ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗ್ಳೂರು ಮೇಯರ್, ಉಪಮೇಯರ್ ಗೆ ಕಾಂಗ್ರೆಸ್ ನಲ್ಲಿ ಭಾರೀ ಪೈಪೋಟಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ, 15 : ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ, ಆಗಲೇ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ಹೌದು. ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಬಹುಮತ ಹೊಂದಿರುವ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ನಡೆದಿದೆ.

ಈಗಾಗಲೇ ಮೀಸಲಾತಿ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಮೇಯರ್ ಸ್ಥಾನದ ಆಕಾಂಕ್ಷಿಗಳೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ಬೆನ್ನಿಗೆ ಬಿದ್ದಿದ್ದಾರೆ. ಇನ್ನು ಉಪಮೇಯರ್ ಎಸ್ ಟಿ ವರ್ಗಕ್ಕೆ ಮೀಸಲಾಗಿದ್ದು ಅಪ್ಪಿ ಎನ್ನುವರ ಹೆಸರು ಕೇಳಿಬರುತ್ತಿದೆ.

Mangaluru city corporation Mayor and deputy mayor elections create loads of curiosity

ಕಾಂಗ್ರೆಸ್ ನಲ್ಲಿ 14 ಮಹಿಳಾ ಕಾರ್ಪೊರೇಟರ್ ಗಳು ಇರುವುರಿಂದ ಮೇಯರ್ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ. ಈ ಹಿನ್ನಲೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಚಿಂತೆ ನಾಯಕನ್ನು ಕಾಡುತ್ತಿದೆ.

14 ಮಹಿಳಾ ಕಾರ್ಪೊರೇಟರ್ ಪೈಕಿ ಕವಿತಾ ಸನೀಲ್ ಮತ್ತು ಪ್ರತಿಭಾ ಕುಳಾಯಿ ಇಬ್ಬರ ನಡುವೆ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. ಶತಾಯಗತಾಯವಾಗಿ ಮೇಯರ್ ಹುದ್ದೆಗೆ ಹೇರಲು ಆಕಾಂಕ್ಷಿಗಳು ನಾಯಕರ ದುಂಬಾಲು ಬಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು, ಕಾರ್ಪೊರೇಟರ್ ಗಳ ಮನಸ್ಸು ಗೆಲ್ಲಬೇಕಾಗಿದ್ದು ಪ್ರಮುಖವಾಗಿರುತ್ತದೆ. ನಾನು ಉಸ್ತುವಾರಿ ಸಚಿವನಾದರೂ ಕಾರ್ಪೊರೇಟರ್ ಗಳ ಅಭಿಪ್ರಾಯಕ್ಕೆ ಆಧ್ಯತೆ ನೀಡಬೇಕಾಗುತ್ತದೆ ಎಂದಿದ್ದಾರೆ.

ಮುಂದಿನ ವರ್ಷ ಯಾರೇ ಮೇಯರ್ ಆದರೂ ವಿಧಾನಸಭೆ ಚುನಾವಣೆ ಬರುವುದರಿಂದ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಆ ಸಂದರ್ಭದಲ್ಲಿ ಅವಕಾಶವೂ ಕಡಿಮೆಯಾಗುತ್ತದೆ. ಇದರಿಂದ ಈ ಬಾರಿಯ ಮೇಯರ್ ಹುದ್ದೆ ಭಾರೀ ಪ್ರಾಮುಖ್ಯತೆ ಪಡೆದಿದೆ.

English summary
Mangaluru city corporation Mayor and deputy mayor election create loads of Curiosity in the minds of Mangaluru city congress officials. There is a Tough competition between Kavita Sanil and prthibha kulai for Mayor seat in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X