ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಝಾಕೀರ್‌ ನಾಯ್ಕ್‌ ಮಂಗಳೂರು ಪ್ರವೇಶಕ್ಕೆ ನಿಷೇಧ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 28 : ಇಸ್ಲಾಂ ಧರ್ಮ ಪ್ರಚಾರಕ ಡಾ.ಝಾಕೀರ್‌ ನಾಯ್ಕ್‌ ಮಂಗಳೂರು ನಗರ ಪ್ರವೇಶಿಸದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ನಿಷೇಧ ಹೇರಿದ್ದಾರೆ. ಜನವರಿ 3ರಂದು ಮಂಗಳೂರು ನಗರದಲ್ಲಿ ಝಾಕೀರ್ ನಾಯ್ಕ್ ಬಹಿರಂಗ ಸಭೆ ಆಯೋಜಿಸಲು ಅನುಮತಿ ಕೇಳಲಾಗಿತ್ತು.

ಡಿಸೆಂಬರ್ 31ರಿಂದ ಒಂದು ವಾರಗಳ ಕಾಲ ಮುಂಬೈನ ಇಸ್ಲಾಮಿಕ್‌ ರೀಸರ್ಚ್‌ ಫೌಂಡೇಶನ್‌ ಸಂಸ್ಥಾಪಕ ಹಾಗೂ ಇಸ್ಲಾಂ ಧರ್ಮ ಪ್ರಚಾರಕ ಡಾ.ಝಾಕೀರ್‌ ನಾಯ್ಕ್‌ ಮಂಗಳೂರು ನಗರ ಪ್ರವೇಶಿಸುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಸ್. ಮುರುಗನ್ ಆದೇಶ ಹೊರಡಿಸಿದ್ದಾರೆ. [ಕೋಮುಗಲಭೆಗೆ ಆಸ್ಪದ ನೀಡದಿರಿ ಬಜರಂಗ ದಳ ಎಚ್ಚರಿಕೆ]

dr.zakir naik

ದಕ್ಷಿಣ ಕರ್ನಾಟಕ ಸಲಫಿ ಮೂವ್‌ಮೆಂಟ್‌ (ಎಸ್‌ಕೆಎಸ್‌ಎಂ) ಸಂಘಟನೆ ಮಂಗಳೂರಿನ ನೆಹರೂ ಮೈದಾನದಲ್ಲಿ ಜನವರಿ 3ರಂದು ಡಾ.ಝಾಕೀರ್ ನಾಯ್ಕ್ ಬಹಿರಂಗ ಸಭೆ ಆಯೋಜಿಸಲು ಪೊಲೀಸರ ಅನುಮತಿ ಕೇಳಿತ್ತು. ನಾಯ್ಕ್ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾರೆ. ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಭಜರಂಗದಳ, ವಿಶ್ವಹಿಂದೂ ಪರಿಷತ್ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದವು. [ಝಾಕೀರ್ ನಾಯ್ಕ್ ಯಾರು?]

ಜನವರಿ 3ರಂದು ನಡೆಯುವ ಕಾರ್ಯಕ್ರಮದ ಸ್ವರೂಪ, ಉದ್ದೇಶ ಮತ್ತು ಭಾಗವಹಿಸುವ ಜನರ ಕುರಿತು ವರದಿ ನೀಡುವಂತೆ ಸಂಘಟಕರಿಗೆ ಪೊಲೀಸ್ ಆಯುಕ್ತ ಮುರುಗನ್‌ ಸೂಚಿಸಿದ್ದರು. ಇತ್ತೀಚೆಗೆ ಕೆಲವು ಮಾಹಿತಿಗಳನ್ನು ಸಂಘಟಕರು ಸಲ್ಲಿಸಿದ್ದರು. [ಭಾರತದ ಮೇಲೆ ಹಿಂದೂಗಳಿಗಿರುವಷ್ಟೇ ಹಕ್ಕು ಕ್ರೈಸ್ತರಿಗಿದೆ: ಸೂಲಿಬೆಲೆ]

ವರದಿಯನ್ನು ಪರಿಶೀಲಿಸಿದ ಎಸ್.ಮುರುಗನ್ ಅವರು, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 144ರ ಅಡಿಯಲ್ಲಿ ಜಾಕೀರ್‌ ನಾಯ್ಕ್‌ ಅವರು ಡಿಸೆಂಬರ್ 31ರಿಂದ ಜನವರಿ 6ರ ತನಕ ಮಂಗಳೂರು ನಗರ ಪ್ರವೇಶಿಸದಂತೆ ನಿಷೇಧ ಹೇರಿದ್ದಾರೆ.

'ಝಾಕೀರ್‌ ನಾಯ್ಕ್‌ ವಿವಿಧ ಕಡೆಗಳಲ್ಲಿ ಮಾಡಿದ ಭಾಷಣಗಳ ವಿಡಿಯೋ ತುಣುಕುಗಳನ್ನು ಪರಿಶೀಲಿಸಲಾಗಿದೆ. ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅವರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ಎಸ್.ಮುರುಗನ್ ತಿಳಿಸಿದ್ದಾರೆ.

English summary
Mangaluru City police commissioner S.Murugan issued a prohibitory order banning Dr.Zakir Naik from entering Mangaluru city from December 31 to January 6, 2016. Dr. Naik a well-known Islamic orator and founder of Mumbai-based Islamic Research Foundation, was scheduled to attend a convention of the South Karnataka Salafi Movement to be held in the city on January 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X