ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದಾನಂದ ಗೌಡರಿಗೆ ಜನಾರ್ದನ ಪೂಜಾರಿ ಕೇಳಿದ್ದೇನು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 24 : 'ಬಯಲು ಸೀಮೆಯವರಿಗೆ ಮಾನವೀಯತೆಯಿಂದ ಎತ್ತಿನಹೊಳೆ ನೀರನ್ನು ಕೊಡಲು ಹೊರಟ ಡಿ.ವಿ.ಸದಾನಂದಗೌಡರೇ, ನಿಮಗೆ ಕರಾವಳಿ ಜನರ ಮೇಲೆ ಮಾನವೀಯ ದೃಷ್ಟಿ ಏಕಿಲ್ಲ?' ಎಂದು ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಪ್ರಶ್ನೆ ಮಾಡಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಎತ್ತಿನಹೊಳೆ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮಾನವೀಯ ದೃಷ್ಟಿಯಿಂದ ನೀರನ್ನು ಕೊಡಲು ಅನುಮತಿ ನೀಡಿದ್ದು, ಈ ಯೋಜನೆಗೆ ನಾನು ಬದ್ಧನಾಗಿದ್ದೇನೆ' ಎಂದು ಹೇಳಿರುವ ಸದಾನಂದ ಗೌಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]

janardhan poojary

'ಬಯಲು ಸೀಮೆಯವರಿಗೆ ಮಾನವೀಯತೆಯಿಂದ ಎತ್ತಿನಹೊಳೆ ನೀರನ್ನು ಕೊಡಲು ಹೊರಟ ಸದಾನಂದಗೌಡರೇ, ಕರಾವಳಿ ಜನರ ಮೇಲೆ ಮಾನವೀಯ ದೃಷ್ಟಿ ನಿಮಗೇಕಿಲ್ಲ?' ಎಂದು ಜನಾರ್ದನ ಪೂಜಾರಿ ಪ್ರಶ್ನಸಿದರು. [ಎತ್ತಿನಹೊಳೆ ಯೋಜನೆಗೆ ಕರಾವಳಿ ಜನರ ವಿರೋಧವೇಕೆ?]

'ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ ಮತ್ತು ವೀರಪ್ಪ ಮೊಯ್ಲಿಯವರು ಈ ಯೋಜನೆ ಬಗ್ಗೆ ಅಧ್ಯಯನ ಮಾಡದೇ ಅನುಮತಿ ನೀಡಿರುವುದು ಖೇದಕರವಾಗಿದೆ. ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ತಮ್ಮ ಜ್ಞಾನವನ್ನು ಯಾರಿಗೆ ಅಡವಿಟ್ಟಿದ್ದಾರೆ?' ಎಂದು ಪೂಜಾರಿ ವ್ಯಂಗ್ಯವಾಡಿದರು. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]

'ಎತ್ತಿನಹೊಳೆ ಯೋಜನೆಯಿಂದ ಏನು ತೊಂದರೆಯಿಲ್ಲ ಎನ್ನುವ ಇವರು ಕರಾವಳಿ ಜಲ ಕ್ಷಾಮದ ಬಗ್ಗೆ ಏಕೆ ಅರಿತಿಲ್ಲ, ಈಗ ಜಲಕ್ಷಾಮದ ಸಂದರ್ಭ ಎದುರಾಗಿದೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಳೆ ನೀರನ್ನು ಸಂಗ್ರಹಿಸುವ ಯೋಜನೆ ಮಾಡಿಲ್ಲ' ಎಂದು ಪೂಜಾರಿ ದೂರಿದರು. [ಎತ್ತಿನಹೊಳೆ ಯೋಜನೆಗೆ ಮತ್ತೆ ತಡೆಯಾಜ್ಞೆ]

ಏನಿದು ಯೋಜನೆ? : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ 7 ಜಿಲ್ಲೆಗಳ 28 ತಾಲ್ಲೂಕುಗಳ 68.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸರ್ಕಾರ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮದ ಮೂಲಕ ಅನುಷ್ಟಾನಗೊಳಿಸುತ್ತಿದೆ. ಈ ಯೋಜನೆಗೆ ಕರಾವಳಿ ಭಾಗದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

English summary
Senior Congress leader Janardhan Poojary slammed union law minister and former Karnataka chief minister D.V.Sadananda Gowda for his statement on the Yettinahole drinking water project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X