ಮಂಗಳೂರು : ಸೆ.22ರಂದು ಕಾರು ಬಿಡಿ, ಸೈಕಲ್ ತುಳಿಯಿರಿ

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 08 : ಮಂಗಳೂರು ನಗರದಲ್ಲಿ ಸೆಪ್ಟೆಂಬರ್ 22 ರಂದು ವಿಶ್ವ ಕಾರು ರಹಿತ ದಿನ ಆಚರಣೆ ಮಾಡಲಾಗುತ್ತದೆ. ಕಾಲ್ನಡಿಗೆ, ಸೈಕ್ಲಿಂಗ್ ಹಾಗೂ ಸಮೂಹ ಸಾರಿಗೆಗಳನ್ನು ಉಪಯೋಗಿಸಲು ಉತ್ತೇಜಿಸುವ ಸಲುವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಮಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಮಂಗಳೂರು ಬೈಸಿಕಲ್ ಕ್ಲಬ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಲಯನ್ಸ್ ಕ್ಲಬ್ ಮುಂತಾದವುಗಳು ಜಂಟಿಯಾಗಿ ಈ ಅಭಿಯಾನವನ್ನು ನಗರದಲ್ಲಿ ಆಯೋಜಿಸಿವೆ.[ವೆಬ್ ಸೈಟ್ ಆರಂಭಿಸಿದ ಮಂಗಳೂರು ಬೈಸಿಕಲ್ ಕ್ಲಬ್]

Mangaluru all set to host no car day on September 22, 2016

ಸೆ. 22 ರಂದು 'ವಿಶ್ವ ಕಾರು ರಹಿತ ದಿನ'ವನ್ನು ಹಲವು ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ. ಮಂಗಳೂರಿನಲ್ಲಿಯೂ ಈ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ ಮತ್ತು ಪ್ರತಿ ತಿಂಗಳ 3ನೇ ಶನಿವಾರ ವಾಹನ ರಹಿತ ದಿನ ನಡೆಸಲು ನಿರ್ಧರಿಸಲಾಗಿದೆ.[ಬೈಸಿಕಲ್ ಗಿದೆ ತ್ರಿಚಕ್ರ ವಾಹನದ ನಂಬರ್ ಪ್ಲೇಟ್]

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಸೆ. 22 ರಂದು ನಗರದ ಟೌನ್ ಹಾಲ್‌ನಿಂದ ಬೆಳಗ್ಗೆ 7.30ಕ್ಕೆ ಬೈಸಿಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಕಚೇರಿ, ಸರ್ಕಾರಿ ಮತ್ತು ಖಾಸಗಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು ಈ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.[8 ಜನರನ್ನು ಹೊತ್ತೊಯ್ಯುವ ಡಿಫರೆಂಟ್ ಸೈಕಲ್]

ಜಾಥಾದಲ್ಲಿ ಪಾಲ್ಗೊಳ್ಳ ಬಯಸುವವರು ಹೆಸರು ಮತ್ತು ವಿವರಗಳನ್ನು dlsamangalore@gmail.com ಗೆ ಸಪ್ಟೆಂಬರ್ 15ರೊಳಗೆ ಕಳಿಸಬೇಕು. ಹೆಚ್ಚಿನ ವಿವರಗಳಿಗೆ www.mangalorebicycleclub.com ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

English summary
Mangalore Bicycle club all set to host no car day campaign on September 22, 2016 at Mangaluru.
Please Wait while comments are loading...