{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/mangaluru/konkan-railway-run-special-trains-nizamuddin-thiruvananthapuram-090227.html" }, "headline": "ನಿಜಾಮುದ್ದೀನ್ - ತಿರುವನಂತಪುರಂ ಮಧ್ಯೆ ವಿಶೇಷ ರೈಲು", "url":"https://kannada.oneindia.com/news/mangaluru/konkan-railway-run-special-trains-nizamuddin-thiruvananthapuram-090227.html", "image": { "@type": "ImageObject", "url": "http://kannada.oneindia.com/img/1200x60x675/2014/11/18-28-railway.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/11/18-28-railway.jpg", "datePublished": "2014-12-22T21:00:15+05:30", "dateModified": "2014-12-22T21:01:28+05:30", "author": { "@type": "Person", "name": "Kiran B Hegde" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Mangalore", "description": "The Konkan Railway will run special trains between Nizamuddin - Thiruvananthapuram via Konkan route to clear extra rush of passengers.", "keywords": "Mangaluru, railway, konkan railway, tiruvanantapuram, passenger, ನಿಜಾಮುದ್ದೀನ್ - ತಿರುವನಂತಪುರಂ ಮಧ್ಯೆ ವಿಶೇಷ ರೈಲು, ಮಂಗಳೂರು, ರೈಲ್ವೆ, ಕೊಂಕಣ ರೈಲ್ವೆ, ತಿರುವನಂತಪುರಂ, ಪ್ರಯಾಣಿಕ", "articleBody":"ಮಂಗಳೂರು, ಡಿ. 22: ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿಜಾಮುದ್ದೀನ್ ಮತ್ತು ತಿರುವನಂತಪುರಂ ಮಧ್ಯೆ ಕೊಂಕಣ ಮಾರ್ಗದಲ್ಲಿ ವಿಶೇಷ ರೈಲು ಬಿಡಲು ಕೊಂಕಣ ರೈಲ್ವೆ ನಿರ್ಧರಿಸಿದೆ.ಎಸಿ ಪ್ರೀಮಿಯಂ ವಿಶೇಷ ರೈಲು ಸಂ. 04410 ಪ್ರತಿ ಮಂಗಳವಾರ ಅಂದರೆ ಡಿ. 23, 30 ಮತ್ತು 2015ರ ಜನವರಿ 6, 13, 20 ಮತ್ತು 27ರಂದು ನಿಜಾಮುದ್ದೀನ್& zwnj ನಿಂದ ರಾತ್ರಿ 9.35ಕ್ಕೆ ಹೊರಡಲಿದೆ. ಈ ರೈಲು ಮೂರನೇ ದಿನ ರಾತ್ರಿ 8.30ಕ್ಕೆ ತಿರುವನಂತಪುರಂಗೆ ಆಗಮಿಸಲಿದೆ. ಕೋಟಾ, ವಡೋದರಾ, ರತ್ನಗಿರಿ, ಮಡಗಾಂವ್, ಮಂಗಳೂರು ಜಂಕ್ಷನ್, ಶೋರನೂರು ಮತ್ತು ಎರ್ನಾಕುಲಂ ಪಟ್ಟಣದಲ್ಲಿ ನಿಲುಗಡೆ ಹೊಂದಿದೆ.ಈ ಸಂದರ್ಭದಲ್ಲಿ ಎಸಿ ಸೂಪರ್& zwnj ಫಾಸ್ಟ್ ವಿಶೇಷ ರೈಲು ಸಂ. 04409 ತಿರುವನಂತಪುರಂನಿಂದ ಪ್ರತಿ ಶನಿವಾರ ಅಂದರೆ ಡಿ. 20, 27 ಮತ್ತು 2015ರ ಜನವರಿ 3, 10, 17, 24 ಮತ್ತು 31ರಂದು ಹೊರಡಲಿದೆ. ತಿರುವನಂತಪುರಂನಿಂದ ಬೆಳಗ್ಗೆ 10.15ಕ್ಕೆ ಹೊರಟು ಮೂರನೇ ದಿನ ಮಧ್ಯಾಹ್ನ 12.05 ಗಂಟೆಗೆ ನಿಜಾಮುದ್ದೀನ್ ತಲುಪಲಿದೆ. ಈ ರೈಲು ಕೋಟಾ, ವಡೋದರಾ, ರತ್ನಗಿರಿ, ಕರ್ಮಲಿ, ಮಡಗಾಂವ್, ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್, ಕೋಜಿಕೊಡೆ, ಶೋರನೂರು, ತ್ರಿಶೂರು ಮತ್ತು ಎರ್ನಾಕುಲಂ ಪಟ್ಟಣದಲ್ಲಿ ನಿಲ್ಲಲಿದೆ. ಈ ರೈಲಿಗೆ 13 ಕೋಚ್& zwnj ಗಳಿರುತ್ತವೆ." }
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಜಾಮುದ್ದೀನ್ - ತಿರುವನಂತಪುರಂ ಮಧ್ಯೆ ವಿಶೇಷ ರೈಲು

By Kiran B Hegde
|
Google Oneindia Kannada News

ಮಂಗಳೂರು, ಡಿ. 22: ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿಜಾಮುದ್ದೀನ್ ಮತ್ತು ತಿರುವನಂತಪುರಂ ಮಧ್ಯೆ ಕೊಂಕಣ ಮಾರ್ಗದಲ್ಲಿ ವಿಶೇಷ ರೈಲು ಬಿಡಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ಎಸಿ ಪ್ರೀಮಿಯಂ ವಿಶೇಷ ರೈಲು ಸಂ. 04410 ಪ್ರತಿ ಮಂಗಳವಾರ ಅಂದರೆ ಡಿ. 23, 30 ಮತ್ತು 2015ರ ಜನವರಿ 6, 13, 20 ಮತ್ತು 27ರಂದು ನಿಜಾಮುದ್ದೀನ್‌ನಿಂದ ರಾತ್ರಿ 9.35ಕ್ಕೆ ಹೊರಡಲಿದೆ. ಈ ರೈಲು ಮೂರನೇ ದಿನ ರಾತ್ರಿ 8.30ಕ್ಕೆ ತಿರುವನಂತಪುರಂಗೆ ಆಗಮಿಸಲಿದೆ. ಕೋಟಾ, ವಡೋದರಾ, ರತ್ನಗಿರಿ, ಮಡಗಾಂವ್, ಮಂಗಳೂರು ಜಂಕ್ಷನ್, ಶೋರನೂರು ಮತ್ತು ಎರ್ನಾಕುಲಂ ಪಟ್ಟಣದಲ್ಲಿ ನಿಲುಗಡೆ ಹೊಂದಿದೆ.

rail

ಈ ಸಂದರ್ಭದಲ್ಲಿ ಎಸಿ ಸೂಪರ್‌ಫಾಸ್ಟ್ ವಿಶೇಷ ರೈಲು ಸಂ. 04409 ತಿರುವನಂತಪುರಂನಿಂದ ಪ್ರತಿ ಶನಿವಾರ ಅಂದರೆ ಡಿ. 20, 27 ಮತ್ತು 2015ರ ಜನವರಿ 3, 10, 17, 24 ಮತ್ತು 31ರಂದು ಹೊರಡಲಿದೆ. ತಿರುವನಂತಪುರಂನಿಂದ ಬೆಳಗ್ಗೆ 10.15ಕ್ಕೆ ಹೊರಟು ಮೂರನೇ ದಿನ ಮಧ್ಯಾಹ್ನ 12.05 ಗಂಟೆಗೆ ನಿಜಾಮುದ್ದೀನ್ ತಲುಪಲಿದೆ. ಈ ರೈಲು ಕೋಟಾ, ವಡೋದರಾ, ರತ್ನಗಿರಿ, ಕರ್ಮಲಿ, ಮಡಗಾಂವ್, ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್, ಕೋಜಿಕೊಡೆ, ಶೋರನೂರು, ತ್ರಿಶೂರು ಮತ್ತು ಎರ್ನಾಕುಲಂ ಪಟ್ಟಣದಲ್ಲಿ ನಿಲ್ಲಲಿದೆ. ಈ ರೈಲಿಗೆ 13 ಕೋಚ್‌ಗಳಿರುತ್ತವೆ.

English summary
The Konkan Railway will run special trains between Nizamuddin - Thiruvananthapuram via Konkan route to clear extra rush of passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X