ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಏಪ್ರಿಲ್ 19 ರಂದು ಪತ್ರಕರ್ತರ ಕ್ರೀಡಾಕೂಟ

|
Google Oneindia Kannada News

ಮಂಗಳೂರು, ಏ. 1 : ದಕ್ಷಿಣ ಕನ್ನಡ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಏಪ್ರಿಲ್ 19 ಭಾನುವಾರ ಬೆಳಗ್ಗೆ 9.30ರಿಂದ ನಗರದ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕ್ರೀಡಾಕೂಟದಲ್ಲಿ 100 ಮೀ. 200 ಮೀ., 400 ಮೀ .ಓಟ, ಬಾಲ್ ಪಾಸಿಂಗ್, ಸಂಗೀತ ಕುರ್ಚಿ , ಮೂರುಕಾಲಿನ ಓಟ, ಗೋಣಿಚೀಲ ಓಟ, ವಾಕಿಂಗ್, ಸ್ಲೋ ಬೈಕ್ ರೇಸ್, ಹಗ್ಗಜಗ್ಗಾಟ, ಕ್ರಿಕೆಟ್ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ತಿಳಿಸಿದ್ದಾರೆ.[ಮಂಗಳೂರು-ಹರಿದ್ವಾರ ನಡುವೆ ವಿಶೇಷ ರೈಲು ಸಂಚಾರ]

sports

ಕ್ರೀಡಾಕೂಟದ ನಿಯಮಗಳು
1. ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ, ಛಾಯಾಗ್ರಾಹಕರಿಗೆ ಮತ್ತು ಸಿಬ್ಬಂದಿಗೆ ಮಾತ್ರ ಅವಕಾಶ.
2. ಸ್ಪರ್ಧೆಗಳಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳು ಸಂಘದ ಅಥವಾ ಸಂಸ್ಥೆಯ ಗುರುತು ಚೀಟಿ ಹೊಂದಿರಬೇಕು.
3. ಗುಂಪು ಆಟಗಳಿಗೆ ಪ್ರತ್ಯೇಕವಾಗಿ ಸಂಸ್ಥೆಗಳ ಹೆಸರಿನಲ್ಲಿ ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವ ತಂಡಗಳು ಎಪ್ರಿಲ್ 8 ರ ಮೊದಲು ಪ್ರೆಸ್ ಕ್ಲಬ್ ನಲ್ಲಿ ಹೆಸರು ನೋಂದಾಯಿಸಬೇಕು.[ಮಂಗಳೂರು : ಪಾಲಿಕೆ ಬಜೆಟ್ ಮುಖ್ಯಾಂಶಗಳು]
4. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಬೆಳಗ್ಗೆ ಏ.19 ರಂದು ಬೆಳಗ್ಗೆ 10:30ಕ್ಕೆ ಕ್ರೀಡಾಂಗಣದಲ್ಲಿ ಕಡ್ಡಾಯವಾಗಿ ಹಾಜರಿರಬೇಕು.
5. ಯಾವುದೇ ಸ್ಪರ್ಧೆಯನ್ನು ರದ್ದುಪಡಿಸುವ ಅಧಿಕಾರ ಸಂಘಟಕರಿಗಿರುತ್ತದೆ.
6. ಸ್ಪರ್ಧೆಯಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ, 9448103870, 9845755160 ಮತ್ತು 9880271904 ಸಂಪರ್ಕಿಸಬಹುದು.

English summary
Mangaluru: Dakshina Kannada District Working Journalists Association and Mangalore Press Club will organise annual sports meet 2015 for journalists at St Aloysius College grounds on April 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X