ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಬಳಬೆಟ್ಟು ಸಿಡಿಮದ್ದು ಸ್ಫೋಟ: ಮಾಲೀಕನ ಮೇಲೆ ದೂರು ದಾಖಲು

ಮಾರ್ಚ್ 22 ರಂದು ವಿಟ್ಲದ ಕಂಬಳಬೆಟ್ಟುವಿನ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟಗೊಂಡು , ಇಬ್ಬರು ಮೃತರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟಕದ ಮಾಲೀಕನ ಮೇಲೆ ದೂರು ದಾಖಲಾಗಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 22: ವಿಟ್ಲದ ಕಂಬಳಬೆಟ್ಟು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟಕದ ಮಾಲೀಕ ಅಬ್ದುಲ್ ಶುಕೂರು ಎಂಬುವವರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್ 22 ಸೋಮವಾರ ಸಂಜೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕಂಬಳಬೆಟ್ಟುವಿನ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟಗೊಂಡಿತ್ತು. ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.[ಮಂಗಳೂರು: ಸಿಡಿಮದ್ದು ತಯಾರಿ ವೇಳೆ ಸ್ಫೋಟ, ಇಬ್ಬರು ಸಾವು]

Mangaluru Cracker factory explosion case, case filed against owner

ಈ ಘಟಕ ಗರ್ನಾಲ್ ಸಾಹೇಬರೆಂದೇ ಚಿರಪರಿಚಿತರಾಗಿದ್ದ ದಿ. ಇಬ್ರಾಹೀಂ ಸಾಹೇಬರ ಮಗನ ಅಬ್ದುಲ್ ಶುಕೂರು ರವರದ್ದು. ಇವರು ಸದ್ಯ ವಿದೇಶದಲ್ಲಿದ್ದು, ಇವರ ಮೇಲೆ ಐಪಿಸಿ ಕಲಂ 286, 304 (ಉದ್ದೇಶ ಪೂರ್ವಕವಲ್ಲದ ಮಾನವ ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಿಡಿಮದ್ದು ತಯಾರಿಕಾ ಘಟಕಕ್ಕೆ ಪರವಾನಗಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.[ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈಗೆ ಶಿಕ್ಷೆಯಾಗಲೆಂದು ದೇವರಲ್ಲಿ ಪ್ರಾರ್ಥನೆ]

ಮೃತರ ಅಂಗಾಂಗ ಪತ್ತೆ:
ಸಿಡಿಮದ್ದು ಸ್ಫೋಟಗೊಂಡ ಘಟಕದ ಸುತ್ತಮುತ್ತ ಸೋಮವಾರ ತಡರಾತ್ರಿವರೆಗೆ ಹಾಗೂ ಮಂಗಳವಾರ ಬೆಳಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಮೃತರ ದೇಹದ ಭಾಗಗಳು ಸಿಕ್ಕಿವೆ. ಸುಂದರ ಪೂಜಾರಿ ಮತ್ತು ಅಬ್ದುಲ್ ಅಝೀಂರವರ ಶವಪರೀಕ್ಷೆ ನಡೆಸಿ ಕುಟುಂಬಕ್ಕೆ ಬಿಟ್ಟುಕೊಡಲಾಗಿದೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿ ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಹೆಚ್ಚುವರಿ ಪೊಲೀಸ್ ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್., ವೃತ್ತ ನಿರೀಕ್ಷಕ ಮಂಜಯ್ಯ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ದಿವಾಕರ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

English summary
Cracker unit explosion took place in Mangaluru on 20th March, Monday. Tow persons killed in the incident. Now police filed case against owner of the unit under IPC section 286, 304.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X