ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾನ್ ಫಿನ್ ನೆರವು, ಕಾವೂರಿನ ಶಾಲೆಗೆ ಹೊಸ ಹೊಳಪು

ಮಂಗಳೂರಿನ ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ನವೀಕರಣಗೊಂಡ ಶಾಲಾ ಕಟ್ಟಡದ ಉದ್ಘಾಟನೆ ಸೋಮವಾರ ನೆರವೇರಿತು. ಕ್ಯಾನ್ ಪಿನ್ ಹೋಮ್ಸ್ ಲಿಮಿಟೆಡ್‌ನವರು 10 ಲಕ್ಷ ರೂಪಾಯಿ ನವೀಕರಣ ಕಾರ್ಯಕ್ಕಾಗಿ ನೀಡಿದ್ದರು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 20: ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ನವೀಕರಣಗೊಂಡಿದೆ. ಶಾಲಾ ಕಟ್ಟಡದ ಉದ್ಘಾಟನೆ ಸೋಮವಾರ(ಫೆ.20) ನೆರವೇರಿತು. ಕ್ಯಾನ್ ಪಿನ್ ಹೋಮ್ಸ್ ಲಿಮಿಟೆಡ್‌ನವರು 10 ಲಕ್ಷ ರೂಪಾಯಿ ನವೀಕರಣ ಕಾರ್ಯಕ್ಕಾಗಿ ನೀಡಿದ್ದರು.

ಕ್ಯಾನ್ ಫಿನ್ ಹೋಮ್ ಲಿಮಿಟೆಡ್‌ನ ಪ್ರಬಂಧಕ ಉಮೇಶ್ ಪೈ ಅವರು ಉದ್ಘಾಟನೆ ಮಾಡಿ ಮಾತನಾಡಿ, ' ನಮ್ಮ ಮುಂದಿರುವಂತಹ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸತ್ಪ್ರಜೆಗಳಾಗಿ ದೇಶದ ಏಳ್ಗೆಗಾಗಿ ಜೀವನ ನಡೆಸಿರಿ' ಎಂದರು.

Mangaluru : Kavooru High School re inaugurated

ಇದೇ ವೇಳೆ ಮಾತನಾಡಿದ ಮುಖ್ಯ ಅತಿಥಿ, ಮಂಗಳೂರು ಉತ್ತರ ವಲಯ ಶಿಕ್ಷಣಾಧಿಕಾರಿ ಮಂಜುಳಾ, ' ಒದಗಿಸಿದ ಸೌಲಭ್ಯಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಸಂವಹನ ಕೌಶಲ್ಯ ಬೆಳೆಸಿಕೊಳ್ಳಲು ಸಹಕಾರಿಯಾಗಬೇಕೆಂದು ' ಹೇಳಿದರು.

Mangaluru : Kavooru High School re inaugurated

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಪೋರೇಟರ್ ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಮಧುಕಿರಣ್ ರಾವ್ , ' ಕ್ಯಾನ್ ಫಿನ್ ಹೋಮ್ಸ್ ರವರ ಉದಾರತೆಯು ಸಮಾಜದ ಉಳಿದ ಸಂಘ ಸಂಸ್ಥೆಗಳಲ್ಲಿ ಇದ್ದಲ್ಲಿ ವಿದ್ಯಾ ಸಂಸ್ಥೆಗಳು ಬೆಳೆಯುತ್ತವೆ. ಅದರ ಉಪಯೋಗ ಬಡ ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ ' ಎಂದು ಅವರು ಹೇಳಿದರು.
Mangaluru : Kavooru High School re inaugurated

ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಸುಧೀರ್ ರಾಜ್, ಸುಮಂತ್ ರಾವ್ ,ಫೆಲ್ಸಿ ರೇಗೋ, ರಮಾನಂದ ಭಂಡಾರಿ ,ಜಗದೀಶ್,, ನಾಗೇಶ್ ನಾಯಕ್ ಮತ್ತಿತರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಮಲ್ಲೇಶ್ ನಾಯ್ಕ್ ಎ.ಸಿ ಸ್ವಾಗತಿಸಿದರು. ಸಹ ಶಿಕ್ಷಕ ನಾಗೇಶ್ ನಾಯಕ್ ವಂದನಾರ್ಪಣೆಗೈದರು. ಸುಭಾಷಿಣಿ ಕಾರ್ಯಕ್ರಮ ನಿರೂಪಿಸಿದರು.

English summary
Mangaluru : Kavooru High School re inaugurated today(Feb 20) by Can fin home Ltd Manager Umesh Pai. Can fin homes donted Rs 10 lakh for the facelift of the school building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X