ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದಿಂದ ಗೋವಾದ ಪೆರ್ನಿಮ್ ಗೆ ಡೆಮು ರೈಲು

By Mahesh
|
Google Oneindia Kannada News

ಉಡುಪಿ, ಆಗಸ್ಟ್ 09: ಕೊಂಕಣ್ ರೈಲ್ವೆ ತನ್ನ ಡೆಮು ರೈಲುಗಳನ್ನು ವಿಸ್ತರಿಸಿದೆ. ಗೋವಾ ಸರಕಾರದ ಬೇಡಿಕೆಯಂತೆ, ಸ್ಥಳೀಯ ಪ್ರಯಾಣಿಕರ ಅಗತ್ಯಗಳಿಗಾಗಿ ಆ.10ರಿಂದ ಕೊಂಕಣ ರೈಲು ಮಾರ್ಗದಲ್ಲಿ ಕರ್ನಾಟಕದ ಕಾರವಾರ ಹಾಗೂ ಗೋವಾದ ಪೆರ್ನಿಮ್ ನಡುವೆ ಎರಡು ಡೆಮು ರೈಲುಗಳು ಓಡಾಟ ನಡೆಸಲಿವೆ.

ಈ ರೈಲಿಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಪೆರ್ನಿಮ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು. ಡೀಸೆಲ್ ಮಲ್ಟಿಪಲ್ ಯೂನಿಟ್(ಡೆಮು) ರೈಲು ನಂ.70102 ಪ್ರತಿದಿನ ಬೆಳಗ್ಗೆ 6ಕ್ಕೆ ಕಾರವಾರದಿಂದ ಹೊರಟು ಬೆಳಗ್ಗೆ 10:30ಕ್ಕೆ ಪೆರ್ನಿಮ್ ತಲುಪಲಿದೆ. ಭಾನುವಾರ ಹೊರತುಪಡಿಸಿ ವಾರದ ಆರು ದಿನಗಳ ಕಾಲ ಮಡಗಾಂವ್ ಮಾರ್ಗವಾಗಿ ಸಂಚರಿಸಲಿದೆ.

Konkan Railways

ರೈಲು ನಂ.70101 ಪೆರ್ನಿಮ್ ನಿಲ್ದಾಣವನ್ನು ಸಂಜೆ 5:15ಕ್ಕೆ ಬಿಟ್ಟು ರಾತ್ರಿ 8:30ಕ್ಕೆ ಕಾರವಾರ ತಲುಪಲಿದೆ. ಡೆಮು ರೈಲು ನಂ.70103 ಪೆರ್ನಿಮ್‌ನಿಂದ ಬೆಳಗ್ಗೆ 10:40ಕ್ಕೆ ಹೊರಟು ಅಪರಾಹ್ನ 1:50ಕ್ಕೆ ಕಾರವಾರ ತಲುಪಲಿದೆ. ಅದೇ ರೀತಿ ರೈಲು ನಂ.70104 ಕಾರವಾರ ದಿಂದ ಅಪರಾಹ್ನ 2 ಗಂಟೆಗೆ ಹೊರಟು ಸಂಜೆ 5:10ಕ್ಕೆ ಪೆರ್ನಿಮ್ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.ಳ

ಎಲ್ಲಾ ಡೆಮು ರೈಲುಗಳು ಅಸ್ನೋಟಿ, ಲೊಲಿಯಮ್, ಕಾಣಕೊಣ, ಬಾಲಿ, ಮಡಗಾಂವ್, ಸುರವಲಿ, ಮಜೋರ್ಡಾ, ವರ್ಣಾ, ಕರ್ಮಾಲಿ, ಥಿವಿಂ ಮಾರ್ಗವಾಗಿ ಸಂಚರಿಸಲಿದೆ. (ಒನ್ ಇಂಡಿಯಾ ಸುದ್ದಿ)

English summary
Konkan Railway Corporation Ltd. (KRCL) has decided to extend the services of Karwar-Madgaon Diesel Multiple Unit (DEMU) till Pernem in Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X