ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಣರಾಯಿ ಭೇಟಿ: ಕರ್ನಾಟಕ-ಕೇರಳ ಪೊಲೀಸರ ಎಸ್ಕಾರ್ಟ್ ಗಲಾಟೆ

ಇಂದು ( ಶನಿವಾರ) ಸಂಘ ಪರಿವಾರ ಕರೆ ನೀಡಿರುವ ದಕ್ಷಿಣ ಕನ್ನಡ ಬಂದ್ ಅಲ್ಲಲ್ಲಿ ಹಿಂಸಾಚಾರಕ್ಕೆ ತಿರುಗಿದೆ. ಕೇರಳ ಬಸ್ಸುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದು 6 ಜನರನ್ನು ಬಂಧಿಸಲಾಗಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 25 : ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಎಸ್ಕಾರ್ಟ್ ನೀಡುವ ವಿಚಾರದಲ್ಲಿ ಕರ್ನಾಟಕ ಮತ್ತು ಕೇರಳ ಪೊಲೀಸರ ನಡುವೆ ಗಲಾಟೆ ನಡೆದ ವಿಚಾರ ವರದಿಯಾಗಿದೆ.

ಕರ್ನಾಟಕ ಪೊಲೀಸರು ನಮ್ಮ ಎಸ್ಕಾರ್ಟ್ ವಾಹನ ಹತ್ತಿ ಎಂದರೆ ಕೇರಳ ಪೊಲೀಸರು ನಮ್ಮ ಎಸ್ಕಾರ್ಟ್ ವಾಹನ ಹತ್ತಿ ಎಂದು ಪಟ್ಟು ಹಿಡಿದು ಕೂತಿದ್ದರು. ಈ ಸಂದರ್ಭ ಎರಡೂ ರಾಜ್ಯದ ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದಿದ್ದು ವರದಿಯಾಗಿದೆ.

ಪೊಲೀಸರು ಒಬ್ಬರಿಗೊಬ್ಬರು ಜಗಳವಾಡುತ್ತಿದ್ದರೆ ಪಿಣರಾಯಿ ವಿಜಯನ್ ಮಾತ್ರ ಮೌನವಾಗಿ ಬುಲೆಟ್ ಪ್ರೂಫ್ ಕಾರಿನಲ್ಲಿ ಕುಳಿತುಕೊಂಡಿದ್ದರು. ನಂತರ ಕರ್ನಾಟಕ ಪೊಲೀಸರ ಎಸ್ಕಾರ್ಟ್ ತೆಗೆದುಕೊಳ್ಳಲು ಪಿಣರಾಯಿ ನಿರ್ಧರಿಸಿ ಮುಂದೆ ಸಾಗಿದರು. [ಗ್ಯಾಲರಿ: ಸೌಹಾರ್ದ ರ್ಯಾಲಿಗಾಗಿ ಮಂಗಳೂರಿಗೆ ಬಂದ ಪಿಣರಾಯಿ]

ಬಂದ್, ಹರತಾಳಗಳ ಮಧ್ಯೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿದ್ದಾರೆ.

ಪೊಲೀಸರ ಬಿಗಿ ಭದ್ರತೆಯಲ್ಲಿ ಪಿಣರಾಯಿ ವಿಜಯನ್ ಅವರನ್ನು ಕರೆತರಲಾಯಿತು. ವಿಜಯನ್ ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣಕ್ಕೆ ಬೆಳಗ್ಗೆ 10:50ರ ವೇಳೆಗೆ ಬಂದಿಳಿದರು. ನಿಲ್ದಾಣದಲ್ಲಿ ಸಿಪಿಎಂ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಅವರನ್ನು ಸ್ವಾಗತಿಸಿದರು.

ಬಿಗಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ನ ನಡುವೆ ಡ್ರೋನ್ ಕಣ್ಗಾವಲು ಕೂಡಾ ಒದಗಿಸುವ ಮೂಲಕ ಕೇರಳದ ಮುಖ್ಯಮಂತ್ರಿಯ ಮಂಗಳೂರು ಭೇಟಿಗೆ ವಿಶೇಷ ಕಾಳಜಿ ವಹಿಸಲಾಗಿದೆ.

ಇನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಿಪಿಐ(ಎಂ) ಪಕ್ಷದ ವತಿಯಿಂದ ಸೌಹಾರ್ದ ರ್ಯಾಲಿ ಮತ್ತು ಬಹಿರಂಗ ಸಭೆ ನಡೆಯಲಿದ್ದು, ಪಿಣರಾಯಿ ವಿಜಯನ್ ಮುಖ್ಯ ಭಾಷಣ ಮಾಡಲಿದ್ದಾರೆ.

ಇಂದು ( ಶನಿವಾರ) ಸಂಘ ಪರಿವಾರ ಕರೆ ನೀಡಿರುವ ದಕ್ಷಿಣ ಕನ್ನಡ ಬಂದ್ ಅಲ್ಲಲ್ಲಿ ಹಿಂಸಾಚಾರಕ್ಕೆ ತಿರುಗಿದೆ.

Mangaluru Bundh: Stone pelted to buses, 6 arrested

ಶನಿವಾರ ಮುಂಜಾನೆ ವಿಟ್ಲ-ಮಂಗಳೂರು ರಸ್ತೆಯಲ್ಲಿರುವ ಒಕ್ಕೆತ್ತೂರಿನಲ್ಲಿ ಅಬೂಬಕ್ಕರ್ ಹಾಜಿ ಎಂಬುವವರಿಗೆ ಸೇರಿದ ಲಾರಿಗೆ ಬೆಂಕಿ ಇಟ್ಟ ಪರಿಣಾಮ ಲಾರಿ ಅರ್ಧ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿ ಸುಟ್ಟ ಜಾಜಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಹಲವು ಕಡೆಗಳಲ್ಲಿ ಬಸ್ಸುಗಳಿಗೆ ಕಲ್ಲು ತೂರಿದ ಘಟನೆಗಳು ವರದಿಯಾಗಿವೆ. ಮಂಗಳೂರು ನಗರದ ಕುಲಶೇಖರ ಹಾಗೂ ಹಳೆಯಂಗಡಿ, ಬಿ.ಸಿ.ರೋಡ್ ನ ತುಂಬೆಯಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಚಿಕ್ಕಮಗಳೂರು-ಮಂಗಳೂರು ಹೆದ್ದಾರಿಯಲ್ಲಿ ದುಷ್ಕರ್ಮಿಗಳು ರಸ್ತೆಗೆ ಮರವನ್ನು ಕಡಿದು ಅಡ್ಡ ಹಾಕಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ ಸ್ಥಳಕ್ಕೆ ಬಂದ ಪೊಲೀಸರು ಮರವನ್ನು ತೆರವುಗೊಳಿಸಿದ್ದಾರೆ.

ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ' ಸೌಹಾರ್ದ ರ್ಯಾಲಿ' ಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಭಾಗವಹಿಸುವುದನ್ನು ವಿರೋಧಿಸಿ ಸಂಘ ಪರಿವಾರ ದಕ್ಷಿಣ ಕನ್ನಡ ಬಂದ್ ಗೆ ಕರೆ ನೀಡಿತ್ತು. [ವಿರೋಧದ ನಡುವೆಯೂ ಕೇರಳ ಸಿಎಂ ಮಂಗ್ಳೂರು ಪ್ರವಾಸ ವಿವರ]

Mangaluru Bundh: Stone pelted to buses, 6 arrested

ಹಿಂಸಾಚಾರ

ಮಂಗಳೂರು ನಗರದ ಕಂಕನಾಡಿಯಲ್ಲಿ ಬಸ್ಸಿಗೆ ಕಲ್ಲೆಸೆದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ
ಪಡೀಲ್ ನಲ್ಲಿ ಟಯರ್ ಗೆ ಬೆಂಕಿ ಹಚ್ಚಲು ಯತ್ನಿಸಿದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಬಂದ್ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹೋಂ ಸ್ಟೇ ದಾಳಿ ರೂವಾರಿ ಸುಭಾಷ್ ಪಡೀಲ್ ರನ್ನು ಬಂಧಿಸಿದ್ದಾರೆ. ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಸುಭಾಷ್ ರನ್ನು ಬಂಧಿಸಲಾಗಿದೆ.

ಇನ್ನು ರಾತ್ರಿ ವೇಳೆಯೂ ಕಿಡಿಗೇಡಿಗಳು ಕಲ್ಲೆಸೆದ ಘಟನೆಗಳು ವರದಿಯಾಗಿವೆ. ಕೇರಳ -ಕರ್ನಾಟಕ ಗಡಿ ಪ್ರದೇಶ ತೂಮಿನಾಡು ಮತ್ತು ಕೋಟೆಕಾರು ಬೀರಿ ಸಮೀಪ ಕೇರಳ ಸಾರಿಗೆಯ ಎರಡು ಬಸ್ಸುಗಳಿಗೆ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಕಲ್ಲೆಸೆದು ಹಾನಿಗೈದಿದ್ದಾರೆ.
ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೇರಳ ಸಾರಿಗೆ ಬಸ್‌ಗೆ ಕುಂಜತ್ತೂರು ಸಮೀಪದ ತೂಮಿನಾಡು ಬಳಿ 9.00 ಗಂಟೆಯ ವೇಳೆ ಕಲ್ಲೆಸೆದರೆ, ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಬೀರಿ ಎಂಬಲ್ಲಿ ಕಲ್ಲೆಸೆಯಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಕೇರಳ ಹಾಗೂ ಕರ್ನಾಟಕ ಪೊಲೀಸರ ಬಿಗಿ ಬಂದೋಬಸ್ತಿನ ನಡುವೆಯೂ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಸೆಕ್ಷನ್ ಜಾರಿಯಲ್ಲಿದ್ದರೂ ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಉಳ್ಳಾಲ ಹಾಗೂ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಸಂಚಾರ ವಿರಳ

ಬಂದ್ ಕರೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಖಾಸಗಿ ಬಸ್ ಗಳ ಸಂಚಾರ ವಿರಳವಾಗಿದೆ. ಕೆಎಸ್ಆರ್ಟಿಸಿ ಬಸ್ ಗಳು ಮಾತ್ರ ಎಂದಿನಂತೆ ಸಂಚರಿಸುತ್ತಿವೆ. ನಗರ ವ್ಯಾಪ್ತಿಯಲ್ಲಿ ಇನ್ನೂ ವಾಣಿಜ್ಯ ಸಂಕೀರ್ಣಗಳು ಬಾಗಿಲು ತೆರೆದಿಲ್ಲ. ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ ಜಾರಿ ಮಾಡಲಾಗಿದ್ದು, ನಗರದಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿದೆ. [ಮಂಗಳೂರು: ಪಿಣರಾಯಿ ಕಾರ್ಯಕ್ರಮಕ್ಕೆ 6 ಡ್ರೋನ್ ಗಳಿಂದ ಬಿಗಿ ಭದ್ರತೆ]

Mangaluru Bundh: Stone pelted to buses, 6 arrested
English summary
Dakshina Kannada Bundh, which was called by Sangh Parivar turned to violent. 8 People are arrested including 6 persons who pelted stone to Kerala transport department buses near Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X