ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರದ ವಿರುದ್ಧ ಮಂಗಳೂರು ವೈದ್ಯರ ಜನಾಂದೋಲನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 29 : ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಅತ್ಯಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜಾಗೃತಿ ಮೂಡಿಸುವ ಘೋಷಣಾ ಫಲಕಗಳನ್ನು ಮೈ ಮೇಲೆ ಹಾಕಿಕೊಂಡು ಏಕಾಂಗಿಯಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.

ಮೂಲತಃ ಕೇರಳದ ಚೆನ್ನನೂರು ನಿವಾಸಿಯಾದ ನೋಯಲ್ ಮ್ಯಾಥ್ಯೂ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಮಳೆ ಬರಲಿ, ಬಿಸಿಲಿರಲಿ ಅತ್ಯಾಚಾರದ ವಿರುದ್ಧ ಜಾಗೃತಿ ಮೂಡಿಸಲು ಗಂಟೆಗಳ ಕಾಲ ಮೌನವಾಗಿ ನಿಂತಿರುತ್ತಾರೆ. [ರೇಪ್ ಬಗ್ಗೆ ಹೇಳಿಕೆ, ಸಲ್ಮಾನ್ ವಿರುದ್ಧ ಕೇಸ್, ನೋಟಿಸ್]

mangalore doctor

ನಿಮಗೆ ಗೊತ್ತಿರುವವರು ಅತ್ಯಾಚಾರಕ್ಕೆ ಒಳಗಾದಾಗ ಮಾತ್ರ ಧ್ವನಿ ಎತ್ತುವಿರಾ? ಎಂಬ ಘೋಷಣೆಯನ್ನು ಕನ್ನಡ, ಇಂಗ್ಲಿಷ್‌ನಲ್ಲಿಯೂ ಬರೆಸಿಕೊಂಡು ಮೈಮೇಲೆ ನೇತು ಹಾಕಿಕೊಂಡಿದ್ದಾರೆ. ಈ ಘೋಷಣೆಗಳನ್ನು ಬರುವ ಎಲ್ಲಾ ವಾಹನಗಳಿಗೆ, ಸಾರ್ವಜನಿಕರಿಗೆ ತೋರಿಸುತ್ತಾರೆ. [ಅತ್ಯಾಚಾರ ಎಸಗಿದವರ ಕೈಕಾಲು ಕತ್ತರಿಸಿ: ಮೋಟಮ್ಮ]

'ಅತ್ಯಾಚಾರಕ್ಕೆ ಒಳಗಾದವರು ಎಲ್ಲೆ ಇರಲಿ ಅವರ ಪರ ನಾವು ನಿಲ್ಲಬೇಕು. ನಮ್ಮ ಸಂಬಂಧಿಕರು, ಪರಿಚಿತರಿಗೆ ಆದರೆ ಮಾತ್ರ ಅವರ ಪರ ನಿಲ್ಲುವುದಲ್ಲ ಎಂಬುದು ಈ ಜಾಗೃತಿಯ ಉದ್ದೇಶವಾಗಿದೆ' ಎನ್ನುತಾರೆ ಡಾ. ನೋಯಲ್ ಮ್ಯಾಥ್ಯೂ. ['ಗ್ಯಾಂಗ್ ರೇಪ್ ಜೈಲುವಾಸ ನನ್ನ ಹೋರಾಟಕ್ಕೆ ಪ್ರೇರಣೆ']

ಮಂಗಳೂರು ಫಾದರ್ ಮುಲ್ಲರ್‌ನಲ್ಲಿಯೇ ಎಂಬಿಬಿಎಸ್ ಮಾಡಿ ಈಗ ಅಲ್ಲಿಯೇ ವೈದ್ಯರಾಗಿರುವ ಇವರು ಓದುತ್ತಿರುವಾಗಲೇ ಅತ್ಯಾಚಾರದ ವಿರುದ್ಧ ಜಾಗೃತಿ ಮೂಡಿಸಬೇಕು ಎಂಬ ಕನಸಿತ್ತು. ದಿಲ್ಲಿ ನಿರ್ಭಯಾ ಪ್ರಕರಣ, ಮಣಿಪಾಲ ಗ್ಯಾಂಗ್ ರೇಪ್ ಮತ್ತಿತರ ಪ್ರಕರಣಗಳು ಒಂದರ ಹಿಂದೆ ಒಂದರಂತೆ ಕೇಳುತ್ತಿರುವಾಗ ಜಾಗೃತಿ ಮೂಡಿಸಬೇಕು ಎಂದು ನಿರ್ಧರಿಸಿದ್ದರು.

doctor

ಕಳೆದ ಮೇ 16 ರಂದು ಕೊಚ್ಚಿನ್‌ನಲ್ಲಿ ರಸ್ತೆ ಬದಿ ನಿಲ್ಲುವ ಮೂಲಕ ಡಾ. ನೋಯೆಲ್ ಮ್ಯಾಥ್ಯೂ ಜಾಗೃತಿ ಆರಂಭಿಸಿದ್ದಾರೆ. ಮೇ 29 ರಂದು ಮಂಗಳೂರಿನಲ್ಲಿ, ಜೂನ್ 6 ರಂದು ಬೆಂಗಳೂರಿನಲ್ಲಿ, ಕಳೆದ ವಾರ ಕುಂದಾಪುರದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದ್ದಾರೆ.

'2017ರ ಏಪ್ರಿಲ್ ವರೆಗೆ ದೆಹಲಿ, ಚೆನ್ನೈ ಸೇರಿದಂತೆ ನಾನಾ ನಗರದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೌನವಾಗಿ ಫಲಕಗಳನ್ನು ಹಿಡಿಯುವ ಮೂಲಕ ಜಾಗೃತಿ ನಡೆಸುವುದಾಗಿ' ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

mangaluru
English summary
Mangaluru doctor struggle to spread awareness about rape. Noel Mathew basically form Kerala and working as a doctor at Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X