ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳ ನಿಸರ್ಗಧಾಮದ 'ರಾಜ' ಇನ್ನು ನೆನಪು ಮಾತ್ರ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮೇ 23 : ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿನ ಹುಲಿ 'ರಾಜ' ಮೃತಪಟ್ಟಿದ್ದಾನೆ. 2003ರಲ್ಲಿ ಶಿವಮೊಗ್ಗದಿಂದ ರಾಜನನ್ನು ಕರೆತರಲಾಗಿತ್ತು. ಹೃದಯಾಘಾತದಿಂದ ರಾಜ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

21 ವರ್ಷ ವಯಸ್ಸಿನ ಗಂಡು ಹುಲಿ ರಾಜ ಶುಕ್ರವಾರ ಮುಂಜಾನೆ 5 ಗಂಟೆಯ ವೇಳೆಗೆ ಮೃತಪಟ್ಟಿದೆ. ವಯಸ್ಸಾದ ಕಾರಣ ಒಂದು ವರ್ಷದಿಂದ ರಾಜನ ಓಡಾಟ ಕಡಿಮೆಯಾಗಿತ್ತು. ಸುಮಾರು 4 ತಿಂಗಳಿಂದ ಕಡಿಮೆ ಆಹಾರವನ್ನು ಸೇವಿಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]

Tiger

280 ಕೆಜಿ ಇತ್ತು : 2003ರಲ್ಲಿ ಪಿಲಿಕುಳಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರಾಜ ಸುಮಾರು 280 ಕೆ.ಜಿ. ತೂಕವಿತ್ತು. ದಿನಕ್ಕೆ 10 ಕೆಜಿ ಮಾಂಸವನ್ನು ಅದು ತಿನ್ನುತ್ತಿತ್ತು. 2012ರಲ್ಲಿ ಅಸ್ವಸ್ಥಗೊಂಡಿದ್ದ ಆತನನ್ನು ಆರೈಕೆ ಮಾಡಲು ಹೋಗಿದ್ದ ಕಾರ್ಮಿಕ ಕುಶಾಲಪ್ಪ ಗೌಡನ ಮೇಲೆ ಹಲ್ಲೆ ಮಾಡಿ, ಕೊಂದು ಹಾಕಿತ್ತು. [ಕುದುರೆಮುಖ ಇನ್ನು ಸಂರಕ್ಷಿತ ಹುಲಿಧಾಮ]

ಮೃತಪಟ್ಟ ರಾಜನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಪಿಲಿಕುಳದಲ್ಲಿರುವ ಪ್ರಾಣಿಗಳ ಸ್ಮಶಾನದಲ್ಲಿ ಮೃತ ದೇಹವನ್ನು ಸುಡಲಾಗಿದೆ. ಪ್ರಾಣಿ ಸಂಗ್ರಹಾಲಯದಲ್ಲಿರುವ ಹುಲಿಗಳು 18 ವರ್ಷ ಬದುಕುವ ನಿದರ್ಶನವಿದೆ. ರಾಜ 21 ವರ್ಷ ಬದುಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಜನ ಅಂಗಾಂಗಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪಶು ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಪಿಲಿಕುಳದಲ್ಲಿ ಸದ್ಯ 6 ಗಂಡು ಹಾಗೂ 1 ಹೆಣ್ಣು ಹುಲಿ ಇದೆ. [ಚಿತ್ರಗಳು : ಮಂಗಳೂರಿನ ಪಿಲಿಕುಳದಲ್ಲಿ ಮೀನು ಮೇಳ]

English summary
The male tiger Raja (21) which killed one of its caretakers at Pilikula Biological Park two-and-half years ago, died at the park on Friday, May 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X