ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಸೃಜನಾ, ರಾಧಿಕಾ, ಚೈತ್ರಾ ಟಾಪರ್ಸ್

ಇಂದು ಹೊರಬಿದ್ದ ಪಿಯುಸಿ ಫಲಿತಾಂಶದ ವಿಜ್ಞಾನ ವಿಭಾಗದಲ್ಲಿ ತುಮಕೂರು ಮೂಲದ ಸೃಜನಾ ಎನ್. 596 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದು, ಈಕೆ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 11: ಇಂದು ಹೊರಬಿದ್ದ ಪಿಯುಸಿ ಫಲಿತಾಂಶದ ವಿಜ್ಞಾನ ವಿಭಾಗದಲ್ಲಿ ತುಮಕೂರು ಮೂಲದ ಸೃಜನಾ ಎನ್. 596 (600) ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದು, ಈಕೆ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

ಈಕೆ ಗಳಿಸಿದ ಅಂಕಗಳು: ಭೌತಶಾಸ್ತ್ರ-100, ರಸಾಯನ ಶಾಸ್ತ್ರ- 100 , ಗಣಿತ- 100, ಕಂಪ್ಯೂಟರ್ ಸೈನ್ಸ್- 100, ಹಿಂದಿ- 99, ಇಂಗ್ಲಿಶ್- 97

karnataka 2nd PUC results: Mangaluru girls are toppers
karnataka 2nd PUC results: Mangaluru girls are toppers

ಭಾಷಾ ವಿಷಯಗಳಿಗೆ ಹೊರತು ಪಡಿಸಿದರೆ ಉಳಿದೆಲ್ಲ ವಿಷಯಗಳಲ್ಲೂ ಸೃಜನಾ ನೂರಕ್ಕೆ ನೂರು ಅಂಕ ಗಳಿಸಿ ಟಾಪರ್ ಆಗಿದ್ದಾರೆ.

karnataka 2nd PUC results: Mangaluru girls are toppers

ಹಾಗೆಯೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಧಿಕಾ ಪೈ ಸಹ ವಿಜ್ಞಾನ ವಿಭಾಗದಲ್ಲಿ 596 (600) ಅಂಕ ಗಳಿಸಿ ಟಾಪರ್ ಆಗಿದ್ದಾರೆ. ಇವರು ಗಂಗೊಳ್ಳಿಯ ಸರಸ್ವತಿ ಕಾಲೇಜು ವಿದ್ಯಾರ್ಥಿನಿ

ಕಲಾ ವಿಭಾಗದಲ್ಲಿಪ್ರಥಮ ಸ್ಥಾನ ಪಡೆದ ಚೈತ್ರಾ
ಕಲಾ ವಿಭಾಗದಲ್ಲಿ ಬಳ್ಳಾರಿಯ ಕೊಟ್ಟೂರಿನ ಇಂದು ಪಿ.ಯು.ಕಾಲೇಜಿನಲ್ಲಿ ಓದುತ್ತಿದ್ದ ಚೈತ್ರಾ, 589 (600) ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.

karnataka 2nd PUC results: Mangaluru girls are toppers

ವಾಣಿಜ್ಯ ವಿಭಾಗದಲ್ಲಿ ಪಿ.ಜಿ.ಶ್ರೀನಿಧಿಗೆ ಪ್ರಥಮ ಸ್ಥಾನ

ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಆರ್ ಎನ್ ಎಸ್ ಕಾಲೇಜಿನ ಪಿ.ಜಿ.ಶ್ರೀನಿಧಿ 595 (600) ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸತ್ಯಸಾಯಿ ಲೋಕಸೇವಾ ಕಾಲೇಜಿನ ಸಾಯಿ ಸಮರ್ಥ ಸಹ ವಾಣಿಜ್ಯ ವಿಭಾಗದಲ್ಲಿ 595 (600) ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

English summary
Karnataka 2nd PUC results: Srujana (Science), Radhika (Science), Chaitra (Arts), Shrininidhi (Commerce), Sai Samartha(Commerce) are the toppers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X