ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಷ್ಠಿತ ಒಲಿಂಪಿಯಾಡ್ ಗೆ ಮಂಗ್ಳೂರು ಹುಡುಗ ಆದಿತ್ಯ ಪ್ರಕಾಶ್‌

|
Google Oneindia Kannada News

ಮಂಗಳೂರು, ಮೇ 23 : ಮಂಗಳೂರಿನ ಸೆಂಟರ್‌ ಫಾರ್‌ ಅಡ್ವಾನ್ಸ್ ಡ್ ಲರ್ನಿಂಗ್ (ಸಿಎಫ್ ಎಎಲ್) ನಲ್ಲಿ ತರಬೇತಿ ಪಡೆದ ಆದಿತ್ಯ ಪ್ರಕಾಶ್‌ ಈಗ ಅಂತಾರಾಷ್ಟ್ರೀಯ ಮ್ಯಾತಮೆಟಿಕ್ಸ್ ಒಲಿಂಪಿಯಾಡ್ (ಐಎಂಒ)-2017ಗೆ ರಾಜ್ಯದಿಂದ ಆಯ್ಕೆಯಾಗಿದ್ದಾರೆ.

ಜುಲೈ 17ರಿಂದ 23ರ ವರೆಗೆ ಬ್ರೆಜಿಲ್‌ ನ ರಿಯೊ ಡಿ ಜನೈರೋದಲ್ಲಿ ಈ ಸ್ಪರ್ಧೆ ನಡೆಯಲಿದ್ದು ಗಣಿತಕ್ಕೆ ಸಂಬಂಧಪಟ್ಟಂತೆ ಜಾಗತಿಕವಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಸುಮಾರು 100 ದೇಶಗಳಿಂದ 400 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

Mangalorean Adithya Prakash Represent India at the International Math Olympiad

ಸ್ಪರ್ಧೆಯ ಆಯ್ಕೆಯ ಕುರಿತಂತೆ ಪ್ರಥಮ ಹಂತವಾಗಿ ಸುಮಾರು 50,000 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಆಯ್ಕೆಯಾದ ಸುಮಾರು 900 ವಿದ್ಯಾರ್ಥಿಗಳನ್ನು 2ನೇ ಹಂತಕ್ಕೆ ಆಯ್ಕೆ ಮಾಡಲಾಗಿತ್ತು.

3ನೇ ಹಂತದಲ್ಲಿ 35ರಿಂದ 50 ವಿದ್ಯಾರ್ಥಿಗಳನ್ನು ಹೋಮಿ ಭಾಭಾ ಸೆಂಟರ್‌ ಫಾರ್‌ ಸೈನ್ಸ್‌ ಎಜುಕೇಶನ್‌ ಆಯ್ಕೆ ಮಾಡಿದ್ದು, ಅದರಲ್ಲಿ 6 ಮಂದಿಯನ್ನು ಐಎಂಒಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರೋಗ್ರಾಮ್‌ ಕೊ-ಆರ್ಡಿನೇಟರ್ ಸೆವ್ರಿನ್ ರೊಸಾರಿಯೊ ತಿಳಿಸಿದ್ದಾರೆ.

Mangalorean Adithya Prakash Represent India at the International Math Olympiad

ಆದಿತ್ಯ ಪ್ರಕಾಶ್‌ ತನ್ನದೇ ಆಸಕ್ತಿಯಿಂದ ಸಿಎಫ್ ಎಎಲ್ ಕೋಚಿಂಗ್ ಸೆಂಟರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಜಪಾನ್‌ನಲ್ಲಿ ನಡೆಯುತ್ತಿರುವ ಫಕುರಾ ತರಬೇತಿಯಲ್ಲಿ ಭಾಗವಹಿಸಿದ್ದು, ಐಎಂಒಗೆ ಆಯ್ಕೆಯಾಗಿರುವ ಕ್ರೆಡಿಟ್‌ ಸಿಎಫ್ ಎಎಲ್ ಸಲ್ಲಬೇಕು ಎಂದು ಆದಿತ್ಯ ಪ್ರಕಾಶ್‌ ತಂದೆ, ಕಾರ್ಪೊರೇಶನ್ ಬ್ಯಾಂಕಿನ ಅಧಿಕಾರಿ ಓಂಪ್ರಕಾಶ್‌ ಬನ್ವಾಲ್ ಸಂತಸ ವ್ಯಕ್ತಪಡಿಸಿದರು.

ಸಿಎಫ್ ಎಎಲ್ ನ ಗಣಿತ ಪ್ರಾಧ್ಯಾಪಕ ಡಾ. ಶ್ರೀಕಾಂತ್‌ ಪೈ ಮಾತನಾಡಿ, "ಐಎಂಒಗೆ ಆಯ್ಕೆಯಾಗಿರುವ ಆದಿತ್ಯ ಅವರು ಸದಾ ಭಿನ್ನವಾಗಿ ಯೋಚಿಸುವ ವಿದ್ಯಾರ್ಥಿ. ಅವರು ಗಣಿತದ ಯಾವುದೇ ಸಮಸ್ಯೆಯನ್ನು ತತಕ್ಷಣದಲ್ಲಿ ಪರಿಹರಿಸುತ್ತಾರೆ.

ಈ ಬಾರಿ ಆದಿತ್ಯ ಪ್ರಕಾಶ್‌ ಚಿನ್ನ ಗೆಲ್ಲುವ ಪೂರ್ಣ ವಿಶ್ವಾಸವಿದೆ. ಜಗತ್ತಿನಲ್ಲಿ ಪ್ರಸ್ತುತ ಇರುವ ಪ್ರತಿಷ್ಠಿತ ಗಣಿತ ತಜ್ಞರೆಲ್ಲರೂ ಕೂಡ ಐಎಂಒಗೆ ಆಯ್ಕೆಯಾದವರು ಎಂಬುದು ವಿಶೇಷವಾಗಿದೆ" ಎಂದರು.

English summary
Adithya Prakash, a teenager from Mangaluru has been selected for the team of five Indian students to represent the India in the 2017 International Mathematics Olympiad this summer. He will be the first students from Karnataka in the last 20 years to Represent India at IMO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X