ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ಬುಕ್ ನಲ್ಲಿ ಪೇಜಾವರ ಶ್ರೀಗೆ ನಿಂದನೆ - ಉಡುಪಿ ಪೊಲೀಸರಿಗೆ ದೂರು

|
Google Oneindia Kannada News

ಮಂಗಳೂರು, ಜೂನ್ 29: ಕೃಷ್ಣ ಮಠದ ಇಫ್ತಾರ್ ಕೂಟ ಆಯೋಜಿಸಿ ಚರ್ಚೆಗೆ ಗ್ರಾಸವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳನ್ನು ನಿಂದಿಸಿರುವ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ.

ಇಫ್ತಾರ್ ಕೂಟ ಆಯೋಜಿಸಿ ಕೆಲವರ ಕೆಂಗಣ್ಣಿಗೆ ಗುರಿಯಾಗಿರುವ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬರು ತೀರಾ ನಿಂದನಾರ್ಹ ಪೋಸ್ಟ್ ಮಾಡಿದ್ದು ಬೆಳಕಿಗೆ ಬಂದಿದೆ.

ಹಿಂದೂಗಳ ಭಾವನೆಗೆ ನೋವಾಗಿದೆ, ಜುಲೈ 2ರ ಪ್ರತಿಭಟನೆ ಪಕ್ಕಾ: ಮುತಾಲಿಕ್ಹಿಂದೂಗಳ ಭಾವನೆಗೆ ನೋವಾಗಿದೆ, ಜುಲೈ 2ರ ಪ್ರತಿಭಟನೆ ಪಕ್ಕಾ: ಮುತಾಲಿಕ್

Iftar Party: derogatory post on Facebook about Sri Vishwesha Teertha Swamiji

ಬೆಂಗಳೂರು ಮೂಲದ ವಿವೇಕ್ ಕಡೇಮನಿ ಎಂಬಾತ ಪೇಜಾವರ ಶ್ರೀ ವಿರುದ್ಧ ತೀರಾ ನಿಂದನಾರ್ಹ ಬರಹ ಬರೆದಿದ್ದಾನೆ. ಇದರಿಂದ ಪೇಜಾವರ ಶ್ರೀ ಅಭಿಮಾನಿ ಹಾಗೂ ಬ್ಲಡ್ ದೊನೇಟಿಂಗ್ ಬಳಗದ ಮಂಗಳೂರು ಸದ್ಯಸರಾದ ಆರಿಫ್ ಹಾಗೂ ಅನ್ಸರ್ ಎಂಬವರು ವಿವೇಕ್ ಮಾಡಿರುವ ನಿಂದನಾರ್ಹ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೇಜಾವರ ಶ್ರೀಗಳು ಹಿಂದುತ್ವಕ್ಕಾಗಿ ಹೋರಾಟವೇ ನಡೆಸಿಲ್ಲವೇ ?ಪೇಜಾವರ ಶ್ರೀಗಳು ಹಿಂದುತ್ವಕ್ಕಾಗಿ ಹೋರಾಟವೇ ನಡೆಸಿಲ್ಲವೇ ?

ಶನಿವಾರ ಕೃಷ್ಣ ಮಠದಲ್ಲಿ ಪೇಜಾವರ ಶ್ರೀ ಇಫ್ತಾರ್ ಆಯೋಜಿಸಿದ್ದರು. ಇದರ ವಿರುದ್ಧ ಜುಲೈ 2 ರಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ಅಲ್ಲದೆ ಕೃಷ್ಣ ಮಠದಲ್ಲಿಇಫ್ತಾರ್ ಕೂಟಕ್ಕೆ ಅವಕಾಶ ಕಲ್ಪಿಸಿದ ಪೇಜಾವರ ಶ್ರೀ ನಡೆಯ ಬಗ್ಗೆ ಫೇಸ್ ಬುಕ್ ನಲ್ಲಿ ಪರ - ವಿರೋಧ ಚರ್ಚೆಯೂ ನಡೆಯುತ್ತಿದೆ. ಕೆಲವರು ಪೇಜಾವರ ಶ್ರೀ ನಡೆಗೆ ಬೆಂಬಲ ಕೂಡ ವ್ಯಕ್ತಪಡಿಸಿ ಕಂಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ನಿಂದನಾತ್ಮಕವಾಗಿ ಪೋಸ್ಟ್ ಮಾಡಿದ್ದು ಅದರಲ್ಲೊಬ್ಬರ ಮೇಲೆ ಇದೀಗ ಪೊಲೀಸ್ ದೂರು ದಾಖಲಾಗಿದೆ.

English summary
Iftar Party: Derogatory post on Facebook about Sri Vishwesha Teertha Swamiji of Pejawar Mutt. Complaint lodged at Udupi town police station against Vivek Kademani by Blood Donating Team Ansar and Arif.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X