ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಕ್ ಪ್ರಧಾನಿಗೆ ಬಂದಾಗ ಸುಮ್ಮನಿದ್ದವರಿಂದ ಪಿಣರಾಯ್ ಗೆ ವಿರೋಧ

|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಿಪಿಎಂ ಪಕ್ಷದ ಸೌಹಾರ್ದ ರ್ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ್ದ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಘೋಷಿಸಿದ್ದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕೆಂದು ಗುಡುಗಿದ್ದ ರಾಜ್ಯ ಸರ್ಕಾರದ ಆಹಾರ ಸಚಿವ ಯು.ಟಿ. ಖಾದರ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಿಣರಾಯ್ ವಿಜಯನ್ ಅವರ ಮಂಗಳೂರು ಭೇಟಿ ವಿರುದ್ಧ ಸಂಘ ಪರಿವಾರದ ಕಾರ್ಯಕರ್ತರು ಬಂದ್ ಗೆ ಕರೆ ನೀಡಿದ್ದರಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಆಗ್ರಹಿಸಿದ್ದರು.[ಚಪ್ಪಲಿಯಲ್ಲಿ ಹೊಡೆಯಬೇಕು, ಖಾದರ್ ಹೇಳಿಕೆ ವಿರುದ್ದ ತಿರುಗಿ ಬಿದ್ದ ಹಿಂದೂ ಸಂಘಟನೆಗಳು]

Khader justifies his Chappal slapping remark against Sangh Pariwar

ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪಾಕಿಸ್ತಾನದ ಪ್ರಧಾನಿ ಭಾರತಕ್ಕೆ ಬಂದಾಗ ಸುಮ್ಮನಿದ್ದ ಅವರು, (ಸಂಘ ಪರಿವಾರದವರು) ಈಗ ಕೇರಳದ ಮುಖ್ಯಮಂತ್ರಿ ಕನ್ನಡನಾಡಿಗೆ ಕಾಲಿಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ'' ಎಂದರು.['ವಿದೇಶಗಳಲ್ಲಿರುವ ಕನ್ನಡಿಗರೇ ಆಧಾರ್ ಬಳಿಸಿ ರೇಷನ್ ಕಾರ್ಡ್ ಪಡೆಯಿರಿ']

Khader justifies his Chappal slapping remark against Sangh Pariwar

ಅಲ್ಲದೆ, ''ಬಂದ್ ಗೆ ಕರೆ ನೀಡುವುದು ಸಂವಿಧಾನ ವಿರೋಧಿ ಚಟುವಟಿಕೆ. ಅಲ್ಲದೆ, ಬಂದ್ ಗೆ ಕರೆ ಕೊಟ್ಟವರು ಬಸ್ ಗಳಿಗೆ ಕಲ್ಲು ತೂರುವುದು, ಫ್ಲೆಕ್ಸ್ ಗಳಿಗೆ ಬೆಂಕಿ ಹಚ್ಚುವುದು ಮುಂತಾದ ಅಹಿತಕರ ಘಟನೆಗಳಿಗೆ ಪ್ರೇರೇಪಣೆ ನೀಡಿದ್ದು ತಪ್ಪು. ಹಾಗಾಗಿ, ನನ್ನಈ ಹೇಳಿಗೆ ಬಂದ್ ಗೆ ಕರೆ ಕೊಟ್ಟವರಿಗೆ ಮಾತ್ರ ಸೀಮಿತ'' ಎಂದು ತಿಳಿಸಿದರು.[ಪವಿತ್ರ ಕ್ಷೇತ್ರ ಮಕ್ಕಾದಲ್ಲಿ ಕರ್ನಾಟಕ ಸಂಘದಿಂದ ರಕ್ತದಾನ]

English summary
Karnataka Government's food and civil supply Minister U.T.Khader justified his 'slapping with slipper' remark against Sangha Pariwar activists who Called for a Bhandh in Dakshina Kannada on Feb. 25th Feb. to oppose the Kerala CM Pinarayi's presence in CPM party's function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X