ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಅವ್ಯವಸ್ಥೆ ವಿರುದ್ಧ ಕರವೇ ಧರಣಿ

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)ಯ ಕಾರ್ಯಕರ್ತರು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಅವ್ಯವಸ್ಥೆಯನ್ನು ವಿರೋಧಿಸಿ ಗುರುವಾರ ಧರಣಿ ನಡೆಸಿದರು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ 6: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)ಯ ಕಾರ್ಯಕರ್ತರು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಅವ್ಯವಸ್ಥೆಯನ್ನು ವಿರೋಧಿಸಿ ಧರಣಿ ನಡೆಸಿದರು.

ಮಂಗಳೂರು ರೈಲ್ವೆ ವಿಭಾಗವು ಸಮಸ್ಯೆಯನ್ನು ಅರಿತುಕೊಂಡು ಅವುಗಳಿಗೆ ಪರಿಹಾರ ಕಲ್ಪಿಸಲು ವಿಫಲವಾಗಿದೆ. ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ತೆರೆಯಬೇಕು, ಬೆಂಗಳೂರು-ಮಂಗಳೂರು ಹಗಲು ಮತ್ತು ರಾತ್ರಿ ರೈಲು ಆರಂಭಿಸಬೇಕು. ಕಾರವಾರ-ಯಶವಂತಪುರ ಹಗಲು ರೈಲು ವಾರವಿಡೀ ಚಲಿಸುವಂತೆ ವ್ಯವಸ್ಥೆ ಕಲ್ಪಿಸಬೇಕು. ರೈಲ್ವೆ ನಿಲ್ದಾಣದಲ್ಲಿ ಕನ್ನಡಿಗ ಉದ್ಯೋಗಿಗಳನ್ನು ನಿಯುಕ್ತಿಗೊಳಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.[ಮಂಗಳೂರಲ್ಲಿ ಜಲಯುದ್ಧ, ಮೇಯರ್ ವಿರುದ್ಧ ಬಿಜೆಪಿ ಪ್ರತಿಭಟನೆ]

Karnataka Rakshana Vedike stage protest against Mangaluru central Railway

ಕರವೇ ಜಿಲ್ಲಾಧ್ಯಕ್ಷ ಅನಿಲ್ ದಾಸ್ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಧರಣಿ ನಡೆಸಿದರು.[ಮಂಗಳೂರು-ಬೆಂಗಳೂರು: ಏ. 9ರಂದು 'ಕುಡ್ಲ ಎಕ್ಸ್‌ಪ್ರೆಸ್‌'ಗೆ ಚಾಲನೆ]

ಸಹಾಯಕ್ಕೆ ಬಂದ್ ಪೊಲೀಸ್ ಮೇಲೆಯೇ ಹಲ್ಲೆ

ರಸ್ತೆ ಬದಿಯಲ್ಲಿ ಬಾಯ್ತೆರೆದಿದ್ದ ಹೊಂಡವೊಂದಕ್ಕೆ ಬಿದ್ದು ನರಳಾಡುತ್ತಿದ್ದ ಅಪರಿಚಿತ ಬೈಕ್ ಸವಾರನೊಬ್ಬನನ್ನು ಬೀಟ್ ಪೊಲೀಸರು ಎತ್ತಿ ಉಪಚರಿಸಿದರು. ಆದರೆ ಹೊಂಡದಿಂದ ಮೇಲೆದ್ದ ವ್ಯಕ್ತಿ ಪೋಲೀಸ್ ಕಾನ್‍ಸ್ಟೇಬಲ್‍ಗೆ ಕಪಾಳಕ್ಕೆ ಬಾರಿಸಿ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ ರಾತ್ರಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರಿನಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ ರಾತ್ರಿ 7.30ರ ಸಮಯದಲ್ಲಿ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಕೊಣಾಜೆ ಪೊಲೀಸ್ ಠಾಣಾ ಕಾನ್‍ಸ್ಟೇಬಲ್ ಆದರ್ಶ್ ಬೋಳಿಯಾರಿನಿಂದ ಬೈಕಿನಲ್ಲಿ ಮುಡಿಪು ಕಡೆಗೆ ಬರುತ್ತಿದ್ದ ವೇಳೆ, ಮುಡಿಪುವಿನಿಂದ ಬೋಳಿಯಾರ್ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವ ರಸ್ತೆಬದಿಯಲ್ಲಿ ಬಾಯ್ತೆರೆದಿದ್ದ ಹೊಂಡವೊಂದಕ್ಕೆ ಬಿದ್ದಿದ್ದ.

ಇದನ್ನು ಗಮನಿಸಿದ ಪೊಲೀಸ್ ಕಾನ್‍ಸ್ಟೇಬಲ್ ಆದರ್ಶ್ ಅವರು ಮಾನವೀಯತೆ ಮೆರೆದು ಸ್ಥಳೀಯರ ಸಹಕಾರದಿಂದ ಹೊಂಡಕ್ಕೆ ಬಿದ್ದ ವ್ಯಕ್ತಿ ಮತ್ತು ಆತನ ಬೈಕನ್ನು ಮೇಲಕ್ಕೆತ್ತಿದ್ದಾರೆ. ಮೇಲಕ್ಕೆ ಎದ್ದ ಬೈಕ್ ಸವಾರ ಏಕಾಏಕಿ ಕುಪಿತಗೊಂಡು ರಸ್ತೆ ಬದಿಯಲ್ಲಿ ಬಾಯ್ತೆರೆದಿರುವ ಹೊಂಡಗಳನ್ನು ನಿಮಗೆ ಮುಚ್ಚಿಸಲು ಸಂಕಟವೇ ಎಂದು ಗದರಿಸಿ ಪೊಲೀಸನ ಕೆನ್ನೆಗೆ ಬಾರಿಸಿದ್ದಾರೆ. ಮಾತ್ರವಲ್ಲ ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿಯಾಗಿದ್ದಾರೆ.

ರಾತ್ರಿ ವೇಳೆಯಾದುರಿಂದ ಹಲ್ಲೆಗೈದ ಆರೋಪಿಯ ಬೈಕ್ ನಂಬರನ್ನು ಕಂಡುಹಿಡಿಯಲು ಪೇದೆ ಆದರ್ಶ್‍ಗೆ ಸಾಧ್ಯವಾಗಿಲ್ಲ. ಆರೋಪಿಯ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧನಕ್ಕಾಗಿ ಬಲೆ ಬೀಸಲಾಗಿದೆ.

English summary
Karnataka Rakshana Vedike staged protest against Mangaluru Central Railway for demanding solutions to many prominent problems raising in Mangaluru Central Railway Station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X