ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರ ಕೋಣೆಯಲ್ಲಿ ನೇಣಿಗೆ ಶರಣಾದ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 12 : ಹಳೆಯಂಗಡಿಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮನೆಯವರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮೂಲ್ಕಿಯ ಹಳೆಯಂಗಡಿಯ ರಾಮನಗರದಲ್ಲಿ ಸೋಮವಾರ ಸನತ್ ಕುಮಾರ್ (28) ಆತ್ಮಹತ್ಯೆ ಮಾಡಿಕೊಂಡವರು. ಸನತ್ ಹಳೆಯಂಗಡಿಯಲ್ಲಿ ನವಮಿ ಎಂಬ ಫೈನಾನ್ಸ್ ಕಂಪನಿ ನಡೆಸುತ್ತಿದ್ದರು. ಸೋಮವಾರ ಎಂದಿನಂತೆಯೇ ಮಧ್ಯಾಹ್ನದ ವರೆಗೂ ಅವರು ಫೈನಾನ್ಸ್‌ನಲ್ಲಿದ್ದರು. [ಮುಸ್ಲಿಂ ಬಾಲಕನ ಪ್ರಾಣ ಉಳಿಸಿದ ಹಿಂದೂ ಯುವಕರು]

Sanath Kumar

ಮಧ್ಯಾಹ್ನ ಮನೆಗೆ ಹೋದ ಅವರು ಪಕ್ಕದ ಮನೆಯ ಶ್ರೀನಿವಾಸ್ ಭಟ್ ಎಂಬವರ ಮನೆಯ ದೇವರ ಕೋಣೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. 'ನನ್ನ ಸಾವಿಗೆ ನಾನೇ ಕಾರಣ ನನ್ನ ಮನೆಯವರಿಗೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಶ್ರೀನಿವಾಸ ಭಟ್ ಅವರ ಮನೆಯವರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು' ಎಂದು ಬರೆದಿದ್ದಾರೆ. [ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?]

ಶ್ರೀನಿವಾಸ್ ಭಟ್ ಅವರು ತಮ್ಮ ಮನೆಯ ಒಂದು ಕೀಯನ್ನು ಸನತ್ ಕುಮಾರ್ ಅವರ ಮನೆಯಲ್ಲಿ ಇಡುತ್ತಿದ್ದರು. ಅದನ್ನು ತಿಳಿದಿದ್ದ ಸನತ್ ಕುಮಾರ್ ಕೀ ಸಹಾಯದಿಂದ ಶ್ರೀನಿವಾಸ್ ಭಟ್ ಅವರ ಮನೆಗೆ ತೆರಳಿ, ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀನಿವಾಸ್ ಭಟ್ ಅವರ ಪತ್ನಿ ಆಶಾ ಸಂಜೆ 4.20ರ ಸುಮಾರಿಗೆ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೂಲ್ಕಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿನಿ ನೇಣಿಗೆ ಶರಣು : ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕಡಗೋಳಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿಯನ್ನು ಪ್ರಸಾದ್ ಮತ್ತು ಮಮತಾ ದಂಪತಿಯ ಪುತ್ರಿ ಪೂಜಾಶ್ರೀ ಎಂದು ಗುರುತಿಸಲಾಗಿದೆ.

ತುಂಬೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಪೂಜಾಶ್ರೀ ಸೋಮವಾರ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದಳು. ಊಟ ಮಾಡಿದ ಬಳಿಕ ಮನೆಯ ಕೊಠಡಿಯ ಬಾಗಿಲು ಹಾಕಿ ಮಲಗಿದ್ದವಳು ಸಂಜೆ 6 ಗಂಟೆಯಾದರೂ ಕೊಠಡಿಯ ಬಾಗಿಲು ತೆರೆಯದ ಕಾರಣ ಸಂಶಯಗೊಂಡ ಮನೆಯವರು ಕೊಠಡಿಯ ಕಿಟಕಿ ಮೂಲಕ ನೋಡಿದಾಗ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

English summary
Haleyangadi Hindu Jagarana Vedike president Sanath Kumar (28) committed suicide in his neighbour's house in Haleyangadi, Mangaluru on Monday, July 11, evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X