ಹಜ್‌ಗೆ ತೆರಳಿದ್ದ ಕಾಸರಗೋಡಿನ ಯಾತ್ರಾರ್ಥಿ ಸಾವು

Written by: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕಾಸರಗೋಡು, ಸೆಪ್ಟೆಂಬರ್ 03 : ಹಜ್ ಒಂದು ಪವಿತ್ರ ಯಾತ್ರೆ. ಎಷ್ಟೋ ಮುಸ್ಲಿಮರು ಹಜ್ ಯಾತ್ರೆಗೆ ಹೋಗಲು ಇಚ್ಛಿಸುತ್ತಾರೆ. ಆದರೆ ಇಂತಹ ಪವಿತ್ರ ಯಾತ್ರೆಗೆ ತೆರಳಿದ ಕಾಸರಗೋಡು ಮೂಲದ ಯಾತ್ರಿಕರೊಬ್ಬರು ಸಾವನ್ನಪ್ಪಿದ್ದಾರೆ.

ಶುಕ್ರವಾರ ರಾತ್ರಿ ಮೆಕ್ಕಾದ ಕಿಂಗ್ ಅಬ್ದುಲ್ ಆಝೀಝ್ ಆಸ್ಪತ್ರೆಯಲ್ಲಿ ಕಾಸರಗೋಡು ನಿವಾಸಿ ಅಬೂಬಕ್ಕರ್ ( 73) ಮೃತಪಟ್ಟಿದ್ದಾರೆ. ಮೃತರು ಅಸೌಖ್ಯದಿಂದ ಬಳಲುತ್ತಿದ್ದರು, ಹಜ್ ಯಾತ್ರೆಯಲ್ಲೇ ಮರಣ ಹೊಂದಬೇಕು ಎಂದು ಬಯಸಿದ್ದರು ಎಂದು ತಿಳಿದುಬಂದಿದೆ. ಪತ್ನಿ ಸಮೇತರಾಗಿ ಅವರು ಮಕ್ಕಾ ಮದೀನಾ ಪ್ರವಾಸಕ್ಕೆ ತೆರಳಿದ್ದರು.[ಮಂಗಳೂರಲ್ಲಿ ಶೀಘ್ರವೇ ಹಜ್ ಭವನ ನಿರ್ಮಾಣ]

haj

ಆಗಸ್ಟ್ 4 ರಂದು ಅಬೂಬಕ್ಕರ್ ಅವರು ಕರ್ನಾಟಕದ ಮೊದಲ ಹಜ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಪವಿತ್ರ ಮದೀನಾದಲ್ಲಿ 8 ದಿನಗಳ ಕಾಲ ತಂಗಿದ್ದು, ಮದೀನಾ ಝೀಯಾರತ್ ನಡೆಸಿದ್ದರು. ನಂತರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.[ಹಜ್ ಯಾತ್ರೆಗೆ ರಾಜ್ಯದಿಂದ 5 ಸಾವಿರ ಯಾತ್ರಾರ್ಥಿಗಳು]

ಚಿಕಿತ್ಸೆ ಪಡೆದ ನಂತರ ಅವರು ಚೇತರಿಸಿಕೊಂಡಿದ್ದರು. ಆದರೆ, ಶುಕ್ರವಾರ ತೀರಾ ಅಸ್ವಸ್ಥತೆಯಿಂದಾಗಿ ಬಳಲುತ್ತಿರುವುದನ್ನು ಕಂಡು ಪುನಃ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

English summary
Kasaragod based Haj pilgrim Abubakar (73) has died of heart attack at Makkah.
Please Wait while comments are loading...