ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ,1ರಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸರ್ವೀಸ್

ಏಪ್ರಿಲ್ 1 ರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸರ್ವೀಸ್ ಸೌಲಭ್ಯ ಆರಂಭಗೊಳ್ಳಲಿದೆ. ರಾಜ್ಯದಲ್ಲೇ ಇ-ವೀಸಾ ಸರ್ವೀಸ್ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

By ಐಸ್ಯಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮಾರ್ಚ್. 29 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಇ-ವೀಸಾ ಸರ್ವೀಸ್ ಇದೇ ಏಪ್ರಿಲ್ 01ರಿಂದ ಆರಂಭಗೊಳ್ಳಲಿದೆ.

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ ಇದೆ. ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸರ್ವೀಸ್ ಆರಂಭವಾಗಿರುವುದರಿಂದ ರಾಜ್ಯದಲ್ಲೇ ಇ ವೀಸಾ-ಸರ್ವೀಸ್ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.[24*7 ಕಾರ್ಯನಿರ್ವಹಿಸಲಿದೆ ಮಂಗಳೂರು ವಿಮಾನ ನಿಲ್ದಾಣ]

ಈ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಟಿ ರಾಧಾಕೃಷ್ಣ, ಇ-ವೀಸಾ ಸೌಲಭ್ಯದಿಂದ ವಿದೇಶಿ ಪ್ರವಾಸಿಗರಿಗೆ, ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಮತ್ತು ವ್ಯಾಪಾರಸ್ಥರಿಗೆ ಬಹಳಷ್ಟು ಪ್ರಯೋಜನ ಇರುವುದರಿಂದ ಈ ಸೌಲಭ್ಯವನ್ನು ಏಪ್ರಿಲ್ 1 ರಿಂದ ಆರಂಭಿಸಲಿದ್ದೇವೆ.

Mangaluru International Airport to offer e-Visa facility from April 1st

ಇದಕ್ಕಾಗಿಯೇ ಪ್ರಯಾಣಿಕರ ಬೆರಳಚ್ಚು ತೆಗೆದುಕೊಳ್ಳಲು ಎರಡು ವಿಶೇಷ ಕೌಂಟರ್ ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಪ್ರಯಾಣಿಕರು ಇ-ವೀಸಾದ ಪ್ರಿಂಟ್ ಔಟ್ ನ್ನು ತಮ್ಮ ಟ್ಯಾಬ್ ಅಥವಾ ಸ್ಮಾರ್ಟ್ ಫೋನ್ ನಲ್ಲಿ ಹೊಂದಿದ್ದರೆ ಕೆಲಸ ಮತ್ತಷ್ಟು ವೇಗವಾಗಿ ನಡೆಯುವುದು ಎಂದರು.

ಏನಿದು ಇ-ವೀಸಾ?:
ಇ-ವೀಸಾ ಎನ್ನುವುದು ಎಲೆಕ್ಟ್ರಾನಿಕ್ ತಂತ್ರಜ್ಞಾನದ ಮೂಲಕ ನೀಡಲಾಗುವ ವೀಸಾ. ಇದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕವೇ ವೀಸಾ ಮಂಜೂರಾಗುತ್ತದೆ.[ಮಂಗಳೂರು ವಿಮಾನ ನಿಲ್ದಾಣದಲ್ಲಿ ದಿನದ 24 ಗಂಟೆ ರಾಷ್ಟ್ರಧ್ವಜ ಹಾರಾಟ]

ಇಲ್ಲಿ ಸಮಯ ಮತ್ತು ಕಾಗದದ ಉಳಿತಾಯ ಆಗುವುದು ಮಾತ್ರವಲ್ಲದೆ ಹೆಚ್ಚು ಭದ್ರತೆ ಹೊಂದಿರುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ವೀಸಾ ಪಡೆಯಲು ಸುದೀರ್ಘ ಅರ್ಜಿ ಪ್ರಕ್ರಿಯೆ ಇದೆ. ವಿದೇಶ ಪ್ರಯಾಣ ಮಾಡುವವರು ಅರ್ಜಿ ಜತೆಗೆ ತಮ್ಮ ಮೂಲ ಪಾಸ್ ಪೋರ್ಟ್ ನ್ನು ಸಲ್ಲಿಸಬೇಕು.

ಈ ವೀಸಾ ಪ್ರಕ್ರಿಯೆಗೆ ಸುಧೀರ್ಘ ಅವಧಿ ತೆಗೆದುಕೊಳ್ಳುತ್ತಿದೆಯಾದರೂ ಇದರ ಸಿಂಧುತ್ವ ಬಹುಕಾಲ ಉಳಿಯುತ್ತದೆ. ಹಾಗೂ ಅಧಿಕ ಎಂಟ್ರಿಗಳನ್ನು ಇದರಲ್ಲಿ ನಮೂದಿಸಲು ಅವಕಾಶವಿದೆ.

ಆದರೆ, ಇ-ವೀಸಾ ಅಲ್ಪಾವಧಿಯದ್ದಾಗಿದ್ದು, ಇದನ್ನು ಪ್ರವಾಸಿಗಳ ಅನುಕೂಲಕ್ಕೆ ಪರಿಚಯಿಸಲಾಗಿದೆ. ಭಾರತದಲ್ಲಿ ಇದನ್ನು ಇ-ಟೂರಿಸ್ಟ್ ವೀಸಾ ಎಂಬುದಾಗಿ ಹೆಸರಿಸಲಾಗಿದೆ.

ಇದನ್ನು ಹೊಂದಿದವರು ಗರಿಷ್ಠ ಎಂದರೆ ಭಾರತದಲ್ಲಿ 30 ದಿನ ಮಾತ್ರ ಉಳಿಯಬಹುದು. ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಎರಡು ಬಾರಿ ಇ-ವೀಸಾ ಪಡೆಯಬಹುದಾಗಿದೆ.

ಇ-ವೀಸಾ ಪಡೆಯಲು ಪ್ರವಾಸಿಗರು ವಿದೇಶದಿಂದ ಭಾರತದ ವಿಮಾನ ಏರುವ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿಮಾನದಲ್ಲಿ ಪ್ರಯಾಣಿಸಿ ಭಾರತದಲ್ಲಿ ಇಳಿದ ಬಳಿಕ ಅಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಅದನ್ನು ಪರಿಶೀಲಿಸಿ ನಿಲ್ದಾಣದಿಂದ ಹೊರಗೂ ಹೋಗಲು ಅನುಮತಿ ನೀಡುತ್ತಾರೆ.

ಬೆಂಗಳೂರು, ಚೆನ್ನೈ, ಕೊಚ್ಚಿನ್, ದೆಹಲಿ, ಗೋವಾ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ತಿರುವಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಇ-ವೀಸಾ ಪರಿಶೀಲನೆ ವ್ಯವಸ್ಥೆ ಇದೆ.

ಇದೀಗ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೂಡ ಇ-ವೀಸಾ ಸೌಲಭ್ಯ ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಲಿದೆ.

English summary
Mangaluru International Airport (MIA) will offer e-Visa Services to flyers from April 1st. With this, MIA will become second airport in state after Kempegowda International Airport offer this much needed facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X