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ಸುರತ್ಕಲ್ ವಲಯ ಕಾಂಗ್ರೆಸ್ ಮುಖಂಡರು ಶಾಸಕ ಮೊಯ್ದೀನ್ ಬಾವಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮೇಲೆ ಒತ್ತಡವನ್ನೂ ಹೇರುತ್ತಿದ್ದಾರೆ.

ಹೀಗೆ ಪ್ರಭಾವ, ಬಹುತೇಕ ಕಾರ್ಪೋರೇಟರ್‌ಗಳ ಬೆಂಬಲ ಇರುವುದರಿಂದ ಪ್ರತಿಭಾ ಕುಳಾಯಿ ಮಂಗಳೂರು ಮೇಯರ್ ಹುದ್ದೆ ಗೆಲ್ಲುವ ಅವಕಾಶ ಹೆಚ್ಚಾಗಿದೆ.

English summary
Prathiba Kulai seems to be winning candidate in Mangaluru Municipality Corporation election 2017. Her well education and huge followers may bring Prathiba to the Mayor darbar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X