ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತನ್ವೀರ್ ಅಶ್ಲೀಲ ಚಿತ್ರ ವೀಕ್ಷಣೆ: ರಾಜೀನಾಮೆಗೆ ಪೂಜಾರಿ ಆಗ್ರಹ

ತನ್ವೀರ್ ಅಶ್ಲೀಲ ವೀಡಿಯೊ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸೇಠ್ ಅವರ ರಾಜೀನಾಮೆಯನ್ನು ತಕ್ಷಣ ಪಡೆಯಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 11 : ತನ್ವೀರ್ ಅಶ್ಲೀಲ ವೀಡಿಯೊ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸೇಠ್ ಅವರ ರಾಜೀನಾಮೆಯನ್ನು ತಕ್ಷಣ ಪಡೆಯಬೇಕು. ಎಂದು ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಅವರೇ, ನಿಮಗೆ ನೈತಿಕತೆಯಿದ್ದರೆ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ, ರಾಜೀನಾಮೆ ತೆಗೆದುಕೊಳ್ಳಲು ಆಗದಿದ್ದರೆ. ಅದನ್ನು ಜನತೆಯ ಮುಂದೆ ನೀವು ದುರ್ಬಲಾಗಿದ್ದೀರಿ ಎಂಬುದನ್ನು ಒಪ್ಪಿಕೊಳ್ಳಿ. ಈಗ ನೀವು ನಿದ್ದೆ ಮಾಡಿದರೆ ಚುನಾವಣೆ ಸಂದರ್ಭದಲ್ಲಿ ಜನರೇ ನಿಮಗೆ ನಿದ್ದೆ ಮಾಡುವಂತೆ ಮಾಡುತ್ತಾರೆ' ಎಂದು ಹೇಳಿದ್ದಾರೆ. [ಟಿಪ್ಪು ವೇದಿಕೆಯಲ್ಲೇ ಅರೆ ನಗ್ನ ಚಿತ್ರ ವೀಕ್ಷಿಸಿದ ತನ್ವೀರ್]

janradhana pujary

ಹೈಕಮಾಂಡ್ ದಿಗ್ವಿಜಯ್ ಸಿಂಗ್ ಅವರಿಂದ ಘಟನೆಗೆ ಸಂಬಂಧಿಸಿದಂತೆ ವರದಿ ಕೇಳಿದೆ. ಆದರೆ, ಈಗಾಗಲೇ ಮಾಧ್ಯಮದಲ್ಲಿ ಬಂದಿರುವುದರಿಂದ ಕಾಲಹರಣ ಮಾಡದೆ ತಕ್ಷಣ ರಾಜೀನಾಮೆ ಪಡೆದುಕೊಳ್ಳಲು ಸಿದ್ದರಾಮಯ್ಯಗೆ ಸೂಚನೆ ನೀಡಬೇಕೆಂದರು. ತನ್ವೀರ್ ಸೇಠ್ ನಿಮ್ಗೆ ಪಕ್ಷದ ಮೇಲೆ ಗೌರವವಿದ್ದರೆ ತಕ್ಷಣ ರಾಜೀನಾಮೆ ನೀಡಿ ಸಚಿವ ಸಂಪುಟದಿಂದ ಹೊರಗೆ ಬನ್ನಿ. ಆಗ ನಿಮ್ಮ ಮೇಲಿನ ಗೌರವ ಹೆಚ್ಚುತ್ತದೆ. ಉಡಾಫೆ, ನಿರ್ಲಕ್ಷ್ಯ ತೋರಿದರೆ ಜನರೇ ನಿಮಗೆ ಸರಿಯಾದ ಬುದ್ಧಿ ಕಲಿಸುತ್ತಾರೆ ಎಂದರು.

500 ಹಾಗೂ 1000 ನೋಟ್ ಗಳನ್ನು ಚಲಾವಣೆ ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಉದಾತ್ತವಾದ ಉದ್ದೇಶವನ್ನು ಪೂಜಾರಿ ಸ್ವಾಗತಿಸಿದ್ದಾರೆ. ಆದರೆ, ಹೊಸ ನೋಟುಗಳ ಮುದ್ರಣ ಹಾಗೂ ವಿತರಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆಯಲ್ಲಿ ಇವರ ಆಡಳಿತದ ಅನುಭವ ಎದ್ದುಕಾಣುತ್ತದೆ ಎಂದರು.['ಅಶ್ಲೀಲ ಮಂತ್ರಿ' ಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ: ಪುಟ್ಟಣ್ಣ]

ಪ್ರಧಾನಿಗೆ ಅನುಭವದ ಕೊರತೆ. ಈ ಹಿಂದೆ ನಾನು ಕೇಂದ್ರದ ವಿತ್ತ ಸಚಿವನಾಗಿದ್ದಾಗ ಚಿಲ್ಲರೆ ಅಭಾವವನ್ನು ಸಮರ್ಪಕವಾಗಿ ನಿವಾರಿಸಿದ್ದೇನೆ. ಪ್ರಸಕ್ತ ಜನರಿಗೆ ಹಣದ ಅಭಾವ ಉಂಟಾಗುವಂತೆ ಮಾಡಿ ತೊಂದರೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಜನಾರ್ದನ ಪೂಜಾರಿ ಆರೋಪಿಸಿದರು. ಈ ಯೋಜನೆಯಿಂದ ಕಳ್ಳ ನೋಟಿನ ದಂಧೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ ಎನ್ನುವ ವಿಶ್ವಾಸ ತನಗಿಲ್ಲ ಎಂದು ಸಹ ಹೇಳಿದರು.

English summary
Tanveer sait Semi-nude video case Tanveer Sait has asked to be dismissed from his cabinet told Congress leader b janardana Poojary. and obtain the resignation of the government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X