ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಮಹಾನಗರ ಪಾಲಿಕೆಯಿಂದ ಆಸ್ತಿ ತೆರಿಗೆ ಹೆಚ್ಚಳ

|
Google Oneindia Kannada News

ಮಂಗಳೂರು, ಡಿಸೆಂಬರ್. 23 : ಮಂಗಳೂರು ಮಹಾನಗರ ಪಾಲಿಕೆ ಸ್ವಯಂಘೋಷಿತ ಅಸ್ಥಿ ತೆರಿಗೆಯನ್ನು ಶೇ.15ರಷ್ಟು ಹೆಚ್ಚಳ ಮಾಡಿದೆ. 2017ರ ಏಪ್ರಿಲ್ 1ರಿಂದ ಮೂರೂ ವರ್ಷದ ಅವಧಿಗೆ ಪರಿಷ್ಕೃತ ತೆರಿಗೆ ದರ ಜಾರಿಯಾಗಲಿದೆ.

ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಪ್ರತಿಪಕ್ಷ ಬಿಜೆಪಿಯ ತ್ರೈವ ಆಕ್ಷೇಪದ ನಡುವೆಯೂ ತೆರಿಗೆ ಹೆಚ್ಚಳ ಮಾಡುವ ನಿರ್ಣಯ ಅಂಗೀಕರಿಸಲಾಯಿತು.

ಪಾಲಿಕೆ ಚುನಾವಣೆ ವೇಳೆ ಆಸ್ತಿ ತೆರಿಗೆ ಹೆಚ್ಚಳ ಮಾಡಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿ ಈಗ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದು ಎಷ್ಟು ಸರಿ ಎನ್ನುವುದು ಬಿಜೆಪಿಯವರ ವಾದ.

ಆಡಳಿತ ಪಡೆದ ಬಳಿಕ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕಿ ರೂಪ ಆರೋಪಿಸಿದರು.

Mangaluru City Corporation hikes property tax by 15%

ನಿರ್ಣಯಕ್ಕೂ ಮುನ್ನ ವಸೂಲಿ : ಅಸ್ತಿ ತೆರಿಗೆ ಹೆಚ್ಚಳದ ನಿರ್ಣಯ ಈಗ ಕೈಗೊಳಲಾಗುತ್ತಿದೆ. ಆದರೆ, ಪಾಲಿಕೆಯಲ್ಲಿ ಈಗಾಗಲೇ ಶೇ.15ರಷ್ಟು ಹೆಚ್ಚಳ ಮಾಡಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಇದು ಹೇಗೆ ಸಾಧ್ಯ ಎಂದು ಪ್ರತಿಪಕ್ಷದ ಪ್ರೇಮನಂದ ಶೆಟ್ಟಿ ಪ್ರಶ್ನಿಸಿದರು.

ನಿಯಮದ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಳ ಮಾಡಲಾಗುತ್ತದೆ. ಈಗಾಗಲೇ ಕೆಲ ಮಂದಿ ಹೆಚ್ಚಳಗೊಂಡ ತೆರಿಗೆ ಪಾವತಿ ಮಾಡಿದ್ದಾರೆ. ಆದರೆ ಬಿಜೆಪಿಯವರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಮೇಯರ್ ಸಮಜಾಯಿಷಿ ನೀಡಿದರು.

ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ತೆರಿಗೆ ಪಾವತಿಸಿದ ಎಲ್ಲರೂ ಶೇ. 15ರಷ್ಟು ಹೆಚ್ಚು ಮಾಡಿ ಕಟ್ಟಲು ಸಾಧ್ಯವಿಲ್ಲ. ಈ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಪ್ರತಿಪಕ್ಷದವರು ಆಗ್ರಹಿಸಿದರು. ಮುಂದಿನ ಸಭೆಗೆ ವಿವರ ನೀಡುವುದಾಗಿ ಮೇಯರ್ ಹರಿನಾಥ್ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ 1,95,000 ಅಸ್ತಿ ಗುರುತಿಸಲಾಗಿದೆ. ಆದರೆ, ಕೆಲವಡೆ ದಾಖಲೆಗಳ ಸಮಸ್ಯೆ ಇರುವುದರಿಂದ ಸಮಗ್ರ ಅಸ್ತಿ ಸಮೀಕ್ಷೆಯನ್ನು ದಿಯಾ ಸಿಸ್ಟಮ್ಸ್ ವತಿಯಿಂದ ನಡೆಸಲಾಗುತ್ತಿದೆ.

ಈಗಾಗಲೇ 25 ವಾರ್ಡ್ ಗಳ ಸಮೀಕ್ಷೆ ಮುಗಿದಿದ್ದು, ಮೂರು ಸಭೆಗಳನ್ನು ನಡೆಸಲಾಗಿದೆ. ಸಧ್ಯದಲ್ಲೇ 5 ವಾರ್ಡ್ ಗಳ ಮಾಹಿತಿ ಸಂಗ್ರಹಿಸಲಹುವುದು ಎಂದು ಮೇಯರ್ ತಿಳಿಸಿದರು.

English summary
Mangaluru City Corporation on Thursday approved a hike of 15% in property tax under self-assessment scheme (SAS) from April 1, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X