ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೈಟೆನ್ಶನ್ ತಂತಿ ತಗುಲಿ ಮಂಗಳೂರಿನಲ್ಲಿ ಯುವಕ ಸಾವು

ಬೋರ್ ವೆಲ್ ಪೈಪ್ ಹೊರತೆಗೆಯುವ ಕಾಮಗಾರಿ ವೇಳೆ ಹೈಟೆನ್ಶನ್ ತಂತಿ ತಗಲಿ ಕೊಣಾಜೆ ಅಡ್ಕರೆಪಡ್ಪು ನಿವಾಸಿ ಹಸೈನಾರ್ ಎಂಬವರ ಪುತ್ರ ಉಸ್ಮಾನ್ ಗುರುವಾರ ತಡರಾತ್ರಿ ಸಾವನ್ನಪ್ಪಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 14: ಬೋರ್ ವೆಲ್ ಪೈಪ್ ಹೊರತೆಗೆಯುವ ಕಾಮಗಾರಿ ವೇಳೆ ಹೈಟೆನ್ಶನ್ ತಂತಿ ತಗಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಟೆಕಾರು ಬೀರಿ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.

ಈ ಘಟನೆಯಲ್ಲಿ ಇನ್ನೋರ್ವ ಯುವಕ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಕೊಣಾಜೆ ಅಡ್ಕರೆಪಡ್ಪು ನಿವಾಸಿ ಹಸೈನಾರ್ ಎಂಬವರ ಪುತ್ರ ಉಸ್ಮಾನ್ (20) ಮೃತ ದುರ್ದೈವಿ. ಇನ್ನು ಕೊಣಾಜೆ ತಿಬ್ಲೆಪದವಿನ ಶರೀಫ್ (25) ಗಾಯಗೊಂಡಿದ್ದು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.[ಇಂಡಿಯನ್ ಮುಜಾಹಿದ್ದೀನ್ ಉಗ್ರರು ಮಂಗಳೂರಿನಿಂದ ಧಾರವಾಡ ಜೈಲಿಗೆ]

High-tension wire electrocutes youth, dies on spot

ಖಲೀಲ್ ಎಂಬವರು ಗುತ್ತಿಗೆ ಪಡೆದುಕೊಂಡಿದ್ದ ಕೋಟೆಕಾರು ಬೀರಿ ಸಮೀಪ ಬೋರ್ ವೆಲ್ ಪೈಪ್ ಹೊರತೆಗೆಯುವ ಕಾಮಗಾರಿಯಲ್ಲಿ 6 ಮಂದಿ ಕಾರ್ಮಿಕರು ನಿರತರಾಗಿದ್ದರು. ಈ ಸಂದರ್ಭ ಸುಮಾರು ನಾಲ್ಕು ಪೈಪುಗಳನ್ನು ಮೇಲಕ್ಕೆತ್ತಿದ್ದ ಉಸ್ಮಾನ್ ಮತ್ತು ಶರೀಫ್, ಐದನೇ ಪೈಪನ್ನು ಮೇಲಕ್ಕೆತ್ತುವ ಸಂದರ್ಭ ಪೈಪಿಗೆ ಮೇಲಿದ್ದ ಹೈಟೆನ್ಶನ್ ತಂತಿಗೆ ತಗುಲಿದ ಪರಿಣಾಮ ಶರೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಗಾಯಾಳು ಶರೀಫ್ ರನ್ನು ನಂತರ ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತ ಉಸ್ಮಾನ್ ಪೋಷಕರಿಗೆ ಓರ್ವನೇ ಪುತ್ರನಾಗಿದ್ದ. 9 ನೇ ತರಗತಿ ಮುಗಿಸಿದ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದ ಈತ ಕೂಲಿ ಕೆಲಸ ಇದ್ದಲ್ಲಿ ಮಾತ್ರ ತೆರಳುತ್ತಿದ್ದ. ಇತ್ತೀಚೆಗೆ ಹಲವು ಸಮಯಗಳಿಂದ ಮನೆಯಲ್ಲೇ ಉಳಿದುಕೊಂಡಿದ್ದಾತ ಬುಧವಾರದಂದು ಖಲೀಲ್ ಜತೆಗೆ ಬೋರ್ ವೆಲ್ ಪೈಪ್ ಹಿಂತೆಗೆಯುವ ಕಾಮಗಾರಿಯಲ್ಲಿ ಕೈಜೋಡಿಸಿಕೊಂಡಿದ್ದ. ಇದೀಗ ಆತ ಇಹಲೋಕವನ್ನೇ ತ್ಯಜಿಸಿದ್ದಾನೆ.[ಸೌಜನ್ಯ ಕೊಲೆ ಪ್ರಕರಣ: ಆರೋಪಿ ಸಂತೋಷ್‌ ರಾವ್‌ ಗೆ ಜಾಮೀನು]

ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೆ, ಗುತ್ತಿಗೆದಾರ ಖಲೀಲ್ ತಲೆಮರೆಸಿಕೊಂಡಿದ್ದಾರೆ.

ಬೋರ್ ವೆಲ್ ಪೈಪ್ ತೆಗೆಯುವ ವೇಳೆ ಗದಗದಲ್ಲಿ ಮಣ್ಣು ಕುಸಿದು ಮೂರು ಜನ ಸಾವನ್ನಪ್ಪಿರುವ ಘಟನೆ ಜನ ಮಾನಸದಿಂದ ಮರೆಯಾಗುವ ಮುನ್ನವೇ ಇದೀಗ ಮತ್ತೊಂದು ಬೋರ್ ವೆಲ್ ದುರಂತ ಸಂಭವಿಸಿದೆ.

ಕೊನೆಗೂ ' ಸಂಬಳ ವಿವಾದ' ಕ್ಕೆ ತೆರೆ ಎಳೆದ ಪುತ್ತೂರು ಶಾಸಕಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೊದಲೇ ವಿವಾದಗಳಿಗೆ ಹೆಸರುವಾಸಿ. ಇನ್ನು ಇತ್ತೀಚಿಗಂತೂ ಅತಿಥಿ ಉಪನ್ಯಾಸಕರಿಬ್ಬರಿಗೆ ಸಂಬಳ ನೀಡದಿರುವುದು ಭಾರೀ ವಿವಾದ ಸೃಷ್ಟಿಸಿತ್ತು. ಕೊನೆಗೂ ಈ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ.

High-tension wire electrocutes youth, dies on spot

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮನೋಶಾಸ್ತ್ರ ಉಪನ್ಯಾಸಕಿ ಏಂಜಲ್ ಮರಿಯ ಎಂಬುವವರಿಗೆ ಎಂಟು ತಿಂಗಳ ಸಂಬಳ 62,000 ರೂಪಾಯಿಯನ್ನು ನೀಡದೇ ಬಾಕಿ ಉಳಿಸಲಾಗಿತ್ತು. ಹಾಗೆಯೇ ಇಂಗ್ಲೀಷ್ ಉಪನ್ಯಾಸಕ ಭುವನೇಶ್ ಎಂಬುವವರಿಗೆ ಹತ್ತು ತಿಂಗಳ ಸಂಬಳ ರೂಪಾಯಿ 80,000 ಹಣವನ್ನ ಕೊಟ್ಟಿರಲಿಲ್ಲ. ಈ ಬಗ್ಗೆ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಗೆ ದೂರು ನೀಡಲಾಗಿತ್ತು.[ತುಳು ನಾಡಿಗೆ ಇಂದು ಹೊಸ ವರ್ಷದ 'ಬಿಸು ಪರ್ಬ']

ವಿಷಯ ತಿಳಿದ ಶಾಸಕಿ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಪ್ರಾಂಶುಪಾಲೆ ಮೇರಿಯವರನ್ನ ತರಾಟೆಗೆ ತೆಗೆದುಕೊಂಡರು. ಕೊನೆಗೂ ಪ್ರಾಂಶುಪಾಲೆ ಉಪನ್ಯಾಸಕಿ ಏಂಜಲ್ ಗೆ ಹಾಗೂ ಇಂಗ್ಲೀಷ್ ಉಪನ್ಯಾಸಕ ಭುವನೇಶ್ ರಿಗೆ ಎರಡು ಕಂತಿನಲ್ಲಿ ಚೆಕ್ ಮೂಲಕ ಸಂಬಳದ ಹಣ ನೀಡಲು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ' ತಾಂತ್ರಿಕ ಸಮಸ್ಯೆ ಯಿಂದ ಈ ರೀತಿ ಆಗಿದೆ. ಇಲಾಖೆಗೆ ಮಾಹಿತಿ ನೀಡಲಾಗಿದೆ' ಅಂದರು. ಇಬ್ಬರು ಉಪನ್ಯಾಸಕರಿಗೆ ಶೀಘ್ರವೇ ಸಂಬಳದ ಹಣ ಸಿಗಲಿದೆ ಎಂದು ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ. ಶೆಟ್ಟಿ, ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಕೂಡ ಆಗಿದ್ದಾರೆ. ಪದೇ ಪದೇ ಉಪ್ಪಿನಂಗಡಿ ಕಾಲೇಜು ವಿವಾದಗಳಿಗೆ ವಸ್ತುವಾಗುತ್ತಿರುವುದು ವಿದ್ಯಾರ್ಥಿಗಳಿಗೆ ಕಿರಿಕಿರಿಯನ್ನುಂಟು ಮಾಡಿದೆ.

English summary
A 20-year-old youth was died when he came in contact with high-tension wire while working on bore well pipeline at Kote-Beeri, outskirts of the Mangaluru city on Thursday mid night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X