ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಷೇಧಾಜ್ಞೆ ನಡುವೆಯೂ ಬಂಟ್ವಾಳದಲ್ಲಿ ಹಿಂದೂ ಪರ ಸಂಘಟನೆಗಳಿಂದ ಧರಣಿ

|
Google Oneindia Kannada News

ಬಂಟ್ವಾಳ, ಜುಲೈ 07 : ಆರ್ ಎಸ್ ಎಸ್ ಮುಖಂಡ ಶರತ್ ಅವರ ಕೊಲೆ ಯತ್ನ ಖಂಡಿಸಿ ಇಂದು (ಶುಕ್ರವಾರ) ನಿಷೇಧಾಜ್ಞೆ ನಡುವೆಯೂ ಬಂಟ್ವಾಳದಲ್ಲಿ ಹಿಂದೂ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದರು.

144 ಸೆಕ್ಷನೆ ನಡುವೆ ಇಂದು ಹಿಂದೂ ಪರ ಸಂಘಟನೆಗಳು ನಡೆಸಿದ ಬೃಹತ್ ಪ್ರತಿಭಟನೆ ಯಶಸ್ವಿಯಾಗಿದೆ. ಪ್ರತಿಭಟನೆಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕದ ಪ್ರಭಾಕರ್ ಭಟ್ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಪ್ರತಿಭಟನೆ ಮಾಡಿದರು.

ಕರಾವಳಿಯಲ್ಲಿ ನಿಲ್ಲದ ಹಿಂಸಾಚಾರ, ಆರೆಸ್ಸೆಸ್ ಕಾರ್ಯಕರ್ತನಿಗೆ ಚೂರಿ ಇರಿತಕರಾವಳಿಯಲ್ಲಿ ನಿಲ್ಲದ ಹಿಂಸಾಚಾರ, ಆರೆಸ್ಸೆಸ್ ಕಾರ್ಯಕರ್ತನಿಗೆ ಚೂರಿ ಇರಿತ

ಬಂಟ್ವಾಳ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಸುಳ್ಯ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಸಂಘ ಪರಿವಾರದ ಕಾರ್ಯಕರ್ತರು ಈ ಪ್ರತಿಭಟನೆಗೆ ಬಂದಿದ್ದರು. ಮೂರು ಸಾವಿರಕ್ಕೂ ಹೆಚ್ಚು ಜನರು ಬಂಟ್ವಾಳ ಬಸ್‌ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಗೊಂಡ ಕಾರಣದಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

Hindu Hitarakshana Vedike to hold protest against murder attempt on RSS activist in Batwal

ಇದೇ ವೇಳೆ ಸಂಸದ ನಳೀನ್ ಕುಮಾರ್ ಕಟೇಲ್ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಹಾಗೂ ಸಹಸ್ರಾರು ಪ್ರತಿಭಟನೆಕಾರರನ್ನು ಬಂಧಿಸಿ 20 ಬಸ್ ಗಳಲ್ಲಿ ಕೊಂಡೊಯ್ದಿರು.

Hindu Hitarakshana Vedike to hold protest against murder attempt on RSS activist in Batwal

ಮುಂಜಾಗೃತವಾಗಿ ಬಂಟ್ವಾಳ ತಾಲೂಕಿನಾದ್ಯಂತ ಅರೆಸೇನಾ ಪೊಲೀಸರು ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಿಗಿ ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾಗಿದೆ. ಅಲ್ಲದೇ ಕಾನೂನು ಭಂಗ ಮಾಡುವವರ ವಿರುದ್ದ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ

English summary
The Hindu Hitarakshana Samiti staged a protest “B C Road Chalo” in spite of section 144 in force in Bantwal in connection with the assault on RSS volunteer Sharat, at B C Road here on July 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X