ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ನಾಳೆಯಿಂದ (ಫೆ.10) "ಕೊಂಕಣಿ ಲೋಕೋತ್ಸವ-2017' ಆರಂಭ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ವತಿಯಿಂದ ಮೂರು ದಿನಗಳ ಕಾಲ ನಡೆಯಲಿರುವ ‘ಕೊಂಕಣಿ ಲೋಕೋತ್ಸವ-2017’ ನಾಳೆಯಿಂದ (ಫೆ. 10) ಆರಂಭವಾಗಲಿದೆ. ಮಂಗಳೂರಿನ ಪುರಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 9: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ವತಿಯಿಂದ ಮೂರು ದಿನಗಳ ಕಾಲ ನಡೆಯಲಿರುವ 'ಕೊಂಕಣಿ ಲೋಕೋತ್ಸವ-2017' ನಾಳೆಯಿಂದ (ಫೆ. 10) ಆರಂಭವಾಗಲಿದೆ. ಮಂಗಳೂರಿನ ಪುರಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬುಧವಾರ ಚಪ್ಪರ ಮುಹೂರ್ತ ನಡೆಯಿತು. ಪುರಭವನ ಮುಂಭಾಗ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಧ್ವಜಾರೋಹಣಗೈದು ಚಪ್ಪರ ಮುಹೂರ್ತ ನಡೆಸಿಕೊಟ್ಟರು. ಈ ವೇಳೆ ಮಾತನಾಡಿದ ಅವರು, 'ಕೊಂಕಣಿ ಲೋಕೋತ್ಸವ-2017' ರಾಜ್ಯಾದ್ಯಂತ ಕೊಂಕಣಿ ಮಾತನಾಡುವ ಸಮುದಾಯದವರ ಹಬ್ಬವಾಗಿದೆ.[ಫೆ.10ರಿಂದ ಮಂಗಳೂರಿನಲ್ಲಿ '2017 ಕೊಂಕಣಿ ಲೋಕೋತ್ಸವ']

Mangaluru: Countdown starts for ‘Konkani Lokostava - 2017’

ಮೂರು ದಿನ ನಡೆಯುವ ಈ ಹಬ್ಬದಲ್ಲಿ ಕೊಂಕಣಿ ಸಮುದಾಯದವರ ಕಲೆ, ಸಾಂಸ್ಕೃತಿಕ ಉತ್ಸವ ಮೇಳೈಸಲಿದೆ. ಕೊಂಕಣಿ ಸಮುದಾಯದ ಸಂಸ್ಕೃತಿ ಬಿಂಬಿಸುವ ವಿವಿಧ ಪ್ರದರ್ಶನ ಮಳಿಗೆಗಳು ಹಾಹೂ ಪ್ರಾಚೀನ ಕಲಾಕೃತಿಗಳ ಪ್ರದರ್ಶನವೂ ಉತ್ಸವದ ವಿಶೇಷತೆಯಾಗಿದೆ ಎಂದರು.[ಫೆ. 10 ರಂದು ' ಕೊಂಕಣಿ ಲೋಕೋತ್ಸವ 2017']

ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಒಝಾರಿಯೊ, ರಿಜಿಸ್ಟ್ರಾರ್ ಡಾ. ಬಿ. ದೇವದಾಸ್ ಪೈ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

English summary
‘Konkani lokotsava – 2017’ a three days fest of Konkanies will begin from tomorrow in ‘Town Hall’, Mangaluru. The event was organized by Karntaka Karnataka Konkani Literature Academy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X