ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋರ್ಟ್ ಗೆ ಸೆಡ್ಡು, ಮಂಗ್ಳೂರಿನಲ್ಲಿ ಜ.28ರಂದು ಕಂಬಳ!

ಕಂಬಳದ ಬಗ್ಗೆ ಇನ್ನು ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿದ್ದರೂ ಸಹ ಕೋರ್ಟ್ ನ ವಿರೋಧದ ನಡುವೆಯೂ ಕಂಬಳವನ್ನು ಜನವರಿ 28ರಂದು ನೆಡೆಸಲು ದ.ಕ ಜಿಲ್ಲಾ ಕಂಬಳ ಸಮಿತಿ ಪಣ ತೊಟ್ಟಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ. 23 : ಜಲ್ಲಿಕಟ್ಟು ನಿಷೇಧ ತೆರವು ಬಳಿಕ ಕಂಬಳ ಪರ ಎದ್ದಿರುವ ದನಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದು ಇದೀಗ ಪಕ್ಷ, ಪ್ರಾಂತ ಭೇದವಿಲ್ಲದೆ ಬೆಂಬಲ ವ್ಯಕ್ತವಾಗುತ್ತಿದೆ.

"ಕಂಬಳಕ್ಕೆ ಬೆಂಬಲ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಂಬಳ ರಣಕಹಳೆ ಎದ್ದಿದೆ. ಜನವರಿ 30ರಂದು ಹೈಕೋರ್ಟ್ ನಲ್ಲಿ ಕಂಬಳದ ಬಗ್ಗೆ ವಿಚಾರಣೆ ನಡೆಯಲಿದೆ.[ಕಂಬಳ ಉಳಿಸಲು ಮಂಗಳೂರಲ್ಲಿ ಬೃಹತ್ ಹೋರಾಟಕ್ಕೆ ನಿರ್ಧಾರ!]

ಅದಕ್ಕೂ ಮೊದಲು ಕೋರ್ಟ್ ಗೆ ಸೆಡ್ಡು ಹೊಡೆದಿರುವ ಕಂಬಳ ಸಮಿತಿ ಜನವರಿ 28ರಂದು ಬೆಳಗ್ಗೆ 11. 30ಕ್ಕೆ ಜೋಡುಕೆರೆಯಲ್ಲಿ ಕಂಬಳವನ್ನು ನಡೆಸಿಯೇ ತೀರುತ್ತೇವೆ ಎಂದು ಪಣ ತೊಟ್ಟಿದೆ.

Kambala to be held on Jan 28 defying ban: Organisers

ಜನವರಿ 28ರಂದು ಬೆಳಗ್ಗೆಯಿಂದ ಸಂಜೆವರೆಗೆ ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿಯ ಮಂಗಳೂರು ಅಧ್ಯಕ್ಷ ಅಶೋಕ್ ರೈ ಹೇಳಿದ್ದಾರೆ.

ಜನವರಿ. 30ರಂದು ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದಲ್ಲಿ 250 ಕೋಣಗಳನ್ನು ಕೆರೆಗೆ ಇಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಈ ವೇಳೆ ರಾಜಕಾರಣಿಗಳು, ತುಳು ಚಿತ್ರ ನಟ ನಟಿಯರು ಸೇರಿದಂತೆ ಐವತ್ತು ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದೆ. ಹಾಗೆಯೇ ಇದೇ 24 ರಂದು ತುಳುನಾಡು ರಕ್ಷಣಾ ವೇದಿಕೆ ಸಹ ಪ್ರತಿಭಟನೆ ನಡೆಸಲಿದೆ ಎಂದರು.

English summary
Amid the raging protests over Jallikattu in neighbouring Tamil Nadu, organisers of 'Kambala' (buffalo race) in Karnataka today decided to hold the traditional sport in Mangaluru on January 28 in violation of court orders restraining the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X