ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಅಪಘಾತದಿಂದ ಹೋವರ್ ಕ್ರಾಫ್ಟ್‌ಗೆ ಹಾನಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜ.30 : ಕರಾವಳಿ ತಟರಕ್ಷಣಾ ಪಡೆಯ (ಕೋಸ್ಟ್‌ಗಾರ್ಡ್‌) ಸೇರಿದ 'ಹೋವರ್ ಕ್ರಾಫ್ಟ್-196' ವಾಹನ ಪಣಂಬೂರು ಸಮೀಪ ಅವಘಾತಕ್ಕೆ ಈಡಾಗಿದೆ. ದಿಕ್ಕುತಪ್ಪಿ ಕ್ರಾಫ್ಟ್‌ ಮರಕ್ಕೆ ಡಿಕ್ಕಿ ಹೊಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಹೋವರ್ ಕ್ರಾಫ್ಟ್-196 ವಾಹನವನ್ನು ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಸಮುದ್ರಕ್ಕೆ ಇಳಿಸುವಾಗ ಈ ಘಟನೆ ನಡೆದಿದೆ. ಕ್ರಾಫ್ಟ್‌ಅನ್ನು ಸಮುದ್ರಕ್ಕೆ ಇಳಿಸುವಾಗ ಬಲವಾಗಿ ಗಾಳಿ ಬೀಸಿದ್ದರಿಂದ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. [ಕರಾವಳಿ ರಕ್ಷಣೆಗೆ ಬಂದ ಹೋವರ್ ಕ್ರಾಫ್ಟ್]

Hovercraft

ಎರಡು ಹೋವರ್ ಕ್ರಾಫ್ಟ್‌ಗಳನ್ನು ಪಣಂಬೂರು ಬೀಚ್ ಬಳಿಯ ಟವರ್ ಒಂದರ ಬಳಿ ನೆಲದ ಮೇಲೆ ನಿಲ್ಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಈ ಹೋವರ್ ಕ್ರಾಫ್ಟ್‌ಗಳನ್ನು ಕರಾವಳಿ ತಟರಕ್ಷಣಾ ಪಡೆಗೆ ಸಮರ್ಪಿಸಲಾಗಿತ್ತು. ರಾಜ್ಯಪಾಲ ವಜುಭಾಯಿ ವಾಲಾ ಇವುಗಳನ್ನು ಲೋಕಾರ್ಪಣೆ ಮಾಡಿದ್ದರು. ಸದ್ಯ ಒಂದು ಕ್ರಾಫ್ಟ್ ಹಾನಿಗೀಡಾಗಿದೆ. [ಪಣಂಬೂರು ಕಡಲ ತೀರಕ್ಕೆ ಬಂತು ಹೋವರ್ ಕ್ರಾಫ್ಟ್]

ಘಟನೆ ನಡೆದ ಬಗ್ಗೆ ವರದಿ ಮಾಡದಂತೆ ಪತ್ರಕರ್ತರಿಗೆ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಹೋವರ್ ಕ್ರಾಫ್ಟ್‌ ನೋಡಲು ಬಂದ ಜನರನ್ನು ದೂರು ಕಳಿಸಿದ್ದಾರೆ. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಹೋವರ್ ಕ್ರಾಫ್ಟ್-196 ನೀರು ಮತ್ತು ನೆಲದ ಮೇಲೆ ಸಂಚರಿಸುವ ಸಾಮರ್ಥ್ಯ ಹೊಂದಿದೆ. ವಿದೇಶಿ ನಿರ್ಮಿತವಾಗಿರುವ ಇದರ ಮೌಲ್ಯ ಸುಮಾರು 60 ಕೋಟಿ. ಅಪಘಾತದಿಂದಾಗಿ ಕ್ರಾಫ್ಟ್‌ನ ಬೆಲೂನ್‌ನಂಥ ಭಾಗಕ್ಕೆ ಹಾನಿಯಾಗಿದ್ದು ಲಕ್ಷಾಂತರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

English summary
Karnataka's first hovercraft H-196 recently joined the Coast Guard suffered considerable damage after hitting an tree on Thursday January 29 in Panambur beach, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X