ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಸ್ಲಾಂ ವಿರುದ್ಧದ ಹೇಳಿಕೆಗೆ ಅನಂತ್ ವಿರುದ್ಧ ಮುಸ್ಲಿಮರು ಕೆಂಡ

|
Google Oneindia Kannada News

ಮಂಗಳೂರು, ಮಾರ್ಚ್, 01: ಇಸ್ಲಾಂ ಧರ್ಮದ ವಿರುದ್ಧ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿರುದ್ಧ ಇದೀಗ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಅವರನ್ನು ಬಂಧಿಸುವಂತೆ ಆಗ್ರಹಿಸಿವೆ.

ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ "ಇಸ್ಲಾಂ ಇರುವವರೆಗೆ ಭಯೋತ್ಪಾದನೆ ನಿರ್ಮೂಲನೆ ಸಾಧ್ಯವಿಲ್ಲ" ಎಂಬ ಹೇಳಿಕೆ ನೀಡಿದ್ದು ಸಂವಿಧಾನ ವಿರೋಧಿಯಾಗಿದೆ. ಇದು ಅವರ ಮುಸ್ಲಿಂ ವಿರೋಧಿ ಚಿಂತನೆಯ ಪ್ರತಿಫಲನವಾಗಿದ್ದು ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಆಗ್ರಹಿಸಿದ್ದಾರೆ.[ಅನೈತಿಕ ಚಟುವಟಿಕೆ ಕೇಂದ್ರವಾದ ಕದ್ರಿ ಉದ್ಯಾನವನ]

Mangaluru: Institutions demands to arrest MP Anant Kumar Hegde

ದೇಶದ ಏಕತೆಯನ್ನು ಎತ್ತಿ ಹಿಡಿಯಬೇಕಾದ ಸಂಸದರು ಈ ರೀತಿಯ ಹೇಳಿಕೆಯನ್ನು ನೀಡಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮಾನವೀಯ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುವ ಇಸ್ಲಾಂ ಧರ್ಮದ ಬಗ್ಗೆ ಈ ರೀತಿಯ ಆರೋಪ ಹೊರಿಸಿರುವುದು ಸಂಘಪರಿವಾರದ ಫ್ಯಾಶಿಷ್ಟ್ ಚಿಂತನೆಯ ಭಾಗ. ಈ ಹೇಳಿಕೆಯ ಮೂಲಕ ಮುಸ್ಲಿಮರ ಬಗೆಗಿನ ಬಿಜೆಪಿಯ ನಿಲುವು ಮತ್ತೊಮ್ಮೆ ಸಾಬೀತಾಗಿದೆ. ಆದುದರಿಂದ ಇದರ ವಿರುದ್ಧ ಎಲ್ಲಾ ಜಾತ್ಯತೀತ ಶಕ್ತಿಗಳು ಒಂದಾಗಿ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.[ಸೌಹಾರ್ದತೆ, ಸಮಯಪ್ರಜ್ಞೆ ಮೆರೆದ ಬಂಟ್ವಾಳದ ಅಬ್ದುಲ್ ನನ್ನು ಶ್ಲಾಘಿಸಿ]

ಇಸ್ಲಾಂ ಧರ್ಮದೊಂದಿಗೆ ಭಯೋತ್ಪಾದನೆಯನ್ನು ತಳಕು ಹಾಕಿ ಸಂಸದ ಅನಂತ ಹೆಗಡೆ ಬಾಲಿಶವಾದ ಹೇಳಿಕೆಯನ್ನು ನೀಡಿರುವುದು ಖಂಡನೀಯವಾಗಿದ್ದು, ಇಸ್ಲಾಂ ಧರ್ಮ ಇರುವುದರಿಂದ ಭಯೋತ್ಪಾದನೆ ಇದೆ ಅನ್ನುವ ಅವರ ಹೇಳಿಕೆ ಮೂರ್ಖತನದ ಪರಮಾವಧಿಯಾಗಿದೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸ ಅದಿ ಆರೋಪಿಸಿದ್ದಾರೆ.

ಇಸ್ಲಾಂ ಧರ್ಮ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವು ಇಸ್ಲಾಂ ದಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಧರ್ಮವಾಗಿದೆ. ಮಕ್ಕಾ ಸ್ಫೋಟ, ಮಾಲೆಂಗಾವ್ ಸ್ಫೋಟ, ಸಂಜೋತ ಎಕ್ಸ್ ಪ್ರೆಸ್ ಸ್ಫೋಟ ದ ಹೆಸರಿನಲ್ಲಿ ಬಂಧಿತರಾಗಿ ಜೈಲಿನೊಳಗೆ ಕಳೆಯುತ್ತಿರುವರು, ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜವನ್ನು ಹಾರಿಸಿ ಮುಸ್ಲಿಂ ಸಮುದಾಯದ ವಿರುದ್ಧ ಅಪವಾದ ಹೊರಿಸಿದವರು ಯಾರು ಎಂಬುದಕ್ಕೆ ಹೆಗಡೆಯವರೇ ಉತ್ತರ ಹೇಳಬೇಕು ಎಂದಿದ್ದಾರೆ.["ಕನ್ಹಯ್ಯ ಕುಮಾರ್‌ಗೆ ನಾವೆಲ್ಲ ಧನ್ಯವಾದ ಅರ್ಪಿಸಬೇಕು"!]

ಸಂಸದರ ಮಾತು ಸಂಘ ಪರಿವಾರಗಳ ಒಳ ಅಜೆಂಡಾವನ್ನು ಪ್ರತಿಧ್ವನಿಸುತ್ತಿದ್ದು, ಭವಿಷ್ಯದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಭಯೋತ್ಪಾದನೆಯೊಂದಿಗೆ ಧರ್ಮವನ್ನು ಸಮೀಕರಿಸಬೇಡಿ ಎಂದು ಸ್ವತಃ ಪ್ರಧಾನಿಯವರು ಹೇಳಿಕೆ ನೀಡುತ್ತಿರುವಾಗ ಅದಕ್ಕೆ ತದ್ವಿರುದ್ಧವಾಗಿ ಆಡಳಿತ ಪಕ್ಷದ ಸಂಸದರೇ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಚುನಾಯಿತ ಸರಕಾರದ ಘನತೆಯನ್ನೇ ಪ್ರಶ್ನಿಸಿದಂತಿದೆ ಎಂದು ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿ ಹೇಳಿದ್ದಾರೆ.

ಅಪರಾಧ ಕೃತ್ಯಕ್ಕೆ ಧಾರ್ಮಿಕ ನಂಟನ್ನು ಕಲ್ಪಿಸುವುದು ತೀರಾ ಬಾಲಿಶ. ಸಂಸದರಾಗಿ ನಾಲಗೆ ಮತ್ತು ಪದಗಳ ಮೇಲೆ ಹಿಡಿತವಿರಿಸಬೇಕಾಗಿದ್ದ ಹೆಗಡೆಯವರು ಇಸ್ಲಾಮಿನ ಬಗ್ಗೆ ಹಗುರವಾಗಿ ಮಾತನಾಡಿ, ತನ್ನ ಗೌರವವನ್ನೇ ಮಣ್ಣುಪಾಲು ಮಾಡಿಕೊಂಡಿದ್ದಾರೆ. ಈ ಬಗೆಯ ವರ್ತನೆಯು ಅತ್ಯಂತ ಹೀನ ಮತ್ತು ಆತಂಕಕಾರಿಯಾದುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ.

English summary
Popular Front of India and other Islamic organizations have demanded action against Uttara Kannada MP, BJP leader Anant Kumar Hegde for provocative statement given by him against Muslims. Hegde had told, terrorism cannot be eradicated as long as Islam exists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X