ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಣವಾನಂದ ಸ್ವಾಮೀಜಿಗೆ ಜೀವ ಬೆದರಿಕೆ ಕರೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜ.31 : ಕರ್ನಾಟಕದ ಐದು ನಗರಗಳಲ್ಲಿ ನಾಥುರಾಮ್‌ ಗೋಡ್ಸೆ ಪ್ರತಿಮೆ ನಿರ್ಮಾಣ ಮಾಡವುದಾಗಿ ಘೋಷಿಸಿದ್ದ ಪ್ರಣವಾನಂದ ಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಕರೆ ಬರುತ್ತಿದೆ. ಮೊದಲ ದೇವಾಲಯ ಉದ್ಘಾಟನೆಯಾಗುವ ಮೊದಲ ದಿನ ನಿನ್ನನ್ನು ಕೊಲ್ಲುತ್ತೇವೆ ಎಂದು ಅನಾಮಿಕ ವ್ಯಕ್ತಿಗಳು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಅವರು ಕೆಲವು ದಿನಗಳ ಹಿಂದೆ ರಾಣಿಬೆನ್ನೂರು, ಮಂಗಳೂರು, ಕಾರವಾರ, ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಸ್ವತಂತ್ರ್ಯ ಹೋರಾಟಗಾರ ನಾಥುರಾಮ್‌ ಗೋಡ್ಸೆ ಅವರ ದೇವಾಲಯ ನಿರ್ಮಿಸುತ್ತೇನೆ ಎಂದು ಘೋಷಿಸಿದ್ದರು.

Pranavananda Swamiji

ಸದ್ಯ, ಭೂಗತ ಪಾತಕಿಗಳು ದೇವಾಲಯ ಕಟ್ಟಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಬೈನಿಂದ ದಿನಕ್ಕೊಂದರಂತೆ ಬೆದರಿಕೆ ಕರೆಗಳು ಮೂರು ದಿನಗಳಿಂದ ಬರುತ್ತಿವೆ, ಅಗತ್ಯ ರಕ್ಷಣೆ ನೀಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. [ಕರ್ನಾಟಕ ಸೇರಿ ದೇಶದೆಲ್ಲೆಡೆ ಗೋಡ್ಸೆ ಪ್ರತಿಮೆ ಸ್ಥಾಪನೆ!]

ಘೋಡ್ಸೆ ಪ್ರತಿಮೆ ನಿರ್ಮಾಣಕ್ಕಾಗಿ ಸಾರ್ವಜನಿಕ ಸ್ಥಳ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು. ಒಂದು ವೇಳೆ ಅವರು ಸಾರ್ವಜನಿಕ ಸ್ಥಳ ನೀಡದಿದ್ದರೆ ಖಾಸಗಿ ಸ್ಥಳದಲ್ಲೇ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಸ್ವಾಮೀಜಿ ಹೇಳಿದ್ದರು. ['ಮಹಾತ್ಮಾ ಗಾಂಧೀಜಿಯಂತೆ ಗೋಡ್ಸೆ ಕೂಡಾ ದೇಶಭಕ್ತ']

Pranavananda

ದಿನಕ್ಕೊಂದು ನಂಬರ್‌ನಿಂದ ಕರೆ ಬರುತ್ತಿದ್ದು, ಮೊದಲ ದೇವಾಲಯ ಉದ್ಘಾಟನೆಯಾಗುವ ಮೊದಲ ದಿನ ನಿನ್ನನ್ನು ಕೊಲ್ಲುತ್ತೇವೆ ಎಂದು ಅನಾಮಿಕ ವ್ಯಕ್ತಿಗಳು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸಿ, ತಮಗೆ ಅಗತ್ಯ ರಕ್ಷಣೆ ನೀಡಿ ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

English summary
Bharatha Kranti Sena chief Pranavananda Swamiji received life threatening phone against construction of temple for Nathuram Godse. Swamiji receiving phone calls for last three days from Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X