ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲಸಿನ ಖಾದ್ಯಗಳನ್ನು ಸವಿಯಲು ಪಿಲಿಕುಳಕ್ಕೆ ಬನ್ನಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 07 : ಹಲಸಿನ ಬೀಜದ ಸೂಪ್, ಹಲಸಿನ ಕಾಯಿ ಚಿಪ್ಸ್, ಹಪ್ಪಳ, ಹಲ್ವ ಮುಂತಾದ ಖಾದ್ಯಗಳ ರುಚಿ ನೋಡಲು ಮಂಗಳೂರಿಗೆ ಬನ್ನಿ. ಜುಲೈ 16 ಮತ್ತು 17 ರಂದು ಪಿಲಿಕುಳ ನಿಸರ್ಗಧಾಮದಲ್ಲಿ ಹಲಸು ಮೇಳವನ್ನು ಆಯೋಜಿಸಲಾಗಿದೆ.

ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮ, ಕೃಷಿ ಮತ್ತು ವಿಜ್ಞಾನ ಕೇಂದ್ರ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಎರಡು ದಿನಗಳ ಮೇಳವನ್ನು ಆಯೋಜನೆ ಮಾಡಲಾಗಿದೆ. [ರೈತರಿಗೆ ಶೇ 4ರ ಬಡ್ಡಿ ದರದಲ್ಲಿ ಕೃಷಿ ಸಾಲ]

Jackfruit mela

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಪಿಲಿಕುಳ ನಿಸರ್ಗಧಾಮದ ಮುಂಭಾಗದಲ್ಲಿ ಎರಡು ದಿನಗಳ ಕಾಲ ಹಲಸು ಮೇಳ ನಡೆಯಲಿದೆ. 31 ವಿವಿಧ ತಳಿಗಳ ಹಲಸಿನ ಗಿಡಗಳನ್ನು ಪಿಲಿಕುಳದಲ್ಲಿ ಬೆಳೆಸಲಾಗಿದ್ದು, ಮೂರು ವರ್ಷಗಳ ಅವಧಿಯಲ್ಲೇ ಕೆಲವುಗಳಲ್ಲಿ ಫಲ ಬಂದಿದೆ' ಎಂದು ಅವರು ಹೇಳಿದ್ದಾರೆ. [ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಹೋಗಿ ಬನ್ನಿ]

ಮೇಳದಲ್ಲಿ ಹಲಸಿನ ಬೇಸಾಯ ಕ್ರಮಗಳು ಮತ್ತು ಮೌಲ್ಯವರ್ಧನೆ ಬಗ್ಗೆ ಸಂವಾದವನ್ನು ಆಯೋಜಿಸಲಾಗಿದೆ. ಮಳೆಕೊಯ್ಲು ಮತ್ತು ನೀರಿಂಗಿಸುವ ಬಗ್ಗೆ ಜಲತಜ್ಞ ಶ್ರೀ ಪಡ್ರೆ ಅವರು ಮಾಹಿತಿಯನ್ನು ನೀಡಲಿದ್ದಾರೆ. ಬೆಳೆಗಾರರಿಗೆ ಮತ್ತು ಮಾರಾಟಗಾರರಿಗೆ ಮೇಳದಲ್ಲಿ ಉಚಿತ ಮಳಿಗೆಗಳನ್ನು ಒದಗಿಸಲಾಗುತ್ತದೆ. [ಅಳಿವಿನಂಚಿನತ್ತ ಮಲೆನಾಡಿನ ಕಾಡುಮಾವು]

ಹಲಸಿನ ಬೀಜದ ಸೂಪ್, ಹಲಸಿನ ಕಾಯಿ ಚಿಪ್ಸ್, ಹಪ್ಪಳ, ಮಂಚಿಯ ಕಜೆ ವೃಕ್ಷಾಲಯದ ಹಲಸಿನ ಐಸ್‌ಕ್ರೀಂ, ಹಲಸಿನ ಬೀಜದ ಕಾಫಿಯನ್ನು ಮೇಳದಲ್ಲಿ ಸವಿಯಬಹುದಾಗಿದೆ. ಹಲಸಿನ ಬೇಸಾಯ, ಗಿಡಗಳ ಕಸಿ ಕಟ್ಟುವ ಪ್ರಕ್ರಿಯೆ ಮುಂತಾದವುಗಳ ಬಗ್ಗೆ ಬೆಳೆಗಾರರಿಗೆ ಮಾಹಿತಿಯನ್ನು ನೀಡಲಾಗುತ್ತದೆ.

English summary
Pilikula Nisarga Dhama, Dakshina Kannada Zilla Panchayat and other organizations jointly organized Jackfruit festival at Pilikula Nisarga Dhama premises on July 16 and 17, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X