ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಾರಾಡಾಲಿದೆ ಬೃಹತ್ ರಾಷ್ಟ್ರಧ್ವಜ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 27 : ಭಾರತೀಯರಿಗೆ ದೇಶಪ್ರೇಮ ಮೂಡಿಸಲು ಹಾಗೂ ವಿದೇಶಿಯರಿಗೆ ಭಾರತದ ಕುರಿತು ಗೌರವ ಮೂಡಿಸುವ ಉದ್ದೇಶದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೃಹತ್ ಗಾತ್ರದ, ದಿನದ 24 ಗಂಟೆಯೂ ಹಾರಾಡುವ ರಾಷ್ಟ್ರ ಧ್ವಜದ ಶಾಶ್ವತ ಸ್ತಂಭ ನಿರ್ಮಾಣವಾಗಲಿದೆ.

ವಿಮಾನ ನಿಲ್ದಾಣದ ಟರ್ಮಿನಲ್‌ನ ಮುಂಭಾಗ, ಕಾರು ಪಾರ್ಕಿಂಗ್ ಸ್ಥಳದಲ್ಲಿ ಬೃಹತ್ ರಾಷ್ಟ್ರಧ್ವಜ ಹಾರಾಡಲು ಅವಕಾಶ ನೀಡಲಾಗಿದೆ. ಇಲ್ಲಿ 100 ಅಡಿ ಎತ್ತರದ ಸ್ತಂಭ ನೆಡಲಾಗುತ್ತದೆ. ಇದರಲ್ಲಿ 30 ಅಡಿ ಅಗಲ ಹಾಗೂ 20 ಅಡಿ ಎತ್ತರದ ಧ್ವಜವಿರಲಿದೆ. ಇದಕ್ಕೆ ರಾತ್ರಿ ಸಮಯದಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. [ಮಂಗಳೂರು-ಶಾರ್ಜಾ ನಡುವೆ Jet Airways ಸೇವೆ]

mangaluru airport

ಈ ಯೋಜನೆಗಾಗಿ ಒಟ್ಟು 13 ಲಕ್ಷ ರೂ. ವೆಚ್ಚವಾಗಲಿದ್ದು, ಇದನ್ನು ವಿಮಾನ ನಿಲ್ದಾಣ ಪ್ರಾಧಿಕಾರ ನೋಡಿಕೊಳ್ಳಲಿದೆ. ಪ್ರಸ್ತುತ ನವದೆಹಲಿ, ಚೆನ್ನೈ ಹಾಗೂ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬೃಹತ್ ರಾಷ್ಟ್ರ ಧ್ವಜವಿದೆ. [ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ ಕಲ್ಪಿಸಿ]

ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಮಂಗಳೂರು ಸೇರಿದಂತೆ ಇತರ ಕೆಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬೃಹತ್ ರಾಷ್ಟ್ರ ಧ್ವಜದ ಅವಕಾಶ ಲಭಿಸಿದೆ. 2 ತಿಂಗಳ ಹಿಂದೆ ಇದಕ್ಕೆ ಒಪ್ಪಿಗೆ ದೊರಕಿದ್ದು, ಸದ್ಯ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ 2-3 ತಿಂಗಳೊಳಗೆ ನೂತನ ಧ್ವಜಸ್ತಂಭ ನಿರ್ಮಾಣವಾಗಲಿದೆ. [ಕರ್ನಾಟಕದ ವಿಮಾನ ನಿಲ್ದಾಣಗಳು ಫುಲ್ ನಷ್ಟದಲ್ಲಿದೆಯಂತೆ!]

24 ಗಂಟೆಯೂ ಹಾರಾಡಾಲಿದೆ ಧ್ವಜ : ಪ್ರಸ್ತುತ ಮಂಗಳೂರು ಸೇರಿದಂತೆ ಇತರ ವಿಮಾನ ನಿಲ್ದಾಣದಲ್ಲಿ ಚಿಕ್ಕಗಾತ್ರದ ನಿಗದಿತವಾಗಿ ಉದ್ದ / ಅಗಲವಿರುವ ರಾಷ್ಟ್ರ ಧ್ವಜವಿದೆ. ಇದನ್ನು ಪ್ರತಿದಿನ ಬೆಳಗ್ಗೆ ಆರೋಹಣ ಮಾಡಿ, ಸಂಜೆ ಅವರೋಹಣ ಮಾಡಬೇಕಿದೆ. ಆದರೆ, ನೂತನ ಧ್ವಜಸ್ತಂಭ ನಿರ್ಮಾಣವಾದ ಬಳಿಕ ಪ್ರತಿದಿನ ಧ್ವಜ ಆರೋಹಣ, ಅವರೋಹಣ ಮಾಡಬೇಕಿಲ್ಲ. ಹೀಗಾಗಿ ದಿನದ 24 ಗಂಟೆಯೂ ಈ ಧ್ವಜ ಹಾರಾಡಾಲಿದೆ.

ಬೆಳಕಿನ ವ್ಯವಸ್ಥೆ : ರಾತ್ರಿ ರಾಷ್ಟ್ರಧ್ವಜ ಸುಂದರವಾಗಿ ಶೋಭಿಸಲು ಸಹಕಾರಿಯಾಗುವಂತೆ ಸುಂದರ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಪೂರಕ ಬೆಳಕಿನ ಉಪಕರಣಗಳನ್ನು ಧ್ವಜದ ಸುತ್ತ ಅಳವಡಿಸಲಾಗುತ್ತದೆ. 100 ಅಡಿ ಉದ್ದದ ರಾಷ್ಟ್ರಧ್ವಜ ಸ್ತಂಭ ಮುಂಬೈನಿಂದ ಹಾಗೂ ರಾಷ್ಟ್ರ ಧ್ವಜ ದೆಹಲಿಯಿಂದ ಬರಲಿದೆ.

English summary
Airport authority of India will set up 100 feet tall 24/7 permanent tri-color flag pole in Mangaluru, Bajpe airport soon. The project will be taken up at a cost of Rs 13 Lakhs, to be funded by the Airport Authority of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X